ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ದೇಶಾದ್ಯಂತ ಬಡತನದ ಅಂಚಿನಲ್ಲಿರುವ ಕೋಟ್ಯಂತರ ಬಡ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯ ಭಾಗವಾಗಿ ಅರ್ಹ ರೈತರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷದಲ್ಲಿ ಒಟ್ಟು 6000 ರೂಪಾಯಿ ಪಡೆದುಕೊಳ್ಳುತ್ತಾರೆ. ಪ್ರತಿ ನಾಲ್ಕು ತಿಂಗಳಗೆ ಒಂದು ಬಾರಿ ಕೇಂದ್ರ ಸರ್ಕಾರದಿಂದಲೇ ರೈತರ ಬ್ಯಾಂಕ್ ಖಾತೆಗೆ 2000 ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ.
2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ದೇಶಾದ್ಯಂತ ಕೆಲವು ವಿನಾಯಿತಿಗಳಡಿ ಕೃಷಿಯೋಗ್ಯ ಭೂಮಿಯೊಂದಿಗೆ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲ ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ. ನೋಂದಣಿ ಬಳಿಕ ರೈತರು ತಮ್ಮ ಸ್ಟೇಟಸ್ ಪರಿಶೀಲನೆ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಇನ್ನು ಮುಂದೆ ರೈತರೇ ತಮ್ಮ ಅರ್ಜಿಯ ಸ್ಟೇಟಸ್ ಪರಿಶೀಲನೆ ಮಾಡಬಹುದು.
ರೈತರ ಬ್ಯಾಂಕ್ ಖಾತೆಗೆ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಬಹುದು. ಪಿಎಂ ಕಿಸಾನ್ ಪೋರ್ಟಲ್ಗೆ ಭೇಟಿ ನೀಡಿ ರೈತರು ತಮ್ಮ ಮೊಬೈಲ್ ಅಥವಾ ಬ್ಯಾಂಕ್ ಅಕೌಂಟ್ ನಂಬರ್ ನಮೂದಿಸುವ ಮೂಲಕ ಮಾಹಿತಿ ಪಡೆಯಬಹುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 12ನೇ ಕಂತನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಇದೀಗ 13ನೇ ಕಂತುಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಮಾಹಿತಿ ಪ್ರಕಾರ ಜನವರಿ 16 ರಿಂದ ಜನವರಿ 31ರ ಒಳಗೆ ಹಣವು ರೈರ ಅಕೌಂಟಿಗೆ ಸೇರಲಿದೆ ಇನ್ನೂ ಉತ್ತರ ಪ್ರದೇಶದ ಅರ್ಧದಷ್ಟು ರೈತರು ಪಿಎಂ ಕಿಸಾನ್ ಯೋಜನೆಯಿಂದ ವಂಚಿತರಾಗಬಹುದು ಎಂದು ಹೇಳಲಾಗಿದೆ ಏಕೆಂದರೆ ಅವರ ಕೆವೈಸಿ ಇನ್ನೂ ಲಿಂಕ್ ಆಗಿಲ್ಲ. ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 2000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಒಟ್ಟು 6000 ರೂಪಾಯಿ ಹಣವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಲಾಗುತ್ತಿದೆ.
ದೀಪಾವಳಿಗೆ ಮುಂಚಿತವಾಗಿ ಅಕ್ಟೋಬರ್ 17ರಂದು ಅರ್ಹ ರೈತ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ 12ನೇ ಕಂತಿನ ಹಣವನ್ನು ಆರ್ಥಿಕ ಪ್ರಯೋಜನವನ್ನು ಬಿಡುಗಡೆ ಮಾಡಿದರು. ಈ ಎರಡು ದಿನಗಳ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪಿಎಂ ಕಿಸಾನ್ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆಗಾಗಿ 16,000 ಕೋಟಿ ರೂಪಾಯಿಗಳನ್ನು ವಿತರಿಸಿದರು. ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಳಗೊಳ್ಳುವ ಈ ಕೇಂದ್ರ ಸರ್ಕಾರದ ಯೋಜನೆಯನ್ನು ಸುಮಾರು 3.6 ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು.
ಫಲಾನುಭವಿ ರೈತರು ಕೇಂದ್ರ ಯೋಜನೆಯ ಲಾಭವನ್ನು ಪಡೆಯಲು, ಅವರು ಇ-ಕೆವೈಸಿ ಅಪ್ಡೇಟ್ ಮಾಡಬೇಕಾಗಿದೆ ಎಂಬುದನ್ನು ಗಮನಿಸಬೇಕು. ತಮ್ಮ ಖಾತೆಗಳಿಗೆ ಕಂತುಗಳನ್ನು ಪಡೆಯಲು ಅವರು ಕಾಲಕಾಲಕ್ಕೆ ಅದನ್ನು ನವೀಕರಿಸಬೇಕಾಗುತ್ತದೆ. ಪಿಎಂ ಕಿಸಾನ್ ವೆಬ್ಸೈಟ್ ಅಧಿಸೂಚನೆಯ ಪ್ರಕಾರ, ಫಲಾನುಭವಿಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಇಕೆವೈಸಿ ಮಾಡುವುದನ್ನು ಕಡ್ಡಾಯ ಗೊಳಿಸಲಾಗಿದೆ, ಇಲ್ಲದಿದ್ದರೆ ಅವರು ಯೋಜನೆಯ ಪ್ರಯೋಜನಗಳಿಂದ ವಂಚಿತರಾಗುತ್ತಾರೆ.
ಇನ್ನು ಇ-ಕೆವೈಸಿ ಲಿಂಕ್ ಅನ್ನು ಮಾಡುವುದು ಹೇಗೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ, ಪ್ರಧಾನಮಂತ್ರಿ ಕಿಸಾನ್ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ರೈತರ ಕಾರ್ನರ್ನಲ್ಲಿರುವ ಕಿಸಾನ್ ಇ-ಕೆವೈಸಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಿ. ನೀವು ನಮೂದಿಸಬೇಕಾದ ಕ್ಯಾಪ್ಚಾ ಕೋಡ್ ಕಾಣಿಸಿಕೊಳ್ಳುತ್ತದೆ, ನಂತರ ಹುಡುಕಾಟ ಬಟನ್ ಕ್ಲಿಕ್ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.