Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಇತ್ತಿಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Adhar card)ಎನ್ನುವ ಐಡೆಂಟಿಟಿ ಕಾರ್ಡ್ ಎಲ್ಲೆಡೆ ಕಡ್ಡಾಯವಾಗಿದೆ. ನಮ್ಮ ದೇಶದ ಎಲ್ಲಾ ಉಚಿತ ಯೋಜನೆ ಹಾಗೂ ಸೇವೆಗಳ ಫಲಾನುಭವಿಗಳಾಗಲು ಮೊದಲು ಕೇಳುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಬಹಳ ಪ್ರಮುಖವಾದದ್ದು. ಆದರೆ ಇತ್ತೀಚೆಗೆ ಆಧಾರ್ ಜೊತೆ ಅಷ್ಟೇ ಮಹತ್ವ ಹೊಂದಿರುವ ಮತ್ತೊಂದು ಕಾರ್ಡ್ ಪಾನ್ ಕಾರ್ಡ್ (Pan card). ಈಗ ಪಾನ್ ಕಾರ್ಡ್ ಅನ್ನು ಕೂಡ ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಪಾನ್ ಕಾರ್ಡ್ ಎಂದು ಕರೆಸಿಕೊಳ್ಳುವ ಆದಾಯ ತೆರಿಗೆ ಇಲಾಖೆಯು ಕೊಡುವ ಈ ಕಾರ್ಡ್ ಕೂಡ ಅನ್ನು ಇನ್ನಿತರ ದಾಖಲೆ ಜೊತೆ ಲಿಂಕ್ ಮಾಡಬೇಕು. ಈಗಾಗಲೇ ಸರ್ಕಾರ ಆಧಾರ್ ಕಾರ್ಡ್ ಜೊತೆ ಪಾನ್ ಲಿಂಕ್ ಮಾಡುವುದು ಮತ್ತು ಆಧಾರ್ ಹಾಗೂ ಪಾನ್ ಕಾರ್ಡ್ ಎರಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿ ಆಗಿದೆ. ಇತ್ತೀಚೆಗಷ್ಟೇ ಎಲ್ಐಸಿ (LIC) ಪಾಲಿಸಿ ಜೊತೆಯೂ ಆಧಾರ್ ಹಾಗೂ ಪಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎನ್ನುವುದನ್ನು ಸ್ವತಃ ಎಲ್ ಐ ಸಿ ಅಧಿಕೃತವಾಗಿ ಅನೌನ್ಸ್ ಮಾಡುವ ಮೂಲಕ ಘೋಷಿಸಿಕೊಂಡಿದೆ.
ಅದಕ್ಕೂ ಕೂಡ ಅಂತಿಮ ಗಡವನ್ನು ನೀಡಲಾಗಿದೆ. ಇಷ್ಟೆಲ್ಲ ಮಹತ್ವ ಇದ್ದರೂ ಇನ್ನೂ ಸಹ ಅದೆಷ್ಟೋ ಮಂದಿ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡೇ ಇಲ್ಲ. ಈಗಾಗಲೇ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಮುಖ್ಯ ಎಂದು ಸರ್ಕಾರ ಹೇಳಿ 12 ತಿಂಗಳುಗಳು ಮುಗಿದಿದ್ದರೂ ಇದರ ಬಗ್ಗೆ ಪಾನ್ ಕಾರ್ಡ್ ಹೊಂದಿರುವ ಹಲವು ಮಂದಿ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ ಕೊನೆಯದಾಗಿ ಮಾರ್ಚ್ 31ನೇ ತಾರೀಖಿನವರೆಗೆ ಸಮಯ ನೀಡಲಾಗಿದ್ದು ನಂತರವೂ ಕೂಡ ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಹೋದಲ್ಲಿ ಅವರಿಗೆ ದಂಡ ವಿಧಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ಸಹ ನೀಡಿದೆ.
ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ಕೊಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಈ ಪಾನ್ ಕಾರ್ಡ್ 10 ಅಂಕೆಗಳನ್ನು ಹೊಂದಿರುವ ಒಂದು ಯೂನಿಕ್ ನಂಬರ್ ಆಗಿದ್ದು ಪ್ರತ್ಯೇಕವಾಗಿ ಪ್ರತಿಯೊಬ್ಬರಿಗೂ ಕೊಡುವ ನಂಬರ್ ಆಗಿದೆ. ಒಬ್ಬರಿಗೆ ಒಮ್ಮೆ ಮಾತ್ರ ಒಂದು ಸಂಖ್ಯೆಯು ಸಿಗುತ್ತದೆ. ಇದನ್ನು ಆನ್ಲೈನ್ ನಲ್ಲಿ ಅಪ್ಲೈ ಮಾಡಿ ಪಡೆಯಬಹುದು. ಪಾನ್ ಕಾರ್ಡ್ ಪಡೆಯಲು ಈಗ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರ ಗಳನ್ನು ದಾಖಲಾತಿ ಗಳಾಗಿ ಕೊಡಬೇಕು.
ಆದರೆ ಈ ಹಿಂದೆ ಪಾನ್ ಕಾರ್ಡ್ ಮಾಡಿಸಿಕೊಂಡಿರುವವನು ಆದರೆ ಆಧಾರ್ ಆಗುವುದಕ್ಕೂ ಮುನ್ನ ಪಾನ್ ಕಾರ್ಡ್ ಮಾಡಿಸಿಕೊಂಡಿರುವವರು ಇನ್ನು ಪಾನ್ ನಂಬರ್ ಜೊತೆ ಆಧಾರ್ ನಂಬರ್ ಲಿಂಕ್ ಮಾಡಿಲ್ಲ. ಈಗ ಸರ್ಕಾರ ಹೇಳಿರುವ ಸೂಚನೆ ಪ್ರಕಾರ ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಮೇಲೆ ಆಧಾರ್ ಅಲ್ಲಿ ಕೊಟ್ಟಿರುವ ಮೊಬೈಲ್ ಸಂಖ್ಯೆಯನ್ನು ಹಾಗೆ ಉಳಿಸಿಕೊಳ್ಳಬೇಕು ಎನ್ನುವುದನ್ನು ಸಹ ತಿಳಿಸಿದೆ.
ಸರ್ಕಾರದ ಅನೇಕ ಯೋಜನೆಗಳಿಗೆ ಅದರಲ್ಲೂ ಹಣಕಾಸಿನ ವಿಚಾರದಲ್ಲಿ ಪಾನ್ ಕಾರ್ಡ್ ಎನ್ನುವುದು ಒಂದು ಪ್ರಮುಖ ದಾಖಲೆಯಾಗಿ ಉಪಯೋಗಕ್ಕೆ ಬರುತ್ತದೆ. ಈ ಪ್ಯಾನ್ ಕಾರ್ಡ್ ಅನ್ನು ಕೆಲವೊಮ್ಮೆ ತೀರಾ ಅನಿವಾರ್ಯತೆ ಅಥವಾ ಅವಶ್ಯಕತೆ ಇದ್ದಾಗ ಸಂದರ್ಭದಲ್ಲಿ ಐಡೆಂಟಿಟಿ ಬಳಸಬಹುದು. ಹೇಗೆ ರೇಷನ್ ಕಾರ್ಡ್, ವೋಟರ್ ಐಡಿ, ಡಿಎಲ್, ಆಧಾರ್ ಕಾರ್ಡ್ ಇವುಗಳನ್ನು ಒಂದು ಐಡೆಂಟಿಟಿ ಎಂದು ನಾವು ತೋರಿಸುತ್ತೇವೋ ಹಾಗೆ ಪಾನ್ ಕಾರ್ಡ್ ಕೂಡ ಕರೆಸಿಕೊಳ್ಳುತ್ತದೆ.
ಅಂತಹ ಪರಿಸ್ಥಿತಿಯಲ್ಲಿ ಪಾನ್ ಕಾರ್ಡ್ ಕೊಟ್ಟರೆ ಅದು ಮಾನ್ಯವಾಗುತ್ತದೆ. ಈ ಎಲ್ಲಾ ಮಹತ್ವಪೂರ್ಣ ಅಂಶಗಳನ್ನು ಹೊಂದಿರುವ ಪಾನ್ ಕಾರ್ಡ್ ಬಗ್ಗೆ ನಿರ್ಲಕ್ಷ ತೋರದೆ ಸರ್ಕಾರ ಕೊಟ್ಟಿರುವ ಸೂಚನೆ ಪ್ರಕಾರ ಆಧಾರ್ ಲಿಂಕ್ ಮಾಡಿಸಿ ಅದು ರದ್ದಾಗದಂತೆ ಕಾಪಾಡಿಕೊಳ್ಳಿ.