ಆದಾಯ ತೆರಿಗೆ ಇಲಾಖೆಯ ನೀಡುತ್ತಿರುವ ಪಾನ್ ಕಾರ್ಡ್ ಆರ್ಥಿಕ ಚಟುವಟಿಕೆಗಳಿಗೆ ಒಂದು ಪ್ರಮುಖ ಗುರುತಾಗಿದೆ. ಭಾರತದಲ್ಲಿ ಇದೊಂದು ಗುರುತಿನ ಚೀಟಿಯಾಗಿ ಕೂಡ ಮಾನ್ಯವಾಗಿದೆ. ಸದ್ಯಕ್ಕೆ ಈಗ ಎಲ್ಲೆಡೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಚಾರದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಸರ್ಕಾರ 1000ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ ಇನ್ನು ಮೂರು ತಿಂಗಳ ಕಾಲ ಹೆಚ್ಚಿನ ಕಾಲವಕಾಶ ನೀಡಿದೆ.
ಜೂನ್ ತಿಂಗಳ 30ನೇ ತಾರೀಖನ್ನು ಅಂತಿಮ ಗಡುವಾಗಿ ಕೊಟ್ಟಿರುವ ಸರ್ಕಾರ ಈ ಅವಧಿಯಲ್ಲೂ ಸಹ ಪೂರ್ಣಗೊಳಿಸದೇ ಇದ್ದವರ ಪ್ಯಾನ್ ಕಾರ್ಡ್ ನಿಶ್ಕ್ರಿಯಗೊಳಿಸುವುದು ಪಕ್ಕ ಎಂದು ಎಚ್ಚರಿಸಿದೆ. ಇದರ ಜೊತೆಗೆ ವಾಯಿದೆ ಹೆಚ್ಚಾದಂತೆ ದಂಡ ಸಹ ಹೆಚ್ಚಿಗೆ ಮಾಡುವ ಸೂಚನೆ ಕೊಟ್ಟಿದೆ. ಇದರ ಹೊರತಾಗಿ ಪ್ಯಾನ್ ಕಾರ್ಡ್ ಸುದ್ದಿ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಇನ್ನಷ್ಟು ವಿಷಯಗಳು ಹರಿದಾಡುತ್ತಿವೆ.
ಇತ್ತೀಚಿಗಷ್ಟೇ ಮಹಿಳೆಯರಿಗೆ ಪಾನ್ ಕಾರ್ಡ್ ಲಿಂಕ್ ಮಾಡಿಸಲು ಸಂಪೂರ್ಣ ಉಚಿತ ಮಾಡಲಾಗಿದೆ. ಅವರು 1000ರೂ. ದಂಡ ತೆರುವ ಅವಶ್ಯಕತೆ ಇಲ್ಲ ಎನ್ನುವ ಸುಳ್ಳು ಸುದ್ದಿ ಹಬ್ಬಿತ್ತು. ಇಂತಹದೇ ಯಾವುದೇ ನಿರ್ಧಾರ ಸರ್ಕಾರ ಕೈಗೊಂಡಿಲ್ಲ ಎನ್ನುವ ಸ್ಪಷ್ಟನೆ ಸಿಕ್ಕಿತ್ತು. ಅದಾದ ಬಳಿಕ ಮತ್ತೊಂದು ಇಂತಹದ್ದೇ ಗಾಳಿ ಸುದ್ದಿ ಪ್ಯಾನ್ ಕಾರ್ಡ್ ಬಗ್ಗೆ ಹರಡಿ ಹೆಚ್ಚು ವೈರಲ್ ಆಗುತ್ತಿದೆ.
ಅದೇನಂದರೆ ಪ್ಯಾನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ 15,000 ರೂಗಳನ್ನು ಸರ್ಕಾರ ನೀಡುತ್ತಿದೆ ಎಂದು. ಯೋಜನಾ ಪೋರ್ ಯು ಎನ್ನುವ ಯೂಟ್ಯೂಬ್ ಚಾನೆಲ್ ಇಂತಹದೊಂದು ವಿಡಿಯೋ ಮಾಡಿ ಹರಿ ಬಿಟ್ಟಿದೆ. ಈ ವಿಷಯ ಹೆಚ್ಚು ವೈರಲ್ ಆಗಿ ಎಲ್ಲರೂ ಸಹ ಈ ಸುದ್ದಿಯನ್ನು ನಂಬುತ್ತಿದ್ದಾರ. ಇದರ ಬಗ್ಗೆ PIB ಟ್ವೀಟ್ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಬರುವ ಇಂತಹ ಸುದ್ದಿಗಳನ್ನು ತಕ್ಷಣ ನಂಬಲು ಹೋಗಬೇಡಿ, ಯಾಕೆಂದರೆ ಸರಕಾರ ಈ ರೀತಿಯ ಯಾವುದೇ ಯೋಜನೆಯ ನಿರ್ಧಾರವನ್ನು ಕೂಡ ಮಾಡಿಲ್ಲ. ಯಾವುದೇ ಯೋಜನೆ ಬಗ್ಗೆ ಮಾಹಿತಿ ಬೇಕಾದಲ್ಲಿ ಅಧಿಕೃತ ಸರ್ಕಾರಿ ವೆಬ್ಸೈಟ್ ಗಳನ್ನು ಮಾತ್ರ ನಂಬಿ ಎಂದು PIB ಹೇಳಿದೆ.
ಸೋಶಿಯಲ್ ಮೀಡಿಯಾ ಮಾಡುವ ಅವಾಂತರಗಳು ಒಂದೆರಡು ಅಲ್ಲ. ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೆ, ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೆ ಎನ್ನುವುದನ್ನು ಸೋಶಿಯಲ್ ಮೀಡಿಯಾಗೆ ಅನ್ವಯಿಸಬಹುದು. ಯಾಕೆಂದರೆ ಇತ್ತೀಚಿಗೆ ನಾವು ನೋಡುತ್ತಿರುವ ಸುದ್ದಿಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂದು ಕಂಡುಹಿಡಿಯಲು ಅಸಾಧ್ಯ. ಅಷ್ಟರ ಮಟ್ಟಿಗೆ ವಿಷಯಗಳು ಇರುತ್ತವೆ.
ಒಂದು ವೇಳೆ ಇಂತಹ ಯಾವುದೇ ವಿಡಿಯೋ ಅಥವಾ ಪೋಸ್ಟ್ ನಿಮ್ಮ ಕಣ್ಣಿಗೆ ಬಿದ್ದಾಗ ಅದರ ಸತ್ಯಾನುಸತ್ಯತೆಯನ್ನು ನೀವೇ ಕುದ್ದು ಪರೀಕ್ಷಿಸಬಹುದು. ಹೇಗೆಂದರೆ ನೀವು ನೋಡಿದ ವಿಡಿಯೋ ಅಥವಾ ಪೋಸ್ಟ್ ಅನ್ನು +918799711259 ಈ ವಾಟ್ಸಪ್ ನಂಬರಿಗೆ ಕಳುಹಿಸಬಹುದು ಅಥವಾ pibfactcheck@gmail.com ಗೆ ಇ-ಮೇಲ್ ಮಾಡಬಹುದು ಅಥವಾ ಅದರ ಕುರಿತು pib ಅಧಿಕೃತ ವೆಬ್ಸೈಟ್ ಆದ https://factcheck.pib.govt.in/ ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.
ನಿಮಗೆ ವಿಷಯದ ಅಸಲಿಯತ್ತು ತಿಳಿಯುವ ತನಕ ಯಾವುದೇ ವೈರಸ್ಕ ಸುತ್ತಿಕಯನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರ ಜೊತೆ ಶೇರ್ ಮಾಡಿಕೊಳ್ಳಬೇಡಿ. ಈ ವಿಷಯ ಹೆಚ್ಚಿನ ಜನರಿಗೆ ತಲುಪುವಂತೆ ಶೇರ್ ಮಾಡಿ, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ.