ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus bike) ಮಾರುಕಟ್ಟೆಯಲ್ಲಿ ಪರಿಚಯವಾಗಿ ಸಾಕಷ್ಟು ವರ್ಷವಾದರೂ ಇನ್ನೂ ಬೇಡಿಕೆಯಲ್ಲಿರುವ ಮಾಡೆಲ್ ಆಗಿದೆ. ಭಾರತದಂತಹ ಜನಸಂಖ್ಯೆ ಅಧಿಕವಾಗಿರುವ ದೇಶದಲ್ಲಿ ಸಹಜವಾಗಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಮತ್ತು ಇವರು ತಮ್ಮ ಅನುಕೂಲಕ್ಕಾಗಿ ಹಾಗೂ ಆಕರ್ಷಣೆಯಿಂದ ಬೈಕ್ ಗಳನ್ನು ಕೊಂಡುಕೊಳ್ಳುತ್ತಾರೆ.
ಹೀಗಾಗಿ ನಮ್ಮ ದೇಶವು ಯಾವುದೇ ಕಂಪನಿಯ ಪ್ರಾಡಕ್ಟ್ ಗಳಿಗೆ ಬಹಳ ಉತ್ತಮ ವೇದಿಕೆ ಎನ್ನಬಹುದು. ಇದನ್ನು ಉಪಯೋಗಿಸಿಕೊಂಡು ಮೋಟಾರ್ ಕ್ಷೇತ್ರದಲ್ಲಿ ಕೂಡ ಬೇರೆ ಬೇರೆ ಮೋಟಾರ್ ಕಂಪನಿಗಳು (motor companies) ಸಾಕಷ್ಟು ವೈಶಿಷ್ಟ್ಯತೆಗಳನ್ನು ಪರಿಚಯಿಸಿ ಕಾಂಪಿಟೇಶನ್ ನೀಡುತ್ತಿವೆ.
ಆದರೆ ಹೀರೋ ಕಂಪನಿಯ ಪ್ರಾಡಕ್ಟ್ ಗಳಿಗೆ ಅದು ಪರಿಚಯಿಸುವ ಮಾಡಲ್ ಗಳಿಗೆ ಸದಾ ಕಾಲ ಬೇಡಿಕೆ ಇರುತ್ತದೆ. ಇದಕ್ಕೆ ಕಾರಣ ಆ ಬೈಕ್ ನ ಲುಕ್, ಫೀಚರ್ ಜೊತೆಗೆ ಕೈಕೆಟ್ಟುವ ಬೆಲೆಗಳು ಕೂಡ ಕಾರಣವಾಗಿದೆ. ಪ್ರಸ್ತುತವಾಗಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಸುಮಾರು ರೂ.80,000 ಗಳಿಂದ ರೂ.90,000 ವರೆಗೆ ಎಕ್ಸ್ ಶೋರೂಮ್ ಬೆಲೆ (X showroom price) ಯನ್ನು ಹೊಂದಿದೆ.
ಇದರ ಜೊತೆ ಖರೀದಿಸುವಾಗ ಆನ್ ರೋಡ್ ಪ್ರೈಸ್ (on road price) ಸೇರಿ ಹೆಚ್ಚು ಕಡಿಮೆ ಒಂದು ಲಕ್ಷ ರೂಪಾಯಿಗಳ ವರೆಗೆ ಆಗಬಹುದು ಎಂದು ಅಂದಾಜಿಸಬಹುದು. ಎಲ್ಲರಿಗೂ ಈ ಹಣವನ್ನು ಕೊಟ್ಟು ಕರಗಿಸಲು ಸಾಧ್ಯವಿರುವುದಿಲ್ಲ ಜೊತೆಗೆ ಹೀರೋ ಕಂಪನಿಯ ಬೈಕ್ ಮೇಲೆ ಕ್ರೇಝ್ ಕೂಡ ಇರುತ್ತದೆ.
ಅದರ ಬಗ್ಗೆ ನೀವು ಬೇಜಾರ್ ಮಾಡಿಕೊಳ್ಳುವ ಅಗತ್ಯ ಇಲ್ಲ ಆನ್ಲೈನ್ ಮೂಲಕ ಅತ್ಯುತ್ತಮ ಕಂಡೀಶನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನು (Second Hand Bikes) ಅತಿ ಕಡಿಮೆ ಬೆಲೆಗೆ ಕೂಡ ಖರೀದಿ ಮಾಡಲು ಸಾಧ್ಯವಿದೆ. ನೀವು ಪ್ರತಿನಿತ್ಯ ಕಾಲೇಜು ಅಥವಾ ಕಚೇರಿಗೆ ಓಡಾಡಲು ಬೈಕ್ ಖರೀದಿಸಲು ಇಚ್ಚಿಸಿದ್ದರೆ ಉತ್ತಮ ಕಂಡಿಶನ್ (good condition) ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಬೈಕ್ (second hand bike purchase) ಖರೀದಿ ಮಾಡಬಹುದು ಒಳ್ಳೆಯ ಆಯ್ಕೆ.
ಇದರಿಂದ ನಿಮಗೆ ವೆಚ್ಚವು ಕಡಿಮೆ, ಜೊತೆಗೆ ಕಡಿಮೆ ಬೆಲೆಯಲ್ಲಿ ಉತ್ತಮ ಬೈಕ್ ಕೂಡ ಮನೆಗೆ ಕೊಂಡೊಯ್ದ ಸಮಾಧಾನ ಕೂಡ ಸಿಗುತ್ತದೆ. ಇದು ನಿಮಗೆ ಒಪ್ಪಿಗೆ OLX ನಲ್ಲಿ ಮಾರಾಟ 2020 ರ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ನೀವು OLX ವೆಬ್ಸೈಟ್ನಲ್ಲಿ ಖರೀದಿ ಮಾಡಬಹುದು ಇದಕ್ಕೆ ಕೇವಲ ರೂ.50,000ಗಳನ್ನು ನಿಗದಿಪಡಿಸಲಾಗಿದೆ.
ಕಾರ್ ದೇಖೋ ವೆಬ್ ಸೈಟ್ (Car dekho website) ನಲ್ಲಿ ಕೂಡ ಕಡಿಮೆ ಬೆಲೆಯ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ರೂ.30,000 ಗಳನ್ನು ಕೊಟ್ಟು ಖರೀದಿಸಬಹುದು. ಈ ಬೈಕ್ ಗಳು ಸೆಕೆಂಡ್ ಹ್ಯಾಂಡ್ (second hand bike) ಆಗಿದ್ದರೂ ಕೂಡ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ. ಸುಮಾರು 50km – 60kmಮೈಲೇಜ್ (mileage) ಕೊಡುವ ಸಾಮರ್ಥ್ಯವನ್ನು ಹೊಂದಿದೆ.
ನೀವು ಈ ವೆಬ್ಸೈಟ್ ಗಳಿಕೆ ಭೇಟಿ ಕೊಟ್ಟು ನೇರವಾಗಿ ಮಾರಾಟಗಾರರ ಜೊತೆಗೆ ಮಾತನಾಡಿ ಮಾಹಿತಿ ಪಡೆದು ಸಾಧ್ಯವಾದರೆ ನೇರವಾಗಿ ಬೈಕ್ ನೋಡಿದ ನಂತರ ವ್ಯವಹಾರ ಮಾಡಿ, ಆನ್ಲೈನ್ ವ್ಯವಹಾರಗಳ ಬಗ್ಗೆ ಎಚ್ಚರಿಕೆಯಿಂದಲೂ ಇರಿ ಕೆಲಸ ಸಂದರ್ಭಗಳಲ್ಲಿ ವಂ’ಚ’ನೆಯಾಗುವ ಸಾಧ್ಯತೆಯೂ ಇರುತ್ತದೆ.