ಹಿಂದೂ ಉತ್ತರಾದಿತ್ವದ ಕಾಯ್ದೆ 1956 ರ ಪ್ರಕಾರ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಹೆಣ್ಣು ಮಗಳು ಭಾಗಾಂಶವನ್ನು ಹೊಂದಿರುತ್ತಾಳೆ. 2006ರಲ್ಲಿ ಈ ಕಾನೂನು ತಿದ್ದುಪಡಿ ಆಗಿದೆ. 2006ರಲ್ಲಿ ಆದ ತಿದ್ದುಪಡಿ ನಂತರ ಒಬ್ಬ ತಂದೆಯ ಪಿತ್ರಾಜಿತ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನ ಹಕ್ಕುದಾರರಾಗಿರುತ್ತಾರೆ.
2006ರ ತಿದ್ದುಪಡಿ ನಂತರ ತಂದೆಯ ಪಿತ್ರಾರ್ಜಿತ ಆಸ್ತಿ ಮಾತ್ರವಲ್ಲದೇ ಸ್ವಯಾರ್ಜಿತ ಆಸ್ತಿಯಲ್ಲೂ ಕೂಡ ತಂದೆಯು ಅವರ ನಂತರ ಅದು ಯಾರಿಗೆ ಹೋಗಬೇಕು ಎಂದು ಸೂಚಿಸದೆ ಮ’ರ’ಣ ಹೊಂದಿದ್ದಲ್ಲಿ ಆ ಆಸ್ತಿಯಲ್ಲೂ ಕೂಡ ಸಮಾನ ಹಕ್ಕುದಾರರಾಗಿರುತ್ತಾರೆ.
ಆದರೆ ಕೆಲವೊಂದು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಪಾಲಿನ ಸ್ವಯಾರ್ಜಿತ ಆಸ್ತಿಯಲ್ಲಾಗಲಿ ಪಿತ್ರಾರ್ಜಿತ ಆಸ್ತಿಯಲ್ಲಾಗಲಿ ಯಾವುದೇ ಪಾಲು ಸಿಗುವುದಿಲ್ಲ ಮತ್ತು ಕೆಲವೊಂದು ಕಾರಣಗಳಿಂದ ಆಸ್ತಿ ಸಿಕ್ಕಿದರು ಅದನ್ನು ಕಳೆದುಕೊಳ್ಳುತ್ತಾರೆ ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಮೇಲೆ ತಿಳಿಸಿದಂತೆ 1950 ಹಿಂದೂ ಉತ್ತರಾದಿತ್ವ ಕಾಯ್ದೆ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆ ಹೊಂದಿದ್ದ ಪಾಲಿನಲ್ಲಿ ಮಾತ್ರ ಹೆಣ್ಣು ಮಗಳು ಪಾಲು ಹೊಂದಿದ್ದಳು ಆದರೆ 2006ರ ತಿದ್ದುಪಡಿ ನಂತರ ಇದು ಬದಲಾಗಿದ್ದರು 2006ಕ್ಕೂ ಮುಂಚೆ ಆ ಆಸ್ತಿಯು ರಿಜಿಸ್ಟರ್ ಆಗಿ ಹೋಗಿದ್ದರೆ ಅಂತಹ ಆಸ್ತಿಗಳಲ್ಲಿ ಹೆಣ್ಣು ಮಕ್ಕಳು ಈಗ ಭಾಗ ಕೇಳಲು ಆಗುವುದಿಲ್ಲ.
ಹೆಣ್ಣು ಮಗಳು ತನ್ನ ತವರು ಮನೆ ಆಸ್ತಿ ಬೇಡ ಎಂದು ಹಕ್ಕು ಬಿಡುಗಡೆ ಪತ್ರ ಮಾಡಿದ್ದರೆ ಅಥವಾ ಅದಕ್ಕೆ ಸರಿಸಮವಾಗಿ ಬೇರೆ ಏನನ್ನಾದರೂ ಪಡೆದು ಆಸ್ತಿ ಹಕ್ಕನ್ನು ತ್ಯಾಗ ಮಾಡಿದ್ದರೆ ಮತ್ತೆ ಆಕೆ ಆಸ್ತಿ ಬೇಕು ಎಂದು ಕೇಳಲು ಆಗುವುದಿಲ್ಲ. ತಂದೆಯು ಜೀವಂತ ಇರುವಾಗಲೇ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ, ಪಾಲು ಕೇಳಲು ಯಾವುದೇ ಹಕ್ಕು ಇರುವುದಿಲ್ಲ.
ತಾಯಿಗೆ ತಾಯಿಯ ತವರು ಮನೆ ಕಡೆಯಿಂದ ಉಡುಗೊರೆ ರೂಪದಲ್ಲಿ ಅಥವಾ ವಿಭಾಗದ ಮೂಲಕ ಆಸ್ತಿ ಬಂದಿದ್ದರೆ ತಾಯಿ ಬದುಕಿರುವಾಗಲೇ ಅದರಲ್ಲಿ ಪಾಲು ಕೇಳಲು ಹೆಣ್ಣು ಮಕ್ಕಳಿಗಾಗಲಿ ಗಂಡು ಮಕ್ಕಳಿಗಾಗಲಿ ಹಕ್ಕು ಇರುವುದಿಲ್ಲ.
ತಂದೆಯು ಪಿತ್ರಾರ್ಜಿತ ಆಸ್ತಿಯಲ್ಲಿನ ತನ್ನ ಪಾಲನ್ನು ಯಾರಿಗೆ ಸೇರಬೇಕು ಎಂದು ವಿಲ್ ಮಾಡಿಟ್ಟಿದ್ದರೆ ಅಥವಾ ಸ್ವಯಾರ್ಜಿತವಾದ ತಮ್ಮ ಆಸ್ತಿಯನ್ನು ತಮ್ಮ ನಂತರ ಯಾರಿಗೆ ಹೋಗಬೇಕು ಎಂದು ವಿಲ್ ಮಾಡಿ ಇಟ್ಟಿದ್ದರೆ ಆ ಸಂದರ್ಭದಲ್ಲಿ ಕೂಡ ಉಳಿದ ಮಕ್ಕಳು ಅದರಲ್ಲಿ ಪಾಲು ಕೇಳಲು ಬರುವುದಿಲ್ಲ.
ಇದಾದ ನಂತರ ಎಲ್ಲದಕ್ಕಿಂತ ಮುಖ್ಯವಾದ ವಿಚಾರ ಇದೆ ಏನೆಂದರೆ, ತಂದೆ ತಾಯಿಯು ತಮ್ಮ ಪಿತ್ರಾರ್ಜಿತ ಆಸ್ತಿಯ ಪಾಲನ್ನು ತಮ್ಮ ಮಕ್ಕಳಿಗಾಗಿ ತಾವು ಬದುಕಿರುವಾಗಲೇ ವಿಲೆ ಮಾಡಿ ಕೊಟ್ಟಿದ್ದಾಗ ಅಥವಾ ತಮ್ಮ ಸ್ವಯಾರ್ಜಿತ ಆಸ್ತಿಯ ಹಕ್ಕನ್ನು ತಾವು ಬದುಕಿರುವಾಗಲೇ ದಾನ ಪತ್ರದ ಮೂಲಕ ತಮ್ಮ ಮಕ್ಕಳಿಗೆ ವರ್ಗಾಯಿಸಿ ಕೊಟ್ಟಿದ್ದರೆ.
ಆ ಮಕ್ಕಳು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂದರೆ ಆ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ. ತಂದೆ ತಾಯಿಗೆ ವಯಸ್ಸಾದ ನಂತರ ಅವಶ್ಯಕತೆ ಇರುವ ಆಶ್ರಯ, ಆಹಾರ, ಬಟ್ಟೆ, ಔಷದೋಪಚಾರ ಇಂತಹ ಬೇಸಿಕ್ ಅಗತ್ಯತೆಗಳನ್ನು ಪೂರೈಸದೆ ದೌರ್ಜನ್ಯ ಎಸುಕಿದಾಗ ಹಿರಿಯ ನಾಗರಿಕರ ಕಾಯ್ದೆ 2007 ರ ಪ್ರಕಾರ ಆ ರಿಜಿಸ್ಟರ್ ಅನ್ನು ಅರ್ಜಿ ಸಲ್ಲಿಸಿ ರದ್ದುಪಡಿಸಬಹುದು.
ಆಗ ಮತ್ತೆ ತಂದೆ ತಾಯಿ ಹೆಸರಿಗೆ ಆಸ್ತಿ ಹೋಗುತ್ತದೆ. ಹಾಗಾಗಿ ಆಸ್ತಿ ಎನ್ನುವುದು ದೊಡ್ಡ ವಿಷಯವಲ್ಲ ತಂದೆ-ತಾಯಿ, ಸಹೋದರರು, ತವರು ಮನೆ ಎನ್ನುವುದು ಬೆಲೆ ಕಟ್ಟಲಾಗದ ಆಸ್ತಿ ಹಾಗಾಗಿ ಹಣ ಆಸ್ತಿಯ ವಿಚಾರಕ್ಕಾಗಿ ಯಾರೂ ಸಂಬಂಧಗಳನ್ನು ಕಳೆದುಕೊಳ್ಳಬೇಡಿ.