ಈವರೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಂದ ಸರ್ಕಾರಗಳು ರೈತರ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ರೈತ ಹಾಗೂ ರೈತ ಕುಟುಂಬದ ಏಳಿಗೆಗಾಗಿ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ, ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ, ಕೃಷಿ ಪರಿಕರಗಳ ಖರೀದಿಗೆ ಸಬ್ಸಿಡಿ ಸಾಲ ಸೌಲಭ್ಯ, ಪಂಪ್ಸೆಟ್ ಹೊಂದಿರುವ ರೈತರಿಗೆ ಅನುಕೂಲ ಮಾಡಿಕೊಡಲು ಉಚಿತ ವಿದ್ಯುತ್ ಹಿಂದುಳಿದ ವರ್ಗದ ರೈತರಿಗಾಗಿ ಗಂಗಾ ಕಲ್ಯಾಣ ಯೋಜನೆ, ಈ ರೀತಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.
ಇದೆಲ್ಲದರ ನಡುವೆ ರೈತರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ದೇಶದಾದ್ಯಂತ ಎಲ್ಲ ರೈತರು ಕೂಡ ಈ ಯೋಜನೆ ಬಗ್ಗೆ ಕೇಳಿ ಮಾರುಹೋಗಿದ್ದಾರೆ. ಜಾರಿಗೆ ತಂದಿರುವ ಸರ್ಕಾರ :- ಕೇಂದ್ರ ಸರ್ಕಾರ ಯೋಜನೆಯ ಹೆಸರು :- ಕಿಸಾನ್ ಮನ್ ಧನ್ ಯೋಜನೆ
ಯೋಜನೆಯ ಫಲಾನುಭವಿಗಳಾಗಲು ಇರಬೇಕಾದ ಅರ್ಹತೆ :-
●ಈ ಯೋಜನೆಗೆ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಭಾರತೀಯರಾಗಿಬೇಕು
●ಮುಖ್ಯವಾಗಿ ಅವರು ರೈತರಾಗಿರಬೇಕು
●ಯೋಜನೆ ಸಲ್ಲಿಸುವ ರೈತರ ಹೆಸರಿನಲ್ಲಿ ಗರಿಷ್ಠ 2 ಹೆಕ್ಟರ್ ಅಥವಾ ಗರಿಷ್ಠ 5 ಎಕರೆಗಿಂತ ಕಡಿಮೆ ಭೂಮಿ ಇರಬೇಕು
●ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ 18 ವರ್ಷದಿಂದ 40 ವರ್ಷದ ಒಳಗಿರಬೇಕು.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :-
●ರೈತನ ಆಧಾರ್ ಕಾರ್ಡ್
●ಬ್ಯಾಂಕ್ ಖಾತೆ ಪುರಾವೆ
●ಜಮೀನಿಗೆ ಸಂಬಂಧಪಟ್ಟ ದಾಖಲೆಗಳಾದ ಪಹಣಿ ಪತ್ರ ಇನ್ನಿತ್ಯಾದಿ
●ಮೊಬೈಲ್ ಸಂಖ್ಯೆ
●ಮತ್ತು ಕಡ್ಡಾಯವಾಗಿ ಕೆವೈಸಿ ಆಗಿರಬೇಕು
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕಿಸಾನ್ ಮನ್ ಧನ್ ಯೋಜನೆಗೆ ಸಂಬಂಧಪಟ್ಟ ಹಾಗೆ ಪ್ರಮುಖ ಅಂಶಗಳು :-
●ಈ ಯೋಜನೆಗೆ ಅರ್ಜಿ ಸಲ್ಲಿಸಲು ಹತ್ತಿರದಲ್ಲಿರುವ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ಕೊಡಿ.
●ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಟ್ಟು ಕಿಸಾನ್ ಮನ್ ಧನ್ ಯೋಜನೆ ಪ್ರಕ್ರಿಯ ಅರ್ಜಿ ಫಾರಂ ತುಂಬಿ ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಪ್ರಕ್ರಿಯೆ ಪೂರ್ತಿಗೊಳಿಸಿ.
7ಈ ಯೋಜನೆಗೆ ಸಂಬಂಧಪಟ್ಟಹಾಗೆ ಪ್ರಮುಖ ವಿಷಯಗಳು ಏನೆಂದರೆ, ಈ ಯೋಜನೆಯನ್ನು 18 ವರ್ಷದ ಮೇಲಿರುವ 40 ವರ್ಷದ ಒಳಗಿರುವ ರೈತರು ಮಾಡಿಸಬೇಕು. 7 ಅವರಿಗೆ 60 ವರ್ಷ ತುಂಬುವವರೆಗೂ ಪ್ರತಿ ತಿಂಗಳು ಮಾಸಿಕವಾಗಿ 50 ರೂಪಾಯಿಯಿಂದ 200 ರುಪಾಯಿಯನ್ನು ಈ ಯೋಜನೆಗೆ ಪಾವತಿ ಮಾಡುತ್ತಾ ಬರಬೇಕು.
●ಅವರಿಗೆ 60 ವರ್ಷ ತುಂಬಿದ ಬಳಿಕ ಪಿಂಚಣಿಯಾಗಿ ಪತಿ ತಿಂಗಳು 3000 ಗಳು ಸಿಗಲಿದೆ ಒಂದು ವೇಳೆ ಅರ್ಜಿ ಸಲ್ಲಿಸಿ ಯೋಜನೆ ಭಾಗವಾಗಿದ್ದ ರೈತ ಮೃತ ಹೊಂದಿದ ಸಂದರ್ಭದಲ್ಲಿ ರೈತನ ಕುಟುಂಬಕ್ಕೆ ಅಂದರೆ ಆ ರೈತನ ಸಂಗಾತಿಗೆ ಮಾತ್ರ ಇದರ ಪಿಂಚಣಿ ಹಣ ಹೋಗುತ್ತದೆ.
●ಅರ್ಜಿ ಸಲ್ಲಿಸುವಾಗ ಕೊಡುವ ನಿಮ್ಮ ದಾಖಲೆಗಳ ಎಲ್ಲಾ ಮಾಹಿತಿಯು ಒಂದಕ್ಕೊಂದು ಹೋಲಿಕೆ ಇರಬೇಕು, ಮಾಹಿತಿ ಹೋಲಿಕೆಯಾಗದ ಅರ್ಜಿಗಳು ಅಮಾನ್ಯವಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಿ ಅಥವಾ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಅಥವಾ ಅಂತರ್ಜಾಲದಲ್ಲಿ ಕೃಷಿ ಮನ್ ಧನ್ ಯೋಜನೆ ಬಗ್ಗೆ ಸರ್ಚ್ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.