ಉದ್ಯೋಗಿಗಳ ಭವಿಷ್ಯ ನಿಧಿಯನ್ನು ಪಿಎಫ್ ಎಂದು ಕರೆಯಲಾಗುತ್ತದೆ. ಈ ಒಂದು ಯೋಜನೆಯ ಕೆಲವೊಂದಷ್ಟು ನಿರ್ದಿಷ್ಟ ಕಂಪನಿಗಳು ಅಂದರೆ ನಿರ್ದಿಷ್ಟ ಸಂಸ್ಥೆಗಳಲ್ಲಿ ಕಾಯಂ ಆಗಿ ಕೆಲಸ ನಿರ್ವಹಿಸುತ್ತಿರು ವಂತಹ ಉದ್ಯೋಗಿಗಳಿಗೆ ಈ ಹಣವನ್ನು ಕೊಡಲಾಗುತ್ತದೆ. ಈ ಒಂದು ಹಣವು ಅವರ ಮುಂದಿನ ದಿನಗಳಲ್ಲಿ ಅಂದರೆ ಅವರು ಆ ಕೆಲಸದಿಂದ ನಿವೃತ್ತಿಯನ್ನು ಹೊಂದಿದಂತಹ ಸಮಯದಲ್ಲಿ ಕೊಡುವಂತಹ ಹಣವಾಗಿದ್ದು.
ಅವರು ಕೆಲಸಕ್ಕೆ ಸೇರಿಕೊಂಡ ದಿನದಿಂದ ಅವರು ಕೆಲಸದಿಂದ ಬಿಟ್ಟು ಹೋಗುವ ತನಕ ಮಾಡಿರುವಂತಹ ಕೆಲಸದಲ್ಲಿ ಉಳಿತಾಯವಾಗಿರುವಂತಹ ಹಣ, ಅಂದರೆ ಇಂತಿಷ್ಟು ಹಣವನ್ನು ಅವರಿಗೆ ಕೊಡಲಾಗುತ್ತದೆ. ಈ ಒಂದು ಹಣವನ್ನು ಪಿಎಫ್ ಅಂದರೆ ಪ್ರಾವಿಡೆಂಟ್ ಫಂಡ್ ಎಂದು ಕೊಡುತ್ತಾರೆ. ಈ ಒಂದು ಹಣವು ಅವರ ಮುಂದಿನ ದಿನಗಳಲ್ಲಿ ಬಹಳ ಉತ್ತಮವಾದಂತಹ ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು.
ಹಾಗೂ ಅವರ ಕೊನೆಯ ಹಂತದಲ್ಲಿ ಯಾರು ಕೂಡ ಅವರನ್ನು ನೋಡಿಕೊಳ್ಳದೆ ಇರುವಂತಹ ಸಮಯದಲ್ಲಿ. ಈ ಒಂದು ಹಣದಿಂದ ಅವರು ತಮ್ಮ ಜೀವನವನ್ನು ಸಾಗಿಸ ಬಹುದಾಗಿದ್ದು ಅದರಲ್ಲೂ ಹೆಚ್ಚಿನ ಮಕ್ಕಳು ಈ ಒಂದು ಹಣದ ಉದ್ದೇಶದಿಂದಲೇ ಅವರ ತಂದೆ ತಾಯಿ ಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಅವರನ್ನು ನೋಡಿಕೊಂಡರೆ ಕೊನೆಯಲ್ಲಿ ಅವರ ಪಿಎಫ್ ಹಣ ಸಿಗುತ್ತದೆ ಎನ್ನುವ ಉದ್ದೇಶದಿಂದಲೂ ಕೂಡ ಮಕ್ಕಳು ದುಡ್ಡಿನ ಆಸೆಗೆ ಈ ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ.
ಬದಲಿಗೆ ಮಕ್ಕಳು ಈ ರೀತಿಯಾದಂತಹ ಯಾವುದೇ ಆಸೆಯನ್ನು ಇಟ್ಟುಕೊಂಡು ನೋಡಿಕೊಳ್ಳುವುದರ ಬದಲು ನಿಮ್ಮ ತಂದೆ ತಾಯಿಯ ಮೇಲೆ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡು ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಎಲ್ಲರ ಕರ್ತವ್ಯವಾಗಿರುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಹಣಕಾಸಿನ ಮೇಲೆ ಹೆಚ್ಚು ಆಸೆಯನ್ನು ಇಟ್ಟುಕೊಂಡಿರುವುದರಿಂದ ಅವರು ಮುಂದಿನ ದಿನಗಳಲ್ಲಿ ಕೆಲವೊಂದಷ್ಟು ಸಂಕಷ್ಟಗಳಿಗೂ ಕೂಡ ಸಿಲುಕಿ ಹಾಕಿಕೊಳ್ಳಬಹುದು.
ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ತಮ್ಮ ಜೀವನದಲ್ಲಿ ನಿಮ್ಮ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ ವಾಗಿರುತ್ತದೆ ಎಂದೇ ಹೇಳಬಹುದು. ಕೆಲವೊಮ್ಮೆ ಪಿಎಫ್ ಹಣವನ್ನು ಕೆಲವೊಂದಷ್ಟು ಸಂದರ್ಭಗಳಲ್ಲಿಯೂ ಕೂಡ ಪಡೆದುಕೊಳ್ಳಬಹುದು ಅದರಲ್ಲೂ ಆ ಒಂದು ಹಣವನ್ನು ಪಡೆದುಕೊಳ್ಳುತ್ತಿರುವುದಕ್ಕೆ ಮೂಲ ಕಾರಣ ಹಾಗೂ ಅದಕ್ಕೆ ಕೆಲವೊಂದಷ್ಟು ದಾಖಲಾತಿಗಳನ್ನು ಕೊಡುವು ದರ ಮೂಲಕ ನೀವು ಮಧ್ಯದಲ್ಲಿಯೇ ಪಿಎಫ್ ಹಣವನ್ನು ಪಡೆಯ ಬಹುದಾಗಿರುತ್ತದೆ.
ಹಾಗಾದರೆ ಯಾವ ಸಂದರ್ಭಗಳಲ್ಲಿ ನೀವು ಪಿಎಫ್ ಹಣವನ್ನು ಪಡೆದು ಕೊಳ್ಳಬಹುದು ಎಂದು ನೋಡುವುದಾದರೆ. ವೈದ್ಯಕೀಯ ಉದ್ದೇಶಗಳು ಅಂದರೆ ನಿಮ್ಮ ತಂದೆ ಅಥವಾ ತಾಯಿ ನಿಮ್ಮ ಹೆಂಡತಿಗೆ ಏನಾದರೂ ವೈದ್ಯಕೀಯಕ್ಕೆ ಹಣಕಾಸಿನ ಅವಶ್ಯಕತೆ ಇದ್ದರೆ ಅಂತಹ ಸಮಯದಲ್ಲಿ ಅವರಿಗೆ ಸಂಬಂಧಿಸಿದೆ ಕೆಲವೊಂದಷ್ಟು ವೈದ್ಯಕೀಯ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಹಣವನ್ನು ಪಡೆಯಬಹುದು.
ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೆಯೇ ಶಿಕ್ಷಣ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಮಗ ಅಥವಾ ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸ ಕೊಡಬೇಕು ಎಂದು ಇಚ್ಚಿಸುತ್ತಿದ್ದರೆ. ಆ ಸಂದರ್ಭದಲ್ಲಿ ಅದರ ಉದ್ದೇಶದಿಂದ ನೀವು ಪಿಎಫ್ ಹಣವನ್ನು ಮುಂಚೆಯೇ ಪಡೆಯಬಹುದು. ಅದೇ ರೀತಿಯಾಗಿ ಗೃಹ ಸಾಲ ಮರುಪಾವತಿ, ಮನೆ ನವೀಕರಣ ಇಂತಹ ಸಮಯದಲ್ಲಿ ಅಗತ್ಯ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಮೊದಲೇ ಪಿಎಫ್ ಹಣವನ್ನು ಪಡೆದು ಕೊಳ್ಳಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.