ಪ್ರಿಂಟೆಡ್ ಬಿಲ್ ಇದ್ದವರಿಗೆ ಮಾತ್ರ ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಸಿಗೋದು.!

 

WhatsApp Group Join Now
Telegram Group Join Now

ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಸರ್ಕಾರದಲ್ಲಿ ಈಗ ಗ್ಯಾರಂಟಿ ಯೋಜನೆಗಳದ್ದೇ (Karnatala government Guarantee Schemes) ಹವಾ. ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ (Karnataka assembly election – 2023) ಕಾಂಗ್ರೆಸ್ ಪಕ್ಷವು (Congress party) ತನ್ನ ಪ್ರಣಾಳಿಕೆ ಅಸ್ತ್ರವಾಗಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಮೂಲಕವೇ ವಿಜಯ ಸಾಧಿಸಿ ಗದ್ದುಗೆ ಏರಿದೆ ಎನ್ನುವುದು ವಿಪಕ್ಷಗಳು ಮಾತ್ರವಲ್ಲದೆ ಇಡಿ ರಾಜ್ಯವೇ ಮಾತನಾಡುತ್ತಿರುವ ಸುದ್ದಿಯಾಗಿದೆ.

ಈ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಮೂಲಕ ಕರ್ನಾಟಕದಾದ್ಯಂತ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು, ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗೂ ಗರಿಷ್ಠ 200ಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆಯ ಮೂಲಕ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 2,000ರೂ. ಸಹಾಯಧನ ಪಡೆಯುತ್ತಿದ್ದಾರೆ. ಯುವನಿಧಿ ಯೋಜನೆಯಡಿ ಪದವಿ ಹಾಗೂ ಡಿಪ್ಲೋಮೋ ಮುಗಿಸಿದ ನಿರುದ್ಯೋಗ ವಿದ್ಯಾರ್ಥಿಗಳು ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆ ಪಡೆಯಲಿದ್ದಾರೆ.

ಈಗಾಗಲೇ ಈ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದ್ದು ಡಿಸೆಂಬರ್ ನಲ್ಲಿ ಅರ್ಜಿ ಆಹ್ವಾನ ಮಾಡುವ ಸಾಧ್ಯತೆ ಇದೆ. ಅನ್ನಭಾಗ್ಯ ಯೋಜನೆಯಡಿ (Annabhagya Scheme) 10Kg ಪಡಿತರ ನೀಡಲಾಗುವುದು ಎನ್ನುವುದು ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಾಗಿತ್ತು.

ಹಾಗೆ ಅಕ್ಕಿ ಖರೀದಿ ಮಾಡಿ ಕೊಟ್ಟ ಮಾತನ್ನು ಉಳಿದುಕೊಳ್ಳಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಬಳಿ ಅಕ್ಕಿ ಖರೀದಿಗೆ ಮುಂದಾಗಿತ್ತು ಆದರೆ ನಿರೀಕ್ಷೆಯಂತೆ ದಾಸ್ತಾನು ದೊರೆತಿಲ್ಲ. ಉಳಿದ ರಾಜ್ಯಗಳಲ್ಲೂ ಕೂಡ ಅಕ್ಕಿಗೆ ಬೇಡಿಕೆ ಇಟ್ಟಿದ್ದ ರಾಜ್ಯ ಸರ್ಕಾರಕ್ಕೆ ಇನ್ನೂ ಸಹ ಸಮಾಧಾನಕರ ಬೆಲೆಯಲ್ಲಿ ಅಕ್ಕಿ ಲಭ್ಯವಾಗಿಲ್ಲ.

ಆ ಕಾರಣಕ್ಕಾಗಿ Kg ಅಕ್ಕಿಗೆ 34 ರೂ. ನಂತೆ ಪ್ರತಿ ಸದಸ್ಯನಿಗೆ 5Kg ಅಕ್ಕಿಯ ಬದಲು 170ರೂಗಳನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಅಕ್ಕಿ ದಾಸ್ತಾನು ಲಭ್ಯವಾಗುವವರೆಗೂ ಕೂಡ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಆಹಾರ ಇಲಾಖೆ ಮೂಲಗಳು ಹೇಳಿದೆ.

ಆದರೆ ಈ ರೀತಿ ಹಣ ನೀಡುವ ಬದಲು ಅಕ್ಕಿ ನೀಡಿದರೆ ಅದೆಷ್ಟು ಬಡ ಕುಟುಂಬ ಕಳಿಲಿಕ್ಕೆ ಅನುಕೂಲವಾಗುತ್ತಿತ್ತು ಎನ್ನುವುದು ಅನೇಕರ ಅಭಿಪ್ರಾಯ. ಈ ವಿಚಾರದಲ್ಲಿ ಮತ್ತೊಂದು ಟ್ವಿಸ್ಟ್ ಇದೆ, ಅದೇನೆಂದರೆ ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆ ಪಡಿತರವನ್ನು 10Kg ಗೆ ಏರಿಸಲಾಗುವುದು ಎನ್ನುವ ಘೋಷಣೆ ಮಾಡಿದಂತೆ 5Kg ಅಕ್ಕಿ ನೀಡಿ ಉಳಿದ 5Kg ಅಕ್ಕಿ ಬದಲಿಗೆ ಹಣ ನೀಡುತ್ತಿದೆ ಎನ್ನುವುದು ಅನೇಕರ ಭಾವನೆ.

ಇದು ತಪ್ಪು ಈಗ ನೀಡುತ್ತಿರುವ 5 ಕೆಜಿ ಅಕ್ಕಿಯು ಕೇಂದ್ರ ಸರ್ಕಾರದಿಂದ (Central Government) ನೀಡುತ್ತಿರುವ ಅನುದಾನವಾಗಿದೆ. ಕೇಂದ್ರದ ಕಡ್ಡಾಯ ಆಹಾರ ನೀತಿ ಕಾಯ್ದೆಯ ಪ್ರಕಾರ ದೇಶದ ಎಲ್ಲಾ ರಾಜ್ಯಗಳ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು 5 Kg ಅಕ್ಕಿಯನ್ನು ಪಡೆಯುತ್ತಿದ್ದಾರೆ. ಅಕ್ಕಿಯನ್ನು ಹೊರತುಪಡಿಸಿ ಉಳಿದ ಯಾವುದೇ ಧಾನ್ಯ ಅಥವಾ ಬೇಳೆಕಾಳು ನೀಡಿದರೆ ಅದು ರಾಜ್ಯ ಸರ್ಕಾರದ ಅನುದಾನವಾಗಿರುತ್ತದೆ. ಆದರೆ ಈಗ ನಮ್ಮ ರಾಜ್ಯದಲ್ಲಿ 5 Kg ಅಕ್ಕಿಯನಷ್ಟೇ ನೀಡಲಾಗುತ್ತಿದೆ.

ಇದನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎನ್ನುವ ರೀತಿ ಬಿಂಬಿತವಾಗುತ್ತಿರುವುದರಿಂದ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ (fair price shop) ಪಡಿತರ ನೀಡಿದ ಮೇಲೆ ಅದನ್ನು ಚೀಟಿ ಬರೆದು ಅಥವಾ ಪುಸ್ತಕದಲ್ಲಿ ಬರೆದುಕೊಡುವ ಬದಲು ಪ್ರಿಂಟೆಡ್ ಬಿಲ್ (Printed bill) ಕೊಡಬೇಕು ಎಂದು ಕೇಂದ್ರ ತಾಕೀತು ಮಾಡಿದೆ.

ಇದರಲ್ಲಿ ಈ ಪಡಿತವು ಕೇಂದ್ರ ಸರ್ಕಾರದಿಂದ ಸಿಗುತ್ತದೆ ಎನ್ನುವುದಕ್ಕೆ ಸ್ಪಷ್ಟ ವಿವರ ಇರುತ್ತದೆ ಮತ್ತು ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ? ಎಷ್ಟು ಪಡಿತರ ನೀಡಲಾಗಿದೆ ಎನ್ನುವುದರ ಮಾಹಿತಿ ಇರುತ್ತದೆ. ಆಹಾರ ಇಲಾಖೆಯಲ್ಲಿ ಉಂಟಾಗುತ್ತಿರುವ ಅವ್ಯವಹಾರವನ್ನು ತಪ್ಪಿಸಲು ಕೂಡ ಈ ಕ್ರಮ ಅನುಕೂಲಕ್ಕೆ ಬರುತ್ತದೆ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಅತ್ಯುತ್ತಮ ನಿರ್ಧಾರ ಇದಾಗಿದ್ದು ಅನೇಕರು ಇದನ್ನು ಕೇಂದ್ರ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಸೂಚನೆ ನೀಡಿದೆ ಎಂದು ಸಹ ಹೇಳುತ್ತಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now