ಇ-ಶ್ರಮ್ ಕಾರ್ಡ್ ದೇಶದಾದ್ಯಂತ ಎಲ್ಲ ಜನರಿಗೂ ಪರಿಚಿತವಾಗಿರುವ ಒಂದು ಗುರುತಿನ ಚೀಟಿ ಆಗಿದೆ. ಅಸಂಘಟಿತ ವಲಯದ ಕಾರ್ಮಿಕರಾದ ತರಕಾರಿ ಮಾರಾಟಗಾರರು, ಸಣ್ಣ ರೈತರು, ಕೃಷಿ ಕಾರ್ಮಿಕರು, ಕಟ್ಟಡ ಕೆಲಸಗಾರರು, ಮನೆ ಕೆಲಸದವರು ಈ ರೀತಿ ಅಸಂಘಟಿತ ವಲಯದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರು ಪಡೆಯುವಂತಹ ಗುರುತಿನ ಚೀಟಿ ಆಗಿದೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸುವ ಸಲುವಾಗಿ ಹಾಗೂ ಅವರಿಗಾಗಿ ಯೋಜನೆಗಳನ್ನು ರೂಪಿಸಿದಾಗ ಶೀಘ್ರವಾಗಿ ಅವರಿಗೆ ತಲುಪಿಸಲು ಸರ್ಕಾರ ಇ-ಶ್ರಮ್ ಕಾರ್ಡ್ ಗೆ ಮಾನ್ಯತೆ ನೀಡುತ್ತದೆ. ನೀವು ಕೂಡ ಕಾರ್ಮಿಕರಾಗಿದ್ದು ಇ-ಶ್ರಮ್ ಕಾರ್ಡ್ ಹೊಂದಿದ್ದರೆ ನಿಮಗೆ ಕಷ್ಟಕಾಲದಲ್ಲಿ 2 ಲಕ್ಷಗಳ ಹಣಕಾಸಿನ ನೆರವು ಮತ್ತು ಇನ್ನಿತರ ಅನುಕೂಲತೆಗಳು ಸಿಗಲಿದೆ. ಇದರ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಸಿಗುವ ಪ್ರಯೋಜನಗಳು:-
● ಇ-ಶ್ರಮ್ ಕಾರ್ಡ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿಗೆ ಸರ್ಕಾರದಿಂದ ಪ್ರತಿ ತಿಂಗಳು 1000ರೂ. ಆರ್ಥಿಕ ನೆರವು ಸಿಗುತ್ತದೆ.
● ನೋಂದಣಿಯಾಗಿ ಇ-ಶ್ರಮ್ ಕಾರ್ಡ್ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ 2 ಲಕ್ಷದವರೆಗಿನ ಅಪಘಾತ ವಿಮೆಯನ್ನು ನೀಡುತ್ತದೆ. ಅಪಘಾತದಿಂದ ವ್ಯಕ್ತಿ ಮೃ.ತ ಪಟ್ಟರೆ ಸರ್ಕಾರದಿಂದ 2 ಲಕ್ಷದವರೆಗೆ ನೆರವು ನೀಡಲಾಗುತ್ತದೆ.
● ಕಾರ್ಮಿಕರ ಮಕ್ಕಳ ಶಿಕ್ಷಣದ ವೆಚ್ಚ ಸೇರಿದಂತೆ ಅನೇಕ ಸೌಲಭ್ಯವನ್ನು ಓದಗಿಸಲಾಗುತ್ತದೆ. ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
● ಭವಿಷ್ಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗಾಗಿ ರೂಪಿಸುವ ಯೋಜನೆಯಗಳಲ್ಲಿ ಮೊದಲು ಈ ಇ-ಶ್ರಮ್ ಕಾರ್ಡ್ ಹೊಂದಿರುವವರಿಗೆ ಆಧ್ಯತೆ ನೀಡಲಾಗುತ್ತದೆ.
● ಶ್ರಮ ಯೋಗಿ ಮನ್ ಧನ್ ಯೋಜನೆಯಡಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಪಿಂಚಣಿ ಸೌಲಭ್ಯವನ್ನು ನೀಡಬಹುದು.
● ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಆರೋಗ್ಯ ಮತ್ತು ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಗುವುದು.
ಇ-ಶ್ರಮ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್ ಜೆರಾಕ್ಸ್
● ಮತದಾರರ ಚೀಟಿ
● ಬ್ಯಾಂಕ್ ಖಾತೆ ವಿವರಗಳು
● ಕುಟುಂಬ ಸದಸ್ಯರ ವಿವರಗಳು
● ಗುರುತಿನ ಪುರಾವೆ
● ವಿಳಾಸ ಪುರಾವೆ
● ಪಡಿತರ ಚೀಟಿ
● ಪಾಸ್ಪೋರ್ಟ್ ಗಾತ್ರದ 4 ಫೋಟೋ
● ಮೊಬೈಲ್ ನಂಬರ್
● ಪ್ಯಾನ್ ಕಾರ್ಡ್ ಜೆರಾಕ್ಸ್
● ವಾಸಸ್ಥಳ ಪ್ರಮಾಣ ಪತ್ರ
ಇ-ಶ್ರಮ್ ಕಾರ್ಡ್ ಪಡೆಯಲು ಇರುವ ಕಂಡೀಶನ್ಗಳು:-
● ಅರ್ಜಿದಾರರು ಭಾರತೀಯ ನಿವಾಸಿಯಾಗಿರುವುದು ಕಡ್ಡಾಯವಾಗಿದೆ.
● ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು ಮತ್ತು 59 ವರ್ಷಕ್ಕಿಂತ ಕಡಿಮೆಯಿರಬೇಕು.
● ಅರ್ಜಿದಾರರು ಹಾಗೂ ಕುಟುಂಬದವರು ಯಾವುದೇ ರೂಪದಲ್ಲಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು.
● ಅರ್ಜಿದಾರರ ಆಧಾರ್ ಕಾರ್ಡ್ ಅನ್ನು UIDAI ಅಧಿಕೃತ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು.
● ಅರ್ಜಿದಾರರು ಅಥವಾ ಅವರ ಕುಟುಂಬದ ಯಾರಾದರೂ ಸರ್ಕಾರಿ ಉದ್ಯೋಗವನ್ನು ಹೊಂದಿರಬಾರದು.
● ಆರ್ಥಿಕವಾಗಿ ಹಿಂದೂಳಿದವರಿಗೆ ಹಾಗೂ ನಿರ್ಗತಿಕ ಕಾರ್ಮಿಕರಿಗೆ ಮಾತ್ರ ಇ-ಶ್ರಮ್ ಕಾರ್ಡ್ ಸೌಲಭ್ಯವನ್ನು ನೀಡಲಾಗುತ್ತದೆ.
● EPFO, ESIC ಸೌಲಭ್ಯಗಳನ್ನು ಪಡೆದಿರಬಾರದು.
https://eshram.gov.in ಗೆ ಭೇಟಿ ನೀಡಿ ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಇ-ಶ್ರಮ್ ಕಾರ್ಡ್ ಪಡೆದುಕೊಳ್ಳಬಹುದು. ನಂತರ ಇ-ಶ್ರಮ್ ಕಾರ್ಡ್ ಯಾವುದೇ ಯೋಜನೆ ಸಹಾಯವನ್ನು ಪಡೆಯಲು ಇದೇ ವೆಬ್ಸೈಟ್ ಗೆ ಬಂದು ಅರ್ಜಿ ಫಾರಂ ಓಪನ್ ಮಾಡಿ ಸಂಬಂಧ ಪಟ್ಟ ದಾಖಲೆಗಳನ್ನು ಮಾಡುವ ಮೂಲಕ ಅರ್ಜಿ ಸಲ್ಲಿಸಿ ಅಸಂಘಟಿತ ವಲಯದ ಕಾರ್ಮಿಕರಿಗೆ ಇರುವ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು.