ಹೆಣ್ಣು ಮಕ್ಕಳಿಗೆ ಈ ಮುಟ್ಟು ಎನ್ನುವುದು ಒಂದು ರೀತಿಯ ವರವು ಹೌದು ಶಾಪವೂ ಹೌದು ಎಂದು ಹೇಳಬಹುದು. ಯಾಕೆಂದರೆ ದೇವರು ಕೊಟ್ಟಿರುವ ಈ ವರದಿಂದ ಮಾತ್ರವೇ ಅವಳು ಇನ್ನೊಂದು ಜೀವಕ್ಕೆ ಜೀವ ಕೊಡಲು ಸಾಧ್ಯವಾಗುವುದು, ಆದರೆ ಅವಳು ಅವಳ ಬದುಕಿನ 30 ಕ್ಕಿಂತಲೂ ಹೆಚ್ಚಿನ ವರ್ಷ ಪ್ರತಿ ತಿಂಗಳು ಈ ಮುಟ್ಟಿನ ಕಾರಣದಿಂದ ಅನೇಕ ರೀತಿಯ ಸಮಸ್ಯೆಗಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಅನುಭವಿಸ ಬೇಕಾಗುತ್ತದೆ ಶಾಲಾ ದಿನಗಳಲ್ಲಿ ಶುರುವಾಗುವ ಆಕೆಯ ಋತುಚಕ್ರ 45 ಅಥವಾ 50ರ ಆಸುಪಾಸಿನವರೆಗೂ ಮುಂದುವರೆದು ಪ್ರತಿ ತಿಂಗಳು ಕೂಡ ಅವಳ ದೇಹದಲ್ಲಿ ನಡೆಯುವುದರಿಂದ ಅನೇಕ ವ್ಯತ್ಯಾಸಗಳು ಅದರಲ್ಲಿ ಉಂಟಾದಾಗ ಅದು ಆಕೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಹೀಗಾಗಿ ಆಕೆ ಆರೋಗ್ಯವಾಗಿ ಚೆನ್ನಾಗಿರಬೇಕು ಎಂದರೆ ಮುಟ್ಟಿನ ಬಗ್ಗೆ ಯಾವ ಸಮಸ್ಯೆಗಳು ಇಲ್ಲದಂತೆ ಮೊದಲು ಆಕೆ ಕ್ಲಿಯರ್ ಆಗಿ ಇರಬೇಕು.
ಇಲ್ಲವಾದರೆ ಹಾರ್ಮೋನ್ ವ್ಯತ್ಯಾಸ ಸೇರಿದಂತೆ ಅದು ಮಾನಸಿಕ ಒತ್ತಡವಾಗಿ ಆಕೆಯನ್ನು ಬಹಳ ಕುಗ್ಗಿಸಿ ಬಿಡುತ್ತದೆ. ಅಲ್ಲದೆ ಮುಟ್ಟಾದಾಗ ಬರುವ ಹೊಟ್ಟೆ ನೋವು ಮತ್ತು ವಿಪರೀತವಾದ ರಕ್ತಸ್ರಾವ ಮೂರು ದಿನ ಸಮಸ್ಯೆ ಆದರೂ ಕೂಡ ಮುಟ್ಟಾಗದೆ ಹೋದರೆ ಅದು ಜೀವನಪೂರ್ತಿ ಕಾಡುವಂತಹ ಅನೇಕ ಕಾಯಿಲೆಗಳನ್ನು ತಂದುಬಿಡಬಹುದು. ಆದ್ದರಿಂದ ಪ್ರತಿ ತಿಂಗಳು ತಪ್ಪದೆ ಮುಟ್ಟಾಗುವಂತೆ ಹೆಣ್ಣು ಮಕ್ಕಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈಗಿನ ಕಾಲದಲ್ಲಿ ಓಡುತ್ತಿರುವ ಬದುಕಿನ ಚಕ್ರದ ಜೊತೆಗೆ ನಮ್ಮ ದೇಹವು ಪ್ರಕೃತಿ ಜೊತೆಗೆ ಹೊಂದಿಕೊಳ್ಳಲು ಸಮಯ ಆಗದೆ ಅಥವಾ ನಮ್ಮ ಜೀವನ ಶೈಲಿ ಬದಲಾಗಿರುವ ಕಾರಣ, ವಿಪರೀತವಾಗಿ ರಾಸಾಯನಿಕಯುಕ್ತ ಆಹಾರಗಳನ್ನು ಸೇವನೆ ಮಾಡುತ್ತಿರುವುದರಿಂದ ಹೀಗೆ ಈ ರೀತಿಯ ಅನೇಕ ಕಾರಣಗಳಿಂದ ಭಾರತ ದೇಶದ ಬಹುತೇಕ ಹೆಣ್ಣು ಮಕ್ಕಳು ಈಗ ಮುಟ್ಟಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಪ್ರತಿ ತಿಂಗಳೂ ಕೂಡ ತಿಂಗಳಿನ ಸರಿಯಾದ ದಿನಾಂಕದಂದು ಮುಟ್ಟಾಗದೆ ಅದು ಮುಂದೂಡುತ್ತಿದ್ದರೆ ಅಥವಾ ಸರಿಯಾಗಿ ಸ್ತ್ರಾವ ಆಗದೆ ಹೋದರೆ ಅದೇ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ. ಇಂತಹ ಸಮಸ್ಯೆಗಳಿಂದ ಬೇಸತ್ತು ಹೋಗಿರುವ ಹೆಣ್ಣು ಮಕ್ಕಳು ಇದಕ್ಕೆ ನ್ಯಾಚುರಲ್ ಆಗಿ ಪರಿಹಾರ ಹುಡುಕುತ್ತಿದ್ದರೆ ಈಗ ನಾವು ಹೇಳುವ ಈ ಅದ್ಭುತವಾದ ಮನೆ ಮದ್ದು ಮಾಡಿ ನೋಡಿ ಮತ್ತು ಇದರಿಂದ ಪರಿಣಾಮ ಕಂಡುಕೊಂಡು ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ. ಹಿಂದೆಲ್ಲ ಮಹಿಳೆಯರು ಮನೆಯಲ್ಲಿಯೇ ಇರುತ್ತಿದ್ದರು ಅವರಿಗೆ ಬಹಳ ವಿಶ್ರಾಂತಿ ಸಿಗುತ್ತಿತ್ತು ಹಾಗೂ ಹೇಳಿಕೊಳ್ಳುವಂತಹ ಹೆಚ್ಚಿನ ಒತ್ತಡ ಯಾವುದು ಅವರ ಮೇಲೆ ಇರುತ್ತೀರಲಿಲ್ಲ.
ಜವಾಬ್ದಾರಿ ಎಲ್ಲಾ ಮನೆ ಗಂಡಸರು ವಹಿಸಿಕೊಳ್ಳುತ್ತಿದ್ದರಿಂದ ಅವಳು ಅಡುಗೆ ಮನೆ ಕೆಲಸಕ್ಕೆ ಸೀಮಿತವಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಳು. ಆದರೆ ಇಂದು ವೃತ್ತಿ, ಓದು, ಕುಟುಂಬ ಎಲ್ಲವನ್ನು ಒಟ್ಟಿಗೆ ನಿಭಾಯಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಆಕೆಗೆ ಇರುವುದರಿಂದ ಎಲ್ಲವೂ ಒಟ್ಟಿಗೆ ಸೇರಿ ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿ ಅದರ ಮೂಲಕ ಹಾರ್ಮೋನ್ಸ್ ವೇರಿಯೇಷನ್ ಆಗಿ ಈ ರೀತಿ ಆಗಬಹುದು ಇಂತಹ ಸಂದರ್ಭದಲ್ಲಿ ನೀವೇನಾದರೂ ಸಿಲುಕಿಕೊಂಡಿದ್ದರೆ ಈ ರೀತಿ ಮಾಡಿ ನೋಡಿ.
ಮೊದಲಿಗೆ ಒಂದು ಪಾತ್ರೆಯಲ್ಲಿ ಕುದಿಯಲು ನೀರು ಇಟ್ಟು ಅದಕ್ಕೆ ಒಂದು ಚಮಚ ಜೀರಿಗೆ ಹಾಕಿ ಜೀರಿಗೆಯು ದೇಹಕ್ಕೆ ಉತ್ತಮವಾದ ಒಂದು ಮಸಾಲೆ ಪದಾರ್ಥವಾಗಿದೆ. ಇದು ಆಹಾರದಲ್ಲಿದ್ದಾಗ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆಯುರ್ವೇದದಲ್ಲೂ ಕೂಡ ಅನೇಕ ಕಾಯಿಲೆಗಳಿಗೆ ಇದು ಪರಿಹಾರವಾಗಿ ಉಪಯೋಗವಾಗುತ್ತದೆ. ಜೀರಿಗೆಯಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿರುವುದರಿಂದ ದೇಹಕ್ಕೆ ಬೇಡವಾದ ಕಲ್ಮಶಗಳನ್ನು ಇದು ಹೊರಗೆ ಹಾಕಿ ದೇಹವನ್ನು ರಕ್ಷಿಸುತ್ತದೆ. ಈ ಜೀರಿಗೆ ಜೊತೆ ಒಂದು ಚಮಚ ಕೊತ್ತಂಬರಿ ಬೀಜವನ್ನು ಕೂಡ ಹಾಕಿ ಕೊತ್ತಂಬರಿ ಬೀಜ ಕೂಡ ಆಯುರ್ವೇದಿಕ್ ಆಗಿ ದೇಹಕ್ಕೆ ಬಹಳ ಒಳ್ಳೆಯದನ್ನು ಮಾಡುತ್ತದೆ. ಈ ಎರಡು ಚೆನ್ನಾಗಿ ಕುದಿಯುತ್ತಿರುವಾಗ ಸ್ವಲ್ಪ ಬೆಲ್ಲವನ್ನು ಹಾಕಿ ಮತ್ತಷ್ಟು ಕುದಿಸಿ ಬೆಲ್ಲದ ಬದಲು ನಾಟಿ ಸಕ್ಕರೆಯನ್ನು ಕೂಡ ನೀವು ಹಾಕಬಹುದು ಆದರೆ ಯಾವುದೇ ಕಾರಣಕ್ಕೂ ಬಿಳಿ ಸಕ್ಕರೆಯನ್ನು ಮಾತ್ರ ಬೆಲ್ಲದ ಬದಲಾಗಿ ಬಳಸಬಾರದು.
ಈ ಮೂರು ಚೆನ್ನಾಗಿ ಕುದಿದ ನಂತರ ಇದನ್ನು ಒಂದು ಲೋಟಕ್ಕೆ ಶೋಧಿಸಿಕೊಳ್ಳಿ. ತಯಾರಾಗಿರುವ ಈ ಕಷಾಯವನ್ನು ನೀವು ಪ್ರತಿದಿನ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಅಥವಾ ಒಂದು ಲೋಟ ಬಿಸಿ ನೀರು ಕುಡಿದ ಬಳಿಕ ಊಟ ಮಾಡುವ ಒಂದು ತಾಸಿಗೂ ಮುಂಚೆ ಈ ಕಷಾಯವನ್ನು ಸೇವಿಸಿ ಒಂದು ತಾಸು ಆಗುವ ತನಕ ಬೇರೆ ಯಾವುದೇ ಆಹಾರ ಪದಾರ್ಥಗಳನ್ನಾಗಲಿ ದ್ರವ ಪದಾರ್ಥಗಳನ್ನಾಗಲಿ ಸೇವಿಸಬಾರದು ದಿನಕ್ಕೆ ಎರಡು ಬಾರಿ ಬೇಕಾದರೂ ಇದನ್ನು ಸೇರಿಸಿಸಬಹುದು. ರಾತ್ರಿ ಹೊತ್ತು ಇದನ್ನು ಸೇವಿಸುವಾಗ ಊಟಕ್ಕೂ ಒಂದು ತಾಸಿನ ಮುಂಚೆ ಇದನ್ನು ಸೇವಿಸಬೇಕು ನಂತರ ಊಟ ಮಾಡಬೇಕು. ಈ ರೀತಿ ಎರಡು ದಿನ ಮಾಡಿದರೆ ಸಾಕು ಅದರ ಒಳಗಡೆ ನಿಮ್ಮ ಪೀರಿಯಡ್ ಬಂದುಬಿಡುತ್ತದೆ.
ಈ ರೀತಿ ಆದ ಬಳಿಕ ಮುಂದಿನ ತಿಂಗಳು ಸಹ ನಾವು ಇದೇ ರೀತಿ ಮಾಡಬೇಕಾ ಎನ್ನುವ ಅನುಮಾನ ಇದ್ದರೆ ಮುಂದಿನ ತಿಂಗಳು ನಿಮ್ಮ ಪಿರಿಯಡ್ ಬರುವ ತನಕ ನೋಡಿ ನೀವೇನಾದರೂ ಅದೇ ದಿನ ಪೀರಿಯಡ್ ಆದರೆ ಮಾಡುವ ಅಗತ್ಯವಿಲ್ಲ. ಇಲ್ಲದೆ ಪಿರಿಯಡ್ ತಪ್ಪಿ ಹೋದರೆ ನೀವು ಈ ರೀತಿ ಮಾಡಿ ಮತ್ತೆ ಪ್ರಯತ್ನ ಪಡಬಹುದು. ಇದರ ರಿಸಲ್ಟ್ ನಿಮಗೆ ತೃಪ್ತಿಕರವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಸಹೋದರಿಯರಿಗೂ ಕೂಡ ಜೊತೆಗೆ ನಿಮ್ಮ ಸಹೋದ್ಯೋಗಿಗಳಿಗೂ ಕೂಡ ಈ ಅದ್ಭುತವಾದ ಮನೆಮದ್ದಿನ ಬಗ್ಗೆ ತಿಳಿಸಿ ಕೊಡಿ.