18 ವರ್ಷ ತುಂಬಿದ ಭಾರತೀಯ ನಾಗರಿಕನು ಮತದಾನ ಮಾಡುವ ಹಕ್ಕು (Voting rights) ಪಡೆಯುತ್ತಾನೆ. ಈ ರೀತಿ ಮತದಾನ ಮಾಡಲು ವೋಟರ್ ಲಿಸ್ಟ್ ನಲ್ಲಿ (Voter List) ಆತನ ಹೆಸರಿರಬೇಕು, ನಾವು ವೋಟರ್ ಲಿಸ್ಟ್ ಗೆ ನೋಂದಣಿ ಮಾಡಿಕೊಂಡರೆ ಭಾರತೀಯ ಚುನಾವಣಾ ಪ್ರಾಧಿಕಾರದಿಂದ (ECI) ನಮಗೆ ಮತದಾನದ ಗುರುತಿನ ಚೀಟಿ (Voter ID) ಸಿಗುತ್ತದೆ.
ಈ ಹಿಂದೆ ಇದನ್ನು ಪಡೆದುಕೊಳ್ಳಲು ಸೇವಾ ಕೇಂದ್ರಗಳಿಗೆ ಅಥವಾ ಚುನಾವಣಾ ಪ್ರಾಧಿಕಾರದ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಿತ್ತು, ಆದರೆ ಈಗ ಎಲ್ಲಾ ಕ್ಷೇತ್ರಗಳು ಕೂಡ ಡಿಜಿಟಲೀಕರಣಗೊಂಡಿರುವುದರಿಂದ ಆನ್ಲೈನ್ ನಲ್ಲಿ (Online application) ಎಲ್ಲದಕ್ಕೂ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ಸೇವೆ ಪಡೆಯಬಹುದು.
ಈ ಸುದ್ದಿ ಓದಿ:-ಇನ್ಮುಂದೆ ಪ್ರತಿ ಮನೆಗೂ ಸಿಗಲಿದೆ ಸೋಲಾರ್ ವಿದ್ಯುತ್, ಕೇಂದ್ರ ಸರ್ಕಾರದ ಹೊಸ ಯೋಜನೆ.!
ಈಗ ಭಾರತೀಯ ಚುನಾವಣಾ ಪ್ರಾಧಿಕಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್ ನಲ್ಲಿ ಅಪ್ಲಿಕೇಶನ್ ಹಾಕುವುದಕ್ಕೂ ಕೂಡ ಅವಕಾಶ ಮಾಡಿಕೊಟ್ಟಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರು ಮಾತ್ರವಲ್ಲದೆ ಡಿಜಿಟಲ್ ವೋಟರ್ ಐಡಿ (Digital Voter ID) ಪಡಿಯಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದೆ.
ನಾವು ಮತದಾನದ ಗುರುತಿನ ಚೀಟಿ ಹೊಂದಿದ್ದರೆ ಮಾತ್ರ ಗ್ರಾಮ ಪಂಚಾಯಿತಿ ಚುನಾವಣೆಯಿಂದ ಲೋಕಸಭಾ ಚುನಾವಣೆ ವರೆಗೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಮಾಡಲು ಸಾಧ್ಯ. ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಕೂಡ ಇದೆ.
ಈ ಸುದ್ದಿ ಓದಿ:- ಚೀಟಿ ವ್ಯವಹಾರಕ್ಕೆ ಖಾಲಿ ಚೆಕ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ.? ಚೀಟಿ ವ್ಯಾವರ ಮಾಡೋರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
ನೀವಿನ್ನು ವೋಟರ್ ಐಡಿ ಪಡೆದಿಲ್ಲ ಎಂದರೆ ಈಗ ನಾವು ಹೇಳುವ ಈ ವಿಧಾನಗಳನ್ನು ಪಾಲಿಸಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ಅಂಚೆ ಮೂಲಕ ನಿಮ್ಮ ಮನೆಗೆ ಡಿಜಿಟಲ್ ರೂಪದಲ್ಲಿರುವ ಮತದಾನದ ಗುರುತಿನ ಚೀಟಿ ಪಡೆಯಿರಿ ಅಥವಾ ಈಗಾಗಲೇ ಗುರುತಿನ ಚೀಟಿ ಪಡೆದಿದ್ದರೂ ಕಳೆದು ಹೋಗಿದ್ದಲ್ಲಿ ಅಥವಾ ತಿದ್ದುಪಡಿಗಳಲ್ಲಿ ಈ ವಿಧಾನವನ್ನು ಅನುಸರಿಸಿ ಸರಿಪಡಿಸಿಕೊಳ್ಳಿ.
ವೋಟರ್ ಐಡಿಯಲ್ಲಿ ತಿದ್ದುಪಡಿಗಾಗಿ:-
* https://voterportal.eci.gov.in/ ಚುನಾವಣಾ ಆಯೋಗದ ಈ ವೆಬ್ಸೈಟ್ಗೆ ಭೇಟಿ ನೀಡಿ.
* ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ.
ಫಾರ್ಮ್ 8A ಮೇಲೆ ಕ್ಲಿಕ್ ಮಾಡಿ ಫಾರಂ ಕೇಳಲಾಗಿರುವ ಭರ್ತಿ ಮಾಡಿ
* ಅಗತ್ಯ ಇರುವ ಮಾಹಿತಿಗಳನ್ನು ಭರ್ತಿ ಮಾಡಿ ನಂತರ ನಿಮ್ಮ ವೋಟರ್ ಐಡಿಯಲ್ಲಿ ಯಾವ ತಿದ್ದುಪಡಿ ಆಗಬೇಕು ಎನ್ನುವುದಕ್ಕೆ ಆಪ್ಷನ್ ಗಳು ಇರುತ್ತವೆ. ನಿಮ್ಮ ಆಯ್ಕೆ ಸೆಲೆಕ್ಟ್ ಮಾಡಿ ಮಾಹಿತಿ ನಮೂದಿಸಿ.
ಈ ಸುದ್ದಿ ಓದಿ:- ಮನೆ ಮಾಲೀಕರೆ ಎಚ್ಛರ, ಈ ನಿಯಮ ಪಾಲಿಸದೆ ಇದ್ದಲ್ಲಿ ಬಾಡಿಗೆದಾರರೇ ಮನೆ ಮಾಲೀಕರಾಗಿ ಬಿಡಬಹುದು…
* ನಿಮ್ಮ ಪಾಸ್ಪೋರ್ಟ್ ಅಥವಾ ಆಧಾರ್ ಕಾರ್ಡ್ ಅನ್ನು ನೀವು ತಿದ್ದುಪಡಿಗೆ ಕೇಳಿಕೊಂಡಿರುವ ಮಾಹಿತಿಗೆ ಪೂರಕವಾಗಿ ದಾಖಲೆಯಾಗಿ ಅಪ್ಲೋಡ್ ಮಾಡಿ, ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ, ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ. ಆ ಅರ್ಜಿ ಸಂಖ್ಯೆ ಮೂಲಕ ನೀವು ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಬಹುದು.
ಇನ್ನಿತರ ಅವಕಾಶಗಳು:-
* ಆಪ್ ಗಳ ಮೂಲಕ ಕೂಡ ತಿದ್ದುಪಡಿಗೆ ಹಾಗೂ ಹೊಸ ವೋಟರ್ ಐಡಿ ಪಡೆಯಲು ಅರ್ಜಿ ಸಲ್ಲಿಸಬಹುದು
* ಭಾರತ ಸರ್ಕಾರದ ಚುನಾವಣಾ ಪ್ರಾಧಿಕಾರ ಅನುಮತಿಸಿರುವ ಆಪ್ ಗಳು ಇವಾಗಿವೆ
Voter Helpline App
Saksham App
cVIGIL App
Voter Turnout App
* https://voters.eci.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ ಕೂಡ 18 ವರ್ಷ ತುಂಬಿರುವವರು ಸುಲಭವಾಗಿ ಹೊಸ ವೋಟರ್ ಐಡಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ.