ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಬಾಪೂಜಿ ಸೇವಾ ಕೇಂದ್ರಕ್ಕೆ ನೋಂದಣಿಯಾಗಬೇಕು ಇದರ ಲಾಗಿನ್ ಐ.ಡಿ ಪಡೆಯುವ ಸುಲಭ ವಿಧಾನ ಇಲ್ಲಿದೆ ನೋಡಿ.!

 

19 ಜುಲೈ, 2023 ರಂದು ಕರ್ನಾಟಕದ ಬಹು ನಿರೀಕ್ಷಿತ ಗ್ಯಾರಂಟಿ ಕಾರ್ಡ್ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಲಾಂಚ್ ಆಗಿದೆ. ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಈ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಕೆಲ ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳಾಗಲಿ ಅಥವಾ ಫಲಾನುಭವಿಗಳಿಗೆ ಉಂಟಾದ ಸಮಸ್ಯೆಗಳಾಗಲಿ ಮರುಳಿಸಬಾರದು ಎನ್ನುವ ಕಾರಣಕ್ಕಾಗಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯನ್ನು ಲಾಂಚ್ ಮಾಡಲಾಗುತ್ತಿದೆ.

ಮೊದಲಿಗೆ ಫಲಾನುಭವಿಯಾಗುವ ಕುಟುಂಬದ ಯಜಮಾನಿಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಪಡಿತರ ಚೀಟಿಯ ಸಂಖ್ಯೆಯನ್ನು 8147500500 ಈ ಸಂಖ್ಯೆಗೆ SMS ಕಳುಹಿಸಿ VM – SEVSIN ನಿಂದ ರಿಪ್ಲೈ ಬಂದ ಬಳಿಕ SMS ನಲ್ಲಿ ಸೂಚಿಸಿರುವ ದಿನಾಂಕಕ್ಕೆ, ಅದೇ ಸಮಯಕ್ಕೆ ಸರ್ಕಾರ ಸೂಚಿಸಿರುವ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಹೋಗಿ ಅರ್ಜಿ ಸಲ್ಲಿಸಬೇಕು.

ಈ ಬಾರಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಮತ್ತು ಬಾಪೂಜಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ನೀವು ನಿಮ್ಮ ಮೊಬೈಲ್ ಅಥವಾ ಪರ್ಸನಲ್ ಕಂಪ್ಯೂಟರ್ ಮೂಲಕವೇ ಬಾಪೂಜಿ ಸೇವಾ ಕೇಂದ್ರಕ್ಕೆ ರಿಜಿಸ್ಟರ್ ಆಗಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.

ಬಾಪೂಜಿ ಸೇವಾ ಕೇಂದ್ರಕ್ಕೆ ರಿಜಿಸ್ಟರ್ ಆಗಿ ಲಾಗಿನ್ ಪಡೆಯುವ ಸುಲಭ ವಿಧಾನ:-
● ಮೊದಲಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಥವಾ ನೀವು ಗೂಗಲ್ ಮೂಲಕ https://Bsk.karnataka.gov.in ಸರ್ಚ್ ಮಾಡಿ.
● ಮುಖಪುಟದ ಮೆನು ಬಾರ್ ನಲ್ಲಿ ನೋಂದಾಯಿಸಿ ಅಥವಾ ಲಾಗಿನ್ ಆಗಿ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

● ನಂತರ ನಿಮಗೆ Log in ಆಪ್ಷನ್ ಬರುತ್ತದೆ ನೀವು ಹೊಸದಾಗಿ ರಿಜಿಸ್ಟರ್ ಆಗುತ್ತಿದ್ದರೆ ಕೆಳಗಡೆ Register now ಎನ್ನುವ ಆಪ್ಷನ್ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
● ನಂತರ ನಿಮಗೆ ಎರಡು ಆಯ್ಕೆಗಳು ಕಾಣುತ್ತವೆ. ನೀವು ಇ-ಮೇಲ್ ಐಡಿ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಬಹುದು ಅಥವಾ ಮೊಬೈಲ್ ಸಂಖ್ಯೆ ಹಾಗೂ OTP ಮೂಲಕ ಲಾಗಿನ್ ಆಗಬಹುದು, ನಿಮಗೆ ಬೇಕಾದ ಆಪ್ಷನ್ ಮುಂದೆ ಕ್ಲಿಕ್ ಮಾಡಿ.

● ಮೊದಲಿಗೆ ನಿಮ್ಮ ಹೆಸರು, ಗ್ರಾಮ, ಮುಂತಾದ ಬೇಸಿಕ್ ಇನ್ಫಾರ್ಮಶನ್ ಕೇಳಲಾಗುತ್ತದೆ, ನಂತರ ಮೊಬೈಲ್ ಸಂಖ್ಯೆ ಕೇಳಲಾಗುತ್ತದೆ ಅದನ್ನು ಸಲ್ಲಿಸಿ OTP ಗೆ ರಿಕ್ವೆಸ್ಟ್ ಕೊಡಿ.
● ಮೊಬೈಲ್ ಗೆ ಬಂದಿರುವ OTP Enter ಮಾಡಿ Verify ಆದಮೇಲೆ Submit ಕೊಡಿ.
● ನಿಮ್ಮ ಪ್ರಕ್ರಿಯೆ ಸರಿಯಾಗಿ ಪೂರ್ತಿ ಗೊಂಡಿದ್ದರೆ ಮುಖಪುಟದ ಬಲ ಭಾಗದ ಮೇಲೆ Registration succesfully ಎಂದು ಹಸಿರು ಬಣ್ಣದಲ್ಲಿ ನೋಟಿಫಿಕೇಶನ್ ಬ್ಲಿಂಕ್ ಆಗುತ್ತಿರುತ್ತದೆ.

● ಹಿಂದಿನ ಮೆನುವಿಗೆ ಬನ್ನಿ Log in ಆಪ್ಷನ್ ಇರುವ ಕಡೆ ನಿಮ್ಮ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ Send OTP ಕ್ಲಿಕ್ ಮಾಡಿ.
● OTP ಯನ್ನು ಎಂಟ್ರಿ ಮಾಡಿ ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಿ ಲಾಗಿನ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಇದಾದ ಮೇಲೆ ನೀವು ಬಾಪೂಜಿ ಸೇವಾಕೇಂದ್ರಕ್ಕೆ ಲಾಗಿನ್ ಆಗಿರುತ್ತೀರಾ, ನಿಮ್ಮ ಹೆಸರು ಕೂಡ ಮುಖಪುಟದಲ್ಲಿ ಬರುತ್ತದೆ. ಎಲ್ಲಾ ಸೇವೆಗಳ ವಿವರ ಕೂಡ ಇರುತ್ತದೆ ಗೃಹಲಕ್ಷ್ಮಿ ಯೋಜನೆಗೆ ಅನುಮತಿ ಸಿಕ್ಕ ನಂತರ ಆ ಆಯ್ಕೆ ಕೂಡ ಬರುತ್ತದೆ. ಆಗ ಅದನ್ನು ಕ್ಲಿಕ್ ಮಾಡಿ ಮುಂದಿನ ಹಂತಗಳನ್ನು ಪೂರೈಸಿ ಅರ್ಜಿ ಸಲ್ಲಿಸಬಹುದು.

Leave a Comment

%d bloggers like this: