ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ (Karnataka government Guarantee Scheme) ಗೃಹಲಕ್ಷ್ಮಿ (Gruhalakshmi) ಯೋಜನೆಗೆ ಜುಲೈ 19 ರಿಂದ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಸರ್ಕಾರ ಸೂಚಿಸುವ ಸೇವಾ ಕೇಂದ್ರಗಳಾದ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಕೇಂದ್ರಗಳಲ್ಲಿ ಫಲಾನುಭವಿಗಳು ಹೋಗಿ ಅರ್ಜಿ ಸಲ್ಲಿಸಬಹುದು.
ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಗೂ ಕೂಡ 2000 ಸಹಾಯಧನವನ್ನು ನೀಡುವ ಉದ್ದೇಶವನ್ನು ಹೊಂದಿರುವ ಈ ಯೋಜನೆಗೆ ಸರ್ಕಾರಿ ಉದ್ಯೋಗ ಹೊಂದಿರುವ ಆದಾಯ ತೆರಿಗೆ ಸಲ್ಲಿಸುವ GST ಪೇಯರ್ಸ್ ಕುಟುಂಬದ ಮಹಿಳಾ ಮುಖ್ಯಸ್ಥರು ಹೊರತುಪಡಿಸಿ ಕರ್ನಾಟಕದ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬದ ಯಜಮಾನಿಯು (head of the family) ಅರ್ಜಿ ಸಲ್ಲಿಸಬಹುದು.
ಮೊಬೈಲ್ ಮೂಲಕ ಕೇವಲ 5 ನಿಮಿಷದಲ್ಲಿ ಕಲರ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನ
ಈ ಯೋಜನೆಗೆ ಆದೇಶ ಪತ್ರ ಜಾರಿಯಾದಾಗ ಆಗಸ್ಟ್ 15ರಂದು ಯೋಜನೆ ಲಾಂಚ್ (launch date) ಆಗುತ್ತದೆ. ಸ್ವಾತಂತ್ರ ದಿನಾಚರಣೆ (Independence day) ಪ್ರಯುಕ್ತ ಮಾನ್ಯ ಮುಖ್ಯಮಂತ್ರಿಗಳು ಯೋಜನೆ ಲಾಂಚ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಇತ್ತೀಚೆಗೆ ಬಂದಿರುವ ಪ್ರಕಾರ ಆಗಸ್ಟ್ 20ನೇ ತಾರೀಕು ರಾಹುಲ್ ಗಾಂಧಿ ಅವರ ಹುಟ್ಟುಹಬ್ಬ (Rahul Gandhi birthday) ಇರುವ ಪ್ರಯುಕ್ತ ವಿಶೇಷವಾಗಿ ಆ ದಿನದಂದು ಗೃಹಲಕ್ಷ್ಮಿ ಯೋಜನೆ ಲಾಂಚ್ ಮಾಡಲು ನಿರ್ಧರಿಸಲಾಗಿದೆಯಂತೆ.
ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕ ವಾದ್ರ (Priyanka Vadra) ಅವರಿಗೂ ಕೂಡ ಆ ದಿನದಂದು ರಾಜ್ಯಕ್ಕೆ ಆಗಮಿಸಿ ಯೋಜನೆ ಲಾಂಚ್ ಮಾಡಲು ಆಹ್ವಾನ ನೀಡಲಾಗಿದೆಯಂತೆ. ಬೆಳಗಾವಿಯಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ ಈ ಮೂಲಕ ದೇಶಕ್ಕೆ ಒಂದು ಸಂದೇಶ ನೀಡಬೇಕು ಎಂದು ರಾಜ್ಯ ಸರ್ಕಾರ ಪ್ಲಾನ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (DCM D.K Shivakumar) ಅವರು ಸಹ ಮಾತನಾಡಿ ರಾಜ್ಯದಲ್ಲೂ ಕೂಡ ಪ್ರತಿ ಹಳ್ಳಿಹಳ್ಳಿಗೂ ಕಾರ್ಯಕ್ರಮವನ್ನು ಮುಟ್ಟಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಹಾಗೂ ಮಹಾನಗರಗಳ ಪಾಲಿಕೆ ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ ಪಕ್ಷಾತೀತವಾಗಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳನ್ನು ಸೇರಿಸಿ ಸಂಭ್ರಮಾಚರಣೆ ಮಾಡಲು ಕೂಡ ನಿರ್ಧರಿಸುತ್ತೇವೆ.
ನಂತರ ಆಗಸ್ಟ್ 21ರಂದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗಲಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 1.03 ಕೋಟಿ ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅರ್ಜಿ ಸಲ್ಲಿಸಲು ಯಾವುದೇ ಕಡೆ ದಿನಾಂಕ ಇರುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದೀರ ಎಂದು ಚೆಕ್ ಮಾಡುವ ವಿಧಾನ:-
● ಈಗಾಗಲೇ ಅರ್ಜಿ ಸಲ್ಲಿಸುವವರಿಗೆ ಗೃಹಲಕ್ಷ್ಮಿ ಯೋಜನೆ ಮಂಜೂರು ಪತ್ರ ಕೂಡ ವಿತರಣೆಯಾಗಿದೆ. ಆದರೆ ಕೆಲವೆಡೆ ತಾಂತ್ರಿಕ ದೋಷದಿಂದಾಗಿ ಮಂಜೂರಾತಿ ಪತ್ರ ಸಿಕ್ಕಿಲ್ಲ.
● ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಫಲಾನುಭವಿಗಳ ಲಿಸ್ಟ್ ನಲ್ಲಿ ಇದ್ದೀರಾ ಇಲ್ಲವೋ ಎಂದು ಅನುಮಾನಗಳಿದ್ದರೆ ಸರ್ಕಾರದ ಸಹಾಯವಾಣಿಯಾದ (help line num.) 8147500500 ಈ ಸಂಖ್ಯೆಗೆ ಕುಟುಂಬದ ಮಹಿಳಾ ಮುಖ್ಯಸ್ಥರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಪಡಿತರ ಚೀಟಿ ಸಂಖ್ಯೆಯನ್ನು SMS ಕಳುಹಿಸುವ ಮೂಲಕ ಚೆಕ್ ಮಾಡಿಕೊಳ್ಳಬಹುದು.
● ಗೃಹಲಕ್ಷ್ಮಿ ಯೋಜನೆಗೆ ನಿಮ್ಮ ಅರ್ಜಿ ಸಲ್ಲಿಕೆಯಾಗಿದ್ದರೆ ಕರ್ನಾಟಕ ಸರ್ಕಾರದ ವತಿಯಿಂದ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂದು ಅರ್ಜಿ ಸಂಖ್ಯೆ ಸಮೇತ ನಿಮ್ಮ SMS ಗೆ ರಿಪ್ಲೈ ಬಂದಿರುತ್ತದೆ. ಈ ರೀತಿ ಬಂದರೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ರೂ. 2000 ಸಹಾಯಧನ ಬರುವುದು ಫಿಕ್ಸ್.
ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಬಾಕಿ ಇದೆ. ದಯವಿಟ್ಟು ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ಕೊಡಿ ಕರ್ನಾಟಕ ಸರ್ಕಾರ ಎಂದು SMS ಬಂದಿರುತ್ತದೆ ಆಗ ನೀವು ತಪ್ಪದೇ ಮತ್ತೆ ಅರ್ಜಿ ಸಲ್ಲಿಸಬೇಕು.