P.M ಕಿಸಾನ್ ಯೋಜನೆಯಿಂದ ನಿಮ್ಮ ಹೆಸರು ಕೈಬಿಡಲಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ನಿಮ್ಮ ಮೊಬೈಲ್ ನಿಂದಲೇ ಚೆಕ್ ಮಾಡಿ.

 

WhatsApp Group Join Now
Telegram Group Join Now

ಪಿಎಂ ಕಿಸಾನ್ ಯೋಜನೆ ಅಡಿ ಪ್ರತಿ ವರ್ಷ ದೇಶದ ಎಲ್ಲಾ ಅರ್ಹ ರೈತ ಫಲಾನುಭವಿಗಳಿಗೆ ಕೇಂದ್ರದಿಂದ ಮೂರು ಕಂತುಗಳಲ್ಲಿ ಆರು ಸಾವಿರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ನಾಲ್ಕು ಸಾವಿರ ರೂಗಳನ್ನು ಎರಡು ಕಂತುಗಳಲ್ಲಿ ಅವರ ಅಕೌಂಟ್ಗಳಿಗೆ ಜಮೆ ಮಾಡಲಾಗುತ್ತಿದೆ. ಇದುವರೆಗೆ ಕೇಂದ್ರ ಸರ್ಕಾರದಿಂದ 12 ಕಂತುಗಳಲ್ಲಿ ಹಣ ಜಮೆ ಆಗಿದೆ ಇನ್ನೇನು 13ನೇ ಕಂತಿನ ಹಣವನ್ನು ಕೇಂದ್ರ ಬಿಡುಗಡೆ ಮಾಡಬೇಕು ಆದರೆ ಈ ಬಾರಿ 12 ಕಂತಿನಲ್ಲಿ ಹಣ ಪಡೆದಿದ್ದ ಎಲ್ಲ ರೈತರ ಖಾತೆಗೂ ಹಣ ಜಮೆ ಆಗುವುದಿಲ್ಲ.

ಹಲವಾರು ಕಾರಣಗಳಿಂದ ಕೆಲ ರೈತರ ಹೆಸರುಗಳನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ ಅದಕ್ಕೆ ಕಾರಣ ಈ ರೀತಿ ಇರಬಹುದು. ಅವರ ಕುಟುಂಬದಲ್ಲಿ ಸರ್ಕಾರಿ ನೌಕರರು ಇರಬಹುದು ಅಥವಾ 10 ಸಾವಿರಕ್ಕಿಂತ ಹೆಚ್ಚು ಪೆನ್ಷನ್ ಪಡೆಯುತ್ತಿರಬಹುದು ಅಥವಾ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವವರು ಆಗಿರಬಹುದು ಅಥವಾ ಆಧಾರ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕದಲ್ಲಿ ರೈತರ ಹೆಸರು ಹೊಂದಾಣಿಕೆ ಆಗದೆ ಇರಬಹುದು, ಇಕೆವೈಸಿ ಮಾಡಿಸದೆ ಇರಬಹುದು ಇನ್ನಿತರ ಕಾರಣಗಳಿಂದ ಕೆಲ ರೈತರ ಹೆಸರನ್ನು ಕೈ ಬಿಡಲಾಗಿದೆ.

ಹಾಗಾದರೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವ ಅನುಮಾನಗಳಿದ್ದರೆ ಅದನ್ನು ಕುಳಿತಲ್ಲಿಯೇ ನಿಮ್ಮ ಮೊಬೈಲ್ ಫೋನ್ ಮೂಲಕ ಚೆಕ್ ಮಾಡಿ ಬಗೆಹರಿಸಿಕೊಳ್ಳಬಹುದು. ರೈತರ ಪಿಎಂ ಕಿಸಾನ್ ಯೋಜನೆ 13ನೇ ಕಂತಿನ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ತೆಗೆದಿದ್ದಾರೆ ಇಲ್ಲವೋ ಎನ್ನುವುದನ್ನು ಚೆಕ್ ಮಾಡಲು ಮೊದಲಿಗೆ https//pmkisan.gov.in/panchayathDashbord ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಗ ಪಿ ಎಂ ಕಿಸಾನ್ ಯೋಜನೆಯ ಗ್ರಾಮ ಪಂಚಾಯಿತಿ ಡ್ಯಾಶ್ ಬೋರ್ಡ್ ಪೇಜ್ ಓಪನ್ ಆಗುತ್ತದೆ. ಅದರ ಕೆಳಗೆ ವಿಲೇಜ್ ಡ್ಯಾಶ್ ಬೋರ್ಡ್ ಎನ್ನುವ ಬಾಕ್ಸ್ ಕಾಣುತ್ತದೆ ಆಗ ಅದರಲ್ಲಿ ಕರ್ನಾಟಕ ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಯಾವ ಜಿಲ್ಲೆ ಎನ್ನುವ ಆಪ್ಷನ್ ಅಲ್ಲಿ ಜಿಲ್ಲೆ ಸೆಲೆಕ್ಟ್ ಮಾಡಿಕೊಂಡು ನಂತರ ತಾಲೂಕು ಸೆಲೆಕ್ಟ್ ಮಾಡಿಕೊಂಡು ಕೊನೆಗೆ ಗ್ರಾಮ ಪಂಚಾಯಿತಿಯನ್ನು ಕೂಡ ಸೆಲೆಕ್ಟ್ ಮಾಡಿಕೊಳ್ಳಬೇಕು. ಇದೆಲ್ಲವು ಆದಮೇಲೆ ಒಮ್ಮೆಲೆ ಚೆಕ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು.

ಆಗ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಆಗ ಆ ಪೇಜ್ ಅಲ್ಲಿ ಟೋಟಲ್ ಅನ್ ಎಲಿಜಿಬಲ್ ಪಟ್ಟಿಯ ಕೆಳಗೆ ಕಾಣುವ ಹೆಸರುಗಳನ್ನೆಲ್ಲ ಪಿಎಮ್ ಕಿಸಾನ್ ಯೋಜನೆಯ 13ನೇ ಕಂತಿನ ಪಟ್ಟಿಯಿಂದ ಕೈ ಬಿಡಲಾಗಿದೆ. ಇಕೆವೈಸಿ ಮಾಡಿಸದೆ ಇರುವ ಕಾರಣದಿಂದ ನಿಮ್ಮ ಹೆಸರನ್ನು ಕೈ ಬಿಡಲಾಗಿದ್ದರೆ ತಕ್ಷಣವೇ ನೀವು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಗ್ರಾಮ ಒನ್ ಅಥವಾ ಸಿಎಸ್‌ಸಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಈಕೆವೈಸಿ ಮಾಡಿಕೊಂಡು.

ಪಿ.ಎಮ್ ಕಿಸನ್ ಯೋಜನೆಯ ಫಲಾನುಭವಿಗಳಾಗಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ನೀವು ಇಕೆವೈಸಿ ಮಾಡಿಸದೆ ಇದ್ದರೂ 12ನೇ ಕಂತಿನಲ್ಲಿ ಹಣ ಬಿಡುಗಡೆ ಆಗಿತ್ತು ಆದರೆ 13ನೇ ಕಂತಿನಲ್ಲಿ ಅದನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ ಈ ಬಾರಿ 13ನೇ ಕಂತಿನ ಹಣ ಪಡೆಯಲು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now