EPF ಎಂದರೆ ಎಂಪ್ಲಾಯಿ ಪ್ರಾವಿಟೆನ್ಟ್ರಿ ಫಂಡ್. ಇದರಲ್ಲಿ ಮೂರು ಜನರ ಶೇರ್ ಇರುತ್ತದೆ ಎಂಪ್ಲಾಯಿ, ಎಂಪ್ಲಾಯರ್ ಮತ್ತು ಸರ್ಕಾರ. ಮೂರು ಜನರ ಶೇರ್ ಯಿಂದ ನಿಮ್ಮ PF ಖಾತೆಗೆ ಹಣ ತುಂಬುತ್ತಾ ಇರುತ್ತದೆ. ಪ್ರತಿ ತಿಂಗಳು ಕೂಡ ಉದ್ಯೋಗ ಮಾಡುವವರ ಖಾತೆಯಿಂದ PF ಅಕೌಂಟ್ ಗೆ ಹಣ ಹೋಗುತ್ತದೆ ನಿಮ್ಮಷ್ಟೇ ಕಂಪೆನಿಯಿಂದಲೂ ಕೂಡ ಶೇರ್ ಹೋಗುತ್ತದೆ.
ಸರ್ಕಾರ ಅದಕ್ಕೆ ಮತ್ತಷ್ಟು ಹಣ ಸೇರಿಸಿ ನೀವು ಕ್ಲೈಮ್ ಮಾಡಿದಾಗ ಕೊಡುತ್ತದೆ. ಹೆಚ್ಚು ಜನರು ಕೆಲಸ ಬಿಟ್ಟಾಗ ಈ ಹಣ ತೆಗೆದುಕೊಳ್ಳುತ್ತಾರೆ ಆದರೆ ಕೆಲವು ಎಮರ್ಜೆನ್ಸಿ ಇದ್ದಾಗ ಕೆಲಸ ಮಾಡುತ್ತಿರುವಾಗಲೇ ಇದರ ಹಣ ತೆಗೆಯಬಹುದಾಗುತ್ತದೆ, ಇದಕ್ಕೂ ಅವಕಾಶವಿದೆ. ಈ ಎಲ್ಲಾ ದಾಖಲೆಗಳು ಸರಿ ಇದ್ದರೆ ನಿಮ್ಮ ಖಾತೆಗೆ ಏಳು ದಿನಗಳಲ್ಲಿ ಹಣ ಜಮೆ ಆಗುತ್ತದೆ.
EPF ಅಪ್ಲೈ ಮಾಡುವ ವಿಧಾನ:-
● ಗೂಗಲ್ ಓಪನ್ ಮಾಡಿ EPF for member log in ಎಂದು ಸರ್ಚ್ ಕೊಡಿ ಮೊದಲಿಗೆ ಮೆಂಬರ್ ಹೋಂ ಎಂದು ಬರುತ್ತದೆ ಅದನ್ನು ಕ್ಲಿಕ್ ಮಾಡಿ.
● ನಿಮ್ಮ UAN ನಂಬರ್ ಪಾಸ್ವರ್ಡ್ ಎಂಟ್ರಿ ಮಾಡಿ, ನಂತರ ಕ್ಯಾಪ್ಚ ಕೇಳುತ್ತದೆ. ಅದನ್ನು ಕೂಡ ಎಂಟ್ರಿ ಮಾಡುವ ಮೂಲಕ ಮುಂದಿನ ಹಂತಕ್ಕೆ ಹೋಗಿ. ಪಾಸ್ವರ್ಡ್ ಮರೆತು ಹೋಗಿದ್ದರೆ ಫರ್ಗೆಟ್ ಪಾಸ್ವರ್ಡ್ ಕೊಟ್ಟು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿ . ಸೂಚಿಸಿರುವ ನಿಮ್ಮದ ಪ್ರಕಾರವೇ ಹೊಸ ಪಾಸ್ವರ್ಡ್ ಜನರೇಟ್ ಮಾಡಿ. ಮತ್ತೆ ಹೋಂ ಪೇಜ್ ಗೆ ಹೋಗಿ ಲಾಗಿನ್ ಆಗಿ.
● ಆಗ EPFO ಅಫೀಸಿಯಲ್ ಪೇಜ್ ತೆರೆದುಕೊಳ್ಳುತ್ತದೆ ಅದರಲ್ಲಿ ಹಲವಾರು ಆಪ್ಷನ್ಗಳು ಇರುತ್ತದೆ ನಿಮ್ಮ ಪ್ರೊಫೈಲ್ ಕೂಡ ಇರುತ್ತದೆ ಅದನ್ನು ಚೆಕ್ ಮಾಡಬಹುದು ಸದ್ಯಕ್ಕೆ PF ಮಾಡಲು ಆನ್ಲೈನ್ ಸರ್ವಿಸಸ್ ಎನ್ನುವುದನ್ನು ಆಯ್ಕೆ ಮಾಡಿ.
● ಅದರಲ್ಲಿ ನಿಮಗೆ ನಾಲ್ಕು ಆಪ್ಷನ್ ತೋರುತ್ತದೆ ಮೊದಲನೇ ಆಪ್ಷನ್ ಅಲ್ಲಿ ಫಾರಂ 31 19 10C & 10D ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ಮೆಂಬರ್ ಡೀಟೆಲ್ಸ್ ಅಲ್ಲಿ ನಿಮ್ಮದು KYC ಅಪ್ಡೇಟ್ ಆಗಿದ್ದರೆ ಎಲ್ಲ ಮಾಹಿತಿ ಇರುತ್ತದೆ. ಕ್ಲೈಮ್ ಮಾಡಲು ಅದೇ ಬ್ಯಾಂಕ್ ಖಾತೆ ವಿವರ ಕೊಡಬೇಕಾಗುತ್ತದೆ. ನೀವು KYC ಮಾಡಿರುವ ನೀಡಿದ ಬ್ಯಾಂಕ್ ಖಾತೆ ವಿವರ ಕೊಡಬೇಕು. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಎಂಟ್ರಿ ಮಾಡಿ.
● ಮುಂದಿನ ಪೇಜ್ ಅಲ್ಲಿ ನಿಮ್ಮ ವೈಯಕ್ತಿಕ ವಿವರ ಜೊತೆ ಸರ್ವಿಸ್ ಡೀಟೇಲ್ಸ್ ಇರುತ್ತದೆ. ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ನೀವು ಕೆಲಸ ಮಾಡಿದರೆ ಆ ಕಂಪನಿಗಳಲ್ಲಿ ಕಟ್ ಆಗಿರುವ PF ಮಾಹಿತಿ ಇರುತ್ತದೆ ನಿಮಗೆ ಯಾವ ಕಂಪನಿಯ PF ವಾಪಸ್ ಪಡೆಯಬೇಕು ಅದನ್ನು ಸೆಲೆಕ್ಟ್ ಮಾಡಿ. ತನೀವು ಕೆಲಸಕ್ಕೆ ಸೇರಿದ ದಿನಾಂಕ, ಕೆಲಸ ಬಿಟ್ಟ ದಿನಾಂಕ ಮತ್ತು ಯಾವ ಕಾರಕ್ಕಾಗಿ ಎಂದು ಕೇರುತ್ತದೆ ಒಂದು ವೇಳೆ ನೀವು ಕೆಲಸ ಬಿಡದೆ ಸಾಲ ತೆಗೆದುಕೊಳ್ಳುತ್ತಿದ್ದರೆ ಅದನ್ನು ಸ್ಕಿಪ್ ಮಾಡಬಹುದು ಉಳಿದ ಎಲ್ಲಾ ಆಪ್ಷನ್ ಗಳನ್ನು ಕೂಡ ಸರಿಯಾದ ಮಾಹಿತಿ ಹಾಕಿ ಫಿಲ್ ಮಾಡಿ.
● ಮುಂದಿನ ಹಂತದಲ್ಲಿ ನಿಮ್ಮ UAN ಸಂಖ್ಯೆ, ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಈ ವಿವರಗಳನ್ನು ಫಿಲ್ ಮಾಡಿ ನೀವು ಕೆಲಸಕ್ಕೆ ಸೇರಿದ ದಿನಾಂಕ ಫಿಲ್ ಮಾಡಿ ಕೊನೆಯ ಆಪ್ಷನ್ ಅಲ್ಲಿ ಯಾವ ಸರ್ವಿಸ್ಗೆ ಅಪ್ಲೈ ಮಾಡುತ್ತಿದ್ದೀರಾ ಇದು ಕೇಳಲಾಗಿರುತ್ತದೆ PF ಅಡ್ವಾನ್ಸ್ ಫಾರಂ 31 ಸೆಲೆಕ್ಟ್ ಮಾಡಿ ನಂತರ ನಿಮ್ಮ ಪಾಸ್ ಬುಕ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಇಷ್ಟಾದರೆ 7 ದಿನಕ್ಕೆ ನಿಮ್ಮ ಖಾತೆಗೆ ಹಣ ಬರುತ್ತದೆ.