.
ರೈತರು ಒಂದು ದೇಶದ ಹೇಳಿಕೆಗೆ ಎಷ್ಟು ಮುಖ್ಯ ಅನ್ನುವುದು ಎಲ್ಲರಿಗೂ ತಿಳಿದಿದೆ. ರೈತನಿಲ್ಲದೆ ಅನ್ನವು ಇಲ್ಲ ಹಾಗೂ ಕೃಷಿ ಚಟುವಟಿಕೆ ನಡೆಯದೆ ದೇಶದ ಆರ್ಥಿಕ ಅಭಿವೃದ್ಧಿ ಆಗಿಲ್ಲ ಎನ್ನುವುದನ್ನು ಎಲ್ಲರೂ ಮನಗಂಡಿದ್ದಾರೆ. ಇಷ್ಟು ಪ್ರಮುಖವಾಗಿರುವ ಈ ಕಸುಬನ್ನು ಮಾಡುವ ರೈತ ಮಾತ್ರ ಸದಾ ನಷ್ಟ ಹಾಗೂ ಸಾಲದ ಸುಳಿಯಲಿ ಸಿಲುಕಿಕೊಂಡು ನರಳುತ್ತಿರುತ್ತಾನೆ. ಇದನ್ನೆಲ್ಲಾ ಕಂಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸದಾ ಒಂದಲ್ಲ ಒಂದು ವಿಶೇಷ ಯೋಜನೆ ತರುವ ಮೂಲಕ ರೈತರ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತಿವೆ.
ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ ಇನ್ನು ಮುಂತಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಸಾಲ ಹಾಗೂ ಸಬ್ಸಿಡಿಯ ಅನುಕೂಲ ನೀಡಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮುಂತಾದವುಗಳನ್ನು ಖರೀದಿಸಲು ಮತ್ತು ಚಟುವಟಿಕೆಗೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿಸಲು ಸಹಾಯ ಮಾಡುತ್ತಿದೆ.
ಇದರೊಂದಿಗೆ ದೇಶದ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ವಲಯದ ಬ್ಯಾಂಕ್ ಗಳು ಕೂಡ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಅಥವಾ ಬಡ್ಡಿರಹಿತ ಸಾಲ ಸೌಲಭ್ಯ ನೀಡುತ್ತಿವೆ. ರೈತ ಈ ಸಾಲ ಸಹಾಯ ಪಡೆದು ಕೃಷಿ ಚಟುವಟಿಕೆ ಮಾಡಿದರೂ ಸಹ ಪ್ರಕೃತಿ ವಿಕೋಪವಾದ ಸಂದರ್ಭದಲ್ಲಿ ಅಥವಾ ಬೆಳೆ ಹಾನಿ ಆದ ಸಂದರ್ಭದಲ್ಲಿ ಆ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ.
ಇಂತಹ ಸಾಲದ ಸುಳಿಯಲ್ಲಿ ಸಿಲುಕಿಕೊಂಡ ರೈತರ ಸಾಲವನ್ನು ಅನೇಕ ಬಾರಿ ಸರ್ಕಾರ ಮನ್ನಾ ಮಾಡಿದೆ. ಈ ಬಾರಿಯೂ ಕೂಡ ಈ ಯೋಜನೆ ಅಡಿ ಸಾಲ ತೆಗೆದುಕೊಂಡ ರೈತರ ಸಾಲವು ಮನ್ನ ಆಗಿದ್ದು ಅದರ ಫಲಾನುಭವಿಗಳ ಪಟ್ಟಿ ಕೂಡ ಬಿಡುಗಡೆ ಆಗಿದೆ. ಈ ಬಾರಿ ಜಿಲ್ಲಾವಾರು ಫಲಾನುಭವಿಗಳ ಪಟ್ಟಿ ಬಿಡುಗಡೆ ಆಗಿದ್ದು ರಾಜ್ಯದ 2.37 ಲಕ್ಷ ರೈತರಿಗೆ ಅನುಕೂಲ ಆಗಿದೆ. ಸದ್ಯಕ್ಕೆ ಈಗ ಉತ್ತರ ಪ್ರದೇಶ ರಾಜ್ಯದ ರೈತರುಗಳಿಗೆ ಈ ಯೋಜನೆಯ ಫಲ ಸಿಗುತ್ತಿದ್ದು ಶೀಘ್ರದಲ್ಲೇ ಅದು ರಾಜ್ಯದ ರೈತರಿಗೂ ಸಿಗುವ ಸಾಧ್ಯತೆಯೂ ಇದೆ.
ಇದರ ಪ್ರಕಾರ 2,00,000 ದವರೆಗೆ ಸಾಲ ಪಡೆತ ರೈತರ ಸಾಲ ಮನ್ನಾ ಆಗಲಿದೆ. ಈ ಕಿಸಾನ್ ಕರ್ಜ್ ಮಾಫಿ ಪಟ್ಟಿ 2023 ರ ಪಟ್ಟಿಯನ್ನು ಪರೀಕ್ಷಿಸಿ, ತಾವು ಸಹ ಈ ಸಾಲ ಮನ್ನಾ ಯೋಜನೆಯ ಫಲಾನುಭವಿಗಳೇ ಎಂದು ಪರೀಕ್ಷಿಸಿಕೊಳ್ಳಬಹುದು. ರೈತರ ಕಲ್ಯಾಣ ಮತ್ತು ಕೃಷಿ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://upagriparshi.gov.in ಹೋಗಿ ಭೇಟಿ ಕೊಡಿ. ಈ ಮುಖಪುಟದಲ್ಲಿ ಜೈ ಕಿಸಾನ್ ಬೆಳೆ ಸಾಲ ಮನ್ನಾ ಯೋಜನೆಗಾಗಿ ನೀಡಲಾದ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಕ್ಲಿಕ್ ಮಾಡಿದ ತಕ್ಷಣ ಸಾಲ ಮನ್ನಾ ಪಟ್ಟಿಯು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅದನ್ನು ಡೌನ್ ಲೋಡ್ ಮಾಡಿ ನಿಮ್ಮ ಹೆಸರಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ಅದೇ ವೈಬ್ ಸೈಟ್ ಅಲ್ಲಿ ನೀವು ಜೈ ಕಿಸಾನ್ ಬೆಳೆ ಸಾಲ ಮನ್ನಾ ಯೋಜನೆಗಾಗಿ ಅರ್ಜಿ ಹಾಕಬಹುದು. ಈ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.