Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡು ಆರು ತಿಂಗಳಾಗುತ್ತಿದ್ದು, ಜನತೆಗೆ ಚುನಾವಣೆ ಪ್ರಚಾರದಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕೂಡ ನಡೆದಿದೆ. ಯುವನಿಧಿ ಯೋಜನೆಯನ್ನು ಹೊರತುಪಡಿಸಿ ಪಂಚ ಖಾತ್ರಿ ಯೋಜನೆಗಳಲ್ಲಿ ಶಕ್ತಿ ಯೋಜನೆ, ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ರಾಜ್ಯದ ಜನತೆ ಪಡೆಯುತ್ತಿದ್ದಾರೆ.
ಇದರಲ್ಲಿ ಅನ್ನಭಾಗ್ಯ ಯೋಜನೆಯ 5Kg ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ರೂ. 2000 ಸಹಾಯಧನವನ್ನು ಕುಟುಂಬದ ಮುಖ್ಯಸ್ಥ ಮಹಿಳೆ ಖಾತೆಗೆ DBT ಮೂಲಕ ಸರ್ಕಾರ ವರ್ಗಾವಣೆ ಮಾಡುತ್ತಿದೆ. ಆದರೆ ಈಗ ಮೂರನೇ ಕಂತಿನ ಹಣ ವರ್ಗಾವಣೆಯಾಗಿದ್ದರು ಕೂಡ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದ್ದರಾದರೂ ಸಾಧ್ಯವಾಗುತ್ತಿಲ್ಲ.
ಇದರ ಕುರಿತು ಗುರುವಾರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ (CM Siddaramaih) ನೇತೃತ್ವದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಿತು. ಈ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಕಾನೂನು ಸಚಿವ ಎಂ.ಬಿ ಪಾಟೀಲ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ರವರು ಸೇರಿದಂತೆ ಅನೇಕ ಸಚಿವರು ಪಾಲ್ಗೊಂಡಿದ್ದರು.
ಮುಖ್ಯವಾಗಿ ಈ ಸಭೆಯಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಎಲ್ಲಾ ಫಲಾನುಭವಿಗಳಿಗೆ ತಲುಪಿಸಲು ಇರುವ ತೊಡಕುಗಳ ಬಗ್ಗೆ ಚರ್ಚಿಸಲಾಯಿತು. ಅಂತ್ಯದಲ್ಲಿ ಮುಖ್ಯಮಂತ್ರಿಗಳು ಗೃಹಲಕ್ಷ್ಮಿ ಯೋಜನೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಅದಾಲತ್ (Gruhalakshmi adalath) ಕಾರ್ಯಕ್ರಮ ನಡೆಸಿ ಡಿಸೆಂಬರ್ ಅಂತ್ಯದ ಒಳಗೆ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ತಲುಪುವಂತೆ ಮತ್ತು ಬಿಟ್ಟು ಹೋಗಿರುವವರನ್ನು ಯೋಜನೆಗೆ ಸೇರಿಸುವಂತೆ ಆದೇಶವನ್ನು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದರೊಂದಿಗೆ ಇನ್ನು ಮಹತ್ವದ ವಿಚಾರಗಳು ಚರ್ಚೆ ಆಗಿವೆ ಮತ್ತು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ತಲುಪಿಸಲು ಇರುವ ಸಮಸ್ಯೆಗಳು ಮತ್ತು ಅದರ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸರ್ಕಾರಕ್ಕೆ ವಿಚಾರ ಮಂಡಿಸಿರುವುದಾಗಿ ಕೂಡ ತಿಳಿದು ಬಂದಿದೆ. ಬಳಿಕ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ರವರು (Lakshmi Habbalkar) ಸಭೆಯಲ್ಲಿ ಕೈಗೊಂಡ ಮತ್ತಷ್ಟು ನಿರ್ಧಾರಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಅವರು ಹೇಳಿದ್ದೇನೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗುವ ಕುರಿತು SMS ಸಂದೇಶ ಪಡೆದಿದ್ದರು 9 ಲಕ್ಷದಷ್ಟು ಮಹಿಳೆಯರ ಖಾತೆಗಳು ಸಮಸ್ಯೆ ಆಗಿರುವುದರಿಂದ ಹಣ ಪಡೆಯಲಾಗುತ್ತಿಲ್ಲ ಹಾಗಾಗಿ ಇಂತಹ ಸಮಸ್ಯೆಗಳಿರುವ ಸಂದರ್ಭದಲ್ಲಿ ಆ ರೇಷನ್ ಕಾರ್ಡ್ ನಲ್ಲಿ ವಯಸ್ಸಿನ ಆಧಾರದಲ್ಲಿ ಎರಡನೇ ಹಿರಿಯ ಮಹಿಳೆ ಆಗಿರುವ ಸದಸ್ಯೆಯ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಹಾಗೆ ಅನ್ನಭಾಗ್ಯ ಯೋಜನೆಯ ಹಣ ಪಡೆಯಲು ಪುರುಷ ಅಭ್ಯರ್ಥಿಗಳು ಕೂಡ ಅರ್ಹರಿದ್ದಾರೆ, ಆದರೆ ಕೆಲವರ ರೇಷನ್ ಕಾರ್ಡ್ ಗಳಲ್ಲಿ ಮಹಿಳಾ ಸದಸ್ಯರು ಇಲ್ಲ ಅವರು ಮೃ’ತಪಟ್ಟಿರುವ ಕಾರಣ ಅಥವಾ ಇನ್ನಿತರ ಕಾರಣಗಳಿಂದಾಗಿ ಮಹಿಳಾ ಸದಸ್ಯರು ಇಲ್ಲದೆ ಇದ್ದಾಗ ಆ ಹಣವನ್ನು ಆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಸ್ಥಾನದಲ್ಲಿರುವ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡುವ ನಿರ್ಧಾರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.