ಅಯ್ಯಪ್ಪ ಮಸಗಿ ಹೆಸರು ಲೋಕದಾದ್ಯಂತ ವಾಟರ್ ಡಾಕ್ಟರ್ ವಾಟರ್ ಮ್ಯಾಜಿಸಿಯನ್ ವಾಟರ್ ಗಾಂಧಿ ಎಂದೇ ಪ್ರಖ್ಯಾತವಾಗಿದೆ. ಭಾರತದಲ್ಲಿ ನೀರಿನ ಕೊರತೆಯ ಸಮಸ್ಯೆ ಬಗೆಹರಿಸಿ ನೀರನ್ನು ಉಳಿಸಬೇಕು ಜಲಕ್ಷಾಮ ಎದುರಿಸಬಾರದು ಎನ್ನುವ ಕಾರಣಕ್ಕಾಗಿ ನೂರಾರು ಪರಿಹಾರ ತಂತ್ರಗಳನ್ನು ಪ್ರಯತ್ನಿಸಿ ಯಶಸ್ವಿಯಾಗಿ ಲಕ್ಷಾಂತರ ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಅವರ ಕೊಡುಗೆಯನ್ನು ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ನಗರ ಪ್ರದೇಶಗಳಲ್ಲಿ ನೀರಿನ ಕೊರತೆ ನೀಗಿಸಲು ಎಲ್ಲಕ್ಕಿಂತ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ರೈತನಿಗೆ ನೀರಿನ ಸಮಸ್ಯೆ ಇತ್ಯರ್ಥವಾಗಲು ಬಳಸಲಾಗಿದೆ. ಬಾಲ್ಯದಿಂದಲೂ ನೀರಿಗೆ ಇರುವ ಕಷ್ಟದ ಬಗ್ಗೆ ಅರಿತಿರುವ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು ನೀರನ್ನು ಉಳಿಸುವ ಕಡೆ ಮನಸ್ಸು ಮಾಡಿ ಗೆದ್ದಿದ್ದಾರೆ.
ನೀರಿನ ಅಗತ್ಯತೆ ಮತ್ತು ನೀರಿರದೆ ಉಂಟಾಗುವ ಸಮಸ್ಯೆಗಳ ಬಗ್ಗೆ ಎಚ್ಚರಿಸುವ ಇವರು ಮುಂದೆ ಬರುವ ಅನಾಹುತವನ್ನು ತಪ್ಪಿಸಿ ಎನ್ನುವುದನ್ನು ಸಾರಿ ಹೇಳುತ್ತಾ ಹೆಚ್ಚು ವ್ಯಕ್ತಿಗಳನ್ನು ತಲುಪಲು ಮತ್ತು ಅವರಿಗೆ ಸಹಾಯ ಮಾಡಲು ಸೆಪ್ಟೆಂಬರ್ 2005 ರಲ್ಲಿ ಲಾಭರಹಿತ ವಾಟರ್ ಲಿಟರಸಿ ಫೌಂಡೇಶನ್ (WLF) ಅನ್ನು ಸ್ಥಾಪಿಸಿದ್ದಾರೆ.
ಈ ಸುದ್ದಿ ಓದಿ:- ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!
ಇಂದು ಇವರು ರೈತನಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನೀಡಿರುವ ಒಂದು ಸಲಹೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ನೀಡುತ್ತಾ ಇದೆ ಒಂದು ಟೆಕ್ನಿಕ್ ಅವರು ಸಹ ಬಳಸಿ ತಮ್ಮ 25 ಎಕರೆ ಕೃಷಿ ಭೂಮಿಯಲ್ಲಿ ಹೇಗೆ ಯಶಸ್ವಿಯಾಗಿದ್ದಾರೆ ಒಂದೇ ಒಂದು ಪೋರ್ಟಲ್ ನಿಂದ ನೀವು ತೆಗೆದು ಹೇಗೆ ಎಂದು ನೀರಿನ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ ಎನ್ನುವ ಕುತೂಹಲಕಾರಿ ಅಂಶವನ್ನು ತಿಳಿಸಲು ಇಚ್ಛಿಸುತ್ತಿದ್ದೇವೆ.
ಮೂಲತಃ ಗದಗಿನವರಾದ ಇವರು ತಮ್ಮ ಮೇಲೆ ಅನೇಕ ಬಾರಿ ಈ ರೀತಿ ಪ್ರಯೋಗಗಳನ್ನು ಮಾಡಿಕೊಂಡಿದ್ದಾರೆ. ಹೀಗೆ ಎಂಟು ವರ್ಷಗಳ ಹಿಂದೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಕುರುಬರಹಳ್ಳಿಯಲ್ಲಿ 26 ಎಕರೆ ಕೃಷಿ ಭೂಮಿ ಕೊಂಡು 4 ಎಕರೆಯಲ್ಲಿ ಅರಣ್ಯ ಆಧಾರಿತ ಕೃಷಿ ಮಾಡುತ್ತಿದ್ದಾರೆ. ಅಲ್ಲಿಯೇ 189 ಗುಂಡಿಗಳು, 3 ಕಂಪಾರ್ಟ್ಮೆಂಟ್ ಗಳು, ನೂರಾರು ಚೌಕ್ ಗಳು, 3 ಬೋರ್ವೆಲ್ ರಿಚಾರ್ಜ್ ಗಳು 11 ಕೆರೆಗಳನ್ನು ಕಟ್ಟಿದ್ದಾರೆ.
ಈ ನೀರಿನ ಸಂಪನ್ಮೂಲದಿಂದ 450ಕ್ಕಿಂತ ಹೆಚ್ಚು ತೆಂಗಿನ ಮರಗಳನ್ನು ಸಮೃದ್ಧಿಯಾಗಿ ಬೆಳೆದಿದ್ದಾರೆ. ನಿಂಬ, ದಾಳಿಂಬೆ ಗಿಡಗಳು ಸೇರಿದಂತೆ ಬಹುತೇಕ ಎಲ್ಲಾ ರೀತಿಯ ಬೆಳೆಗಳನ್ನು ಒಂದು ಚೂರು ರಾಸಾಯನಿಕ ಉಪಯೋಗಿಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿದ್ದಾರೆ 26 ಎಕರೆಯನ್ನು ಕೃಷಿ ಭೂಮಿಯಲ್ಲಿ ಒಂದೇ ಒಂದು ಬೋರ್ವೆಲ್ ನಿಂದ ನಿರ್ವಹಣೆ ಮಾಡುತ್ತಿದ್ದಾರೆ.
ಈ ಸುದ್ದಿ ಓದಿ:- ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
ಹಾಗೂ ಇವರು ಅನ್ವಯಿಸಿಕೊಂಡಿರುವ ಈ ಟೆಕ್ನಿಕ್ ನಿಂದ 4 ಕಿಲೋಮೀಟರ್ ಆಚೆಗಿನ ಪ್ರದೇಶಕ್ಕಿಂತ ಇವರಿರುವ ಪ್ರದೇಶದಲ್ಲಿ ನಾಲ್ಕು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕೂಡ ಕಡಿಮೆಯಾಗಿದೆ. ನಾನು ಜಮೀನು ಕೊಂಡಾಗ ಇಲ್ಲಿ ಏನು ಆಗಲ್ಲ ಎಂದು ಹೇಳುತ್ತಿದ್ದವರು ಈಗ ಇಲ್ಲಿಗೆ ಬಂದು ನೋಡಿದರೆ ಹೋಗಲು ಮನಸ್ಸೇ ಇಲ್ಲ ಎನ್ನುತ್ತಿದ್ದಾರೆ.
ಎಲ್ಲರಿಗೂ ಈ ರೀತಿ ಮಾಡಿಕೊಳ್ಳಲು ಸಾಧ್ಯವಿದೆ ಎನ್ನುವ ಇವರು ಹೇಳುವುದೇನೆಂದರೆ ಒಂದು ಎಕರೆ ಜಮೀನು ಇದ್ದರೆ ಅದರಲ್ಲಿ ಒಂದು ಗುಂಟೆ ಜಮೀನನ್ನು ನೀರಿನ ಗುಂಡಿ ಮಾಡಲು ಮೀಸಲಿಡಿ. ಒಂದು ಕೊಳವೆ ಬಾವಿಗೆ ಒಂದು ಕೆರೆ ನಿರ್ಮಾಣ ಮಾಡಬೇಕು. 10 ಹೆಕ್ಟೇರ್ ಭೂಮಿ ಇದ್ದರೆ 30*40, 60*40 ಕೆರೆಗಳನ್ನು ನಿರ್ಮಾಣ ಮಾಡಿ ನೀರನ್ನು ನಿಲ್ಲಿಸಿ.
ಆ ನೀರನ್ನು ಫಿಲ್ಟರ್ ಮಾಡಿ ನಮ್ಮ ಬೋರ್ ಗೆ ಇಂಜೆಕ್ಟ್ ಮಾಡಬೇಕು ಮತ್ತು ಇಂಗಿರುವ ನೀರು ಇಂಡೈರೆಕ್ಟ್ ಆಗಿ ನಮ್ಮ ಜಮೀನಿಗೆ ಸಪೋರ್ಟ್ ಮಾಡುತ್ತದೆ ಎನ್ನುತ್ತಾರೆ ಇವರು. ಈ ವಿಡಿಯೋವನ್ನು ನೋಡಿದರೆ ಇದರ ಪೂರ್ತಿ ಮಾಹಿತಿ ತಿಳಿಯುತ್ತದೆ. ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಇವರ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ, ಕಾರ್ಯಗಾರಗಳಲ್ಲಿ ಭಾಗಿಯಾಗಿ.
9448379497