ಸ್ಟ್ರೋಕ್ ನಿಂದ ಬಚಾವ್ ಆಗೋದು ಹೇಗೆ.? ಇತ್ತೀಚಿನ ದಿನಗಳಲ್ಲಿ ಸ್ಟ್ರೋಕ್ ಯಾಕೆ ಜಾಸ್ತಿ ಆಗ್ತಿದೆ.? ಸ್ಟ್ರೋಕ್ ಹೇಗೆ ಸಂಭವಿಸುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ದೊಡ್ಡ ಪ್ರಮಾಣದಲ್ಲಿ ಜೀವನವನ್ನು, ಜೀವನವನ್ನು ತೆಗೆಯುತ್ತಿರುವಂತಹ ಆಘಾತಕಾರಿ ಆರೋಗ್ಯ ಸಮಸ್ಯೆಯಾಗಿದೆ ಇತ್ತೀಚಿಗೆ AIIMS ನೀಡಿರುವ ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ವರ್ಷಕ್ಕೆ 1,85,000 ದಷ್ಟು ಜನರು ಸ್ಟ್ರೋಕ್ ಗೆ ತುತ್ತಾಗುತ್ತಿದ್ದು , ಭಾರತದಲ್ಲಿ ಪ್ರತಿ ನಲವತ್ತು ಸೆಕೆಂಡಿಗೆ ‌ಒಂದು ಸ್ಟ್ರೋಕ್ ಕೇಸ್ ದಾಖಲಾದರೆ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿಯು ಸ್ಟ್ರೋಕ್ ನಿಂದ ಸಾವನ್ನಪ್ಪುತ್ತಾರೆ.

ಇದರಲ್ಲಿ ಯುವಜನರೆ ಹೆಚ್ಚಾಗಿ ಸ್ಟ್ರೋಕ್ ನಿಂದ ಸಾಯುತ್ತಿದ್ದಾರೆ. ಯಾಕೆ? ಸ್ಟ್ರೋಕ್ ‌ಹೇಗೆ ಸಂಭವಿಸುತ್ತದೆ? ಇದರ ಲಕ್ಷಣಗಳು ಏನು? ಇದಕ್ಕೆ ಪರಿಹಾರಗಳು ಏನು ಎಂಬುದನ್ನು ತಿಳಿಯೋಣ. ಸ್ಟ್ರೋಕ್ ಅನ್ನು ಬ್ರೈನ್ ಅಟ್ಯಾಕ್ ಎಂತಲೂ ಕರೆಯುತ್ತಾರೆ. ಮೆದುಳಿಗೆ ಪೂರೈಕೆ ಆಗುವ ರಕ್ತ ಸಂಚಾರದಲ್ಲಿ ಅಡಚಣೆ ಉಂಟಾದಾಗ ಸ್ಟ್ರೋಕ್ ಸಂಭವಿಸುತ್ತದೆ.

ಮೆದುಳಿಗೆ ಪೂರೈಕೆ ಆಗುವ ರಕ್ತ ಸಂಚಾರ ಸ್ಥಗಿತಗೊಂಡಾಗ ಅಥವಾ ಮೆದುಳಿನಲ್ಲಿ ರಕ್ತನಾಳಗಳು ಹೊಡೆದಾಗ ಮೆದುಳಿನ ಭಾಗಗಳು ಹಾನಿ ಒಳಗಾಗಿ ಮೆದುಳಿನ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಇದು ಮನುಷ್ಯನ ಮೇಲೆ ಮಾರಣಾಂತಿಕ ಪ್ರಭಾವ ಬೀರುತ್ತದೆ. ಮೆದುಳಿಗೆ ಸ್ಟ್ರೋಕ್ ಯಾಕೆ ಆಗುತ್ತದೆ? ನಮ್ಮ ಇಡೀ ದೇಹವನ್ನು ಮೆದಳು ನಿಯಂತ್ರಿಸುತ್ತದೆ.

ದೇಹದ ಪ್ರತಿಯೊಂದು ಅಂಗವನ್ನು ನಿಯಂತ್ರಿಸುತ್ತದೆ ಅದಕ್ಕಾಗಿ ಹೃದಯದ ಅಪಧಮನಿಯಿಂದ ಮೆದುಳಿಗೆ ಆಕ್ಸಿಜನ್ ಸಹಿತ ರಕ್ತ ಸಂಚಾರ ಆಗುವುದು ಬಹು ಮುಖ್ಯ. ಹೀಗಾಗಿ ರಕ್ತ ಸಂಚಾರದಲ್ಲಿ ಸ್ಥಗಿತ ಉಂಟಾದರೆ ಅಥವಾ ರಕ್ತನಾಳಗಳು ಡ್ಯಾಮೇಜ್ ಆದಾಗ ಬ್ರೈನ್ ಸೆಲ್ ಗಳು ಸಾಯುತ್ತ ಹೋಗುತ್ತವೆ. ಇದನ್ನೆ ಸ್ಟ್ರೋಕ್ ಎಂದು ಕರೆಯುತ್ತಾರೆ.

ಮೆದುಳಿನಲ್ಲಿ ರಕ್ತನಾಳಗಳು ಸ್ಥಗಿತಗೊಂಡಾಗ ದೇಹದ ಅನೇಕ ಭಾಗಗಳು ಸ್ವಾಧೀನ ಹೀನವಾಗುತ್ತದೆ. ದೇಹದ ಒಂದು ಭಾಗ ಸ್ವಾಧೀನ ಹೀನವಾಗುವುದನ್ನು ಪಾರ್ಶ್ವವಾಯು ಎನ್ನುವುದು. ಸ್ಟ್ರೋಕ್ ನಲ್ಲಿ ಎರಡು ವಿಧ ಅದರಲ್ಲಿ ಒಂದು ರಕ್ತ ಸಂಚಾರದಲ್ಲಿ ಅಡಚಣೆಯುಂಟಾಗಿ ಆಕ್ಸಿಜನ್ ರಿಚ್ ರಕ್ತ ಸಂಚಾರ ಆಗದಿದ್ದಾಗ ಸ್ಟ್ರೋಕ್ ಸಮಸ್ಯೆ ಉಂಟಾಗುತ್ತದೆ.

ಮತ್ತೊಂದು ಮೆದುಳಿನಲ್ಲಿ ರಕ್ತಸ್ರಾವವಾದಾಗ ಸ್ಟ್ರೋಕ್ ಸಮಸ್ಯೆ ಉಂಟಾಗುತ್ತದೆ. ಸ್ಟ್ರೋಕ್ ನ ಲಕ್ಷಣಗಳು ಯಾವುವು? ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು. ಮಾತನಾಡಲು ಕಷ್ಟ ಆಗುವುದು ಅಥವಾ ಮಾತನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುವುದು. ಸಡನ್ ಆಗಿ ಗೊಂದಲ ಆಗುವುದು ಯಾವುದೇ ಕಾರಣವಿಲ್ಲದೆ ತಲೆನೋವು ಬರುವುದು. ಇದ್ದಕ್ಕಿದ್ದ ಹಾಗೆ ಕಣ್ಣುಗಳಲ್ಲಿ ಸಮಸ್ಯೆ ಉಂಟಾಗುವುದು, ಕಣ್ಣು ಕಾಣಿಸದಂತೆ ಆಗುವುದು, ತಲೆ ತಿರುಗುವುದು, ದೇಹವನ್ನು ಸಮತೋಲನದಲ್ಲಿ ಇಡಲು ಸಾಧ್ಯವಾಗುವುದಿಲ್ಲ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸ್ಟ್ರೋಕ್ ಆದಾಗ ಏನು ಮಾಡಬೇಕು?
ಸ್ಟ್ರೋಕ್ ಒಂದು ಗಂಭೀರ ಸಮಸ್ಯೆಯಾಗಿದ್ದು ಟ್ರೂ ಕಾದ 3:00 ಒಳಗೆ ಸರಿಯಾದ ಸಮಯ ಪ್ರಜ್ಞೆ ಇದ್ದರೆ ಜೀವವನ್ನು ಕಾಪಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಯಾರಿಗಾದರೂ ಸ್ಟ್ರೋಕ್ ಆಗಿರಬಹುದು ಎಂದರೆ ಮೊದಲನೆಯದಾಗಿ ಆ ವ್ಯಕ್ತಿಯನ್ನು ನಗಲು ಹೇಳಬೇಕು, ನಂತರ ಕೈಗಳನ್ನು ಮೇಲೆತ್ತಲು ಹೇಳಬೇಕು, ಮಾತನಾಡಲು ಹೇಳಬೇಕು ಹೀಗೆ ಮಾಡಿದಾಗ ಇವುಗಳಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದರೆ ಆಗ ಆ ವ್ಯಕ್ತಿಯು ಸ್ಟ್ರೋಕ್ ಗೆ ಒಳಗಾಗಿರುವ ಸಾಧ್ಯತೆ ಇರುತ್ತದೆ ಕೂಡಲೆ ಆಸ್ಪತ್ರೆಗೆ ದಾಖಲಿಸಬೇಕು.

ಈ ಸ್ಟ್ರೋಕ್ ಕ್ಕೆ ಮುಖ್ಯ ಕಾರಣವೆನೆಂದರೆ ನಮ್ಮ ಜೀವನ ಶೈಲಿ ಹಾಗೂ ಆಹಾರ ಶೈಲಿಯಿಂದ ದೈಹಿಕ‌ ಮತ್ತು ಮಾನಸಿಕ ಆರೋಗ್ಯ ಕೆಟ್ಟಾಗ ಸ್ಟ್ರೋಕ್ ಆಗುವ ಸಾಧ್ಯತೆಗಳು ಇವೆ. ಸ್ಟ್ರೋಕ್ ಅಪಾಯವನ್ನು ತಪ್ಪಿಸಿಕೊಳ್ಳಲು ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕು ಶುಗರ್ ಕಡಿಮೆ ಇರುವಂತಹ ಆಹಾರವನ್ನು ಹಾಗೂ ಫೈಬರ್ ಜಾಸ್ತಿ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು. ತಂಬಾಕು ಸೇವನೆ ಮಾಡಬಾರದು ರಕ್ತದ ಒತ್ತಡ ಮತ್ತು ಶುಗರನ್ನು ಕಂಟ್ರೋಲ್ ಅಲ್ಲಿ ಇಟ್ಟುಕೊಳ್ಳಬೇಕು. ನಿಯಮಿತ ವ್ಯಾಯಾಮ ಮಾಡಬೇಕು ಇದರ ಜೊತೆಗೆ ಮಾನಸಿಕ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now