ಪಿತ್ರಾರ್ಜಿತ ಆಸ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ನ 2020 ರ ಆದೇಶದ ಪ್ರಕಾರ ಮನೆಯ ಯಜಮಾನ ವಿಲ್ ಬರೆದರೆ ಅವನ ಮಗಳಿಗೆ ಆಸ್ತಿ ಕೇಳುವ ಹಕ್ಕು ಇರೋದಿಲ್ಲವೇ? ಆ ವಿಲ್ ನಲ್ಲಿ ಯಾರಿಗೆ ಆಸ್ತಿ ಇರುತ್ತದೆಯೋ ಅವರಿಗೆ ಮಾತ್ರ ಆಸ್ತಿ ಸಿಗುವುದೇ? ಈ ತರಹದ ಕಾನೂನು ಸಂಬಂದಿಸಿದ ಪ್ರಶ್ನೆಗಳಿಗೆ ಖ್ಯಾತ ನ್ಯಾಯವಾದಿಗಳು ಆಗಿರುವ ಎಂ. ಆರ್. ಸತ್ಯನಾರಾಯಣ ಅವರು ಸ್ಪಷ್ಟ ಉತ್ತರವನ್ನು ಈ ಕೆಳಕಂಡಂತೆ ನೀಡಿದ್ದಾರೆ.
ತಂದೆಯು ವಿಲ್ ಬರೆದಿರುವ ಆಸ್ತಿಯು ಸ್ವಯಾರ್ಜಿತ ಆಸ್ತಿನಾ ಅಥವಾ ಪಿತ್ರಾರ್ಜಿತ ಆಸ್ತಿನಾ ಎಂದು ಸ್ಪಷ್ಟವಾಗಿ ತಿಳಿದಿರಬೇಕು. ಪಿತ್ರಾರ್ಜಿತ ಆಸ್ತಿ ಆಗಿದ್ದಲ್ಲಿ ಮಾತ್ರ 2020ರ ಆಗಸ್ಟ್ ತಿಂಗಳಿನ ಸುಪ್ರೀಂ ಕೋರ್ಟ್ ನ ತೀರ್ಪು ಅನ್ವಯಿಸುತ್ತದೆ. ಇಲ್ಲವಾದಲ್ಲಿ ಸ್ವಯಾರ್ಜಿತ ಆಸ್ತಿ ಆಗಿದ್ದಲ್ಲಿ ಆತ ತಾನು ಯಾರ ಹೆಸರಿಗೆ ವಿಲ್ ಮಾಡಿರುತ್ತಾರೋ ಅವರಿಗೆ ಮಾತ್ರ ಆಸ್ತಿ ಸೇರುತ್ತದೆ. ಪಿತ್ರಾರ್ಜಿತ ಆಸ್ತಿ ಆಗಿದ್ದಲ್ಲಿ ಅದನ್ನು ವಿಲ್ ಮಾಡಲು ಸಾಧ್ಯವಿಲ್ಲ.
ಪಿತ್ರಾರ್ಜಿತ ಆಸ್ತಿಯು ಮನೆಯ ಎಲ್ಲಾ ಮಕ್ಕಳಿಗೂ ಸೇರಿರುತ್ತದೆ ಹಾಗೂ ಹುಟ್ಟಿನಿಂದಲೇ ಪಿತ್ರಾರ್ಜಿತ ಆಸ್ತಿಯ ಮೇಲೆ ಎಲ್ಲಾ ಮಕ್ಕಳಿಗೂ ಹಕ್ಕು ಇರುತ್ತದೆ, ಪಾಲುದಾರತಾಗುತ್ತರೆ. ಪಿತ್ರಾರ್ಜಿತ ಆಸ್ತಿಯನ್ನು ವಿಲ್ ಮಾಡುವ ಅಧಿಕಾರ ತಂದೆಗೆ ಇರುವುದಿಲ್ಲ. ವಿಲ್ ಎಂದರೆ ಈ ಆಸ್ತಿಯು ಹೀಗೇ ಹೋಗಬೇಕು ಇಂತಹವರಿಗೆ ಹೋಗಬೇಕು ಎಂದು ಬರೆದಿರುವ ಪತ್ರ. ಪಿತ್ರಾರ್ಜಿತ ಆಸ್ತಿಯನ್ಙು ವಿಲ್ ಮಾಡುವ ಸಂದರ್ಭದಲ್ಲಿ ಹಲವರು ತಾವು ಸತ್ತ ನಂತರ ಇಂತಹ ವ್ಯಕ್ತಿಗೆ ಅಥವಾ ಮಗಳಿಗೆ ಅಥವಾ ಮಗಳಿಗೆ ಸೇರಬೇಕು ಎಂದು ಬರೆದಿರುವುದು.
ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಸಹ ಹುಟ್ಟಿನಿಂದಲೂ ಪಾಲುದಾರರು ಎಂಬ ಆದೇಶ ವಿದೆ. ಹೀಗೆ ಪಿತ್ರಾರ್ಜಿತ ಆಸ್ತಿಯು ಪೂರ್ವ ಅನ್ವಯ ಆದರೆ ಈ ವಿಲ್ ಬರೆದರು ವ್ಯರ್ಥ. ಒಬ್ಬ ತಂದೆಯು ತನ್ನ ಪಿತ್ರಾರ್ಜಿತ ಆಸ್ತಿಯನ್ನು ಕೇವಲ ಒಬ್ಬ ಮಗಳಿಗೆ ಅಥವಾ ಮಗನಿಗೆ ವಿಲ್ ಬರೆದಿದ್ದರೆ ವಿಲ್ ಬರೆಯುವ ಸಂದರ್ಭದಲ್ಲಿ ಆತನ ಮನಃ ಸ್ಥಿತಿ ಹೇಗಿತ್ತು? ಆತನೆ ಸ್ವತಃ ವಿಲ್ ಬರೆದಿದ್ದಾನೆಯೆ? ಆ ವಿಲ್ ನಲ್ಲಿ ಸತ್ತಾಂಶ ಇದೆಯೆ? ಅಥವಾ ಆ ವಿಲ್ ಅನುಮಾನಾಸ್ಪದ ಇದೆಯೆ? ಎಂಬ ಎಲ್ಲ ಪ್ರಶ್ನೆಗಳು ಹುಟ್ಟುತ್ತವೆ.
ಇದರಿಂದ ಇನ್ನುಳಿದ ಆತನ ಮಕ್ಕಳು ಸವಾಲು ಆಕಬಹುದು. ಆದರೆ ಆಸ್ತಿಯು ಸ್ವಯಾರ್ಜಿತ ಆಸ್ತಿ ಆಗಿದ್ದರೆ ಆ ತಂದೆಯು ಯಾರಿಗಾದರೂ ವಿಲ್ ಮಾಡಿಕೊಡಬಹುದು ಹಾಗೂ ವಿಲ್ ಯಾರ ಹೆಸರಿಗೆ ಮಾಡಿರುತ್ತಾರೋ ಆ ವ್ಯಕ್ತಿಗೆ ಮಾತ್ರ ಆಸ್ತಿ ಸಿಗುತ್ತದೆ. ಹೀಗೆ ನ್ಯಾಯಾವಾದಿ ಎಂ. ಆರ್ ಸತ್ಯನಾರಾಯಣ ಅವರು ಕಾನೂನಾತ್ಮಕವಾಗಿ ಪಿತ್ರಾರ್ಜಿತ ಆಸ್ತಿ ಹಾಗೂ ಸ್ವಯಾರ್ಜಿತ ಆಸ್ತಿಯ ಬಗ್ಗೆ ವಿವರವಾಗಿ ಉತ್ತರಿಸಿದ್ದಾರೆ. ಹಾಗೆಯೇ ಇನ್ನು ಯಾವುದಾದರೂ ಆಸ್ತಿ ವಿಚಾರವಾದ ಸ್ಪಷ್ಟನೆಗಳಿಗೆ ಕನ್ನಡ ಮೀಡಿಯಾ ಇಲ್ಲಿ ಕಮೆಂಟ್ ಮಾಡಿ ಅಥವಾ ವೈಯಕ್ತಿಕವಾಗಿ ವಾಟ್ಸ್ ಆಪ್ ಮೂಲಕ ಕೇಳಿದರೆ ಸ್ಪಷ್ಟ ಮಾಹಿತಿಯನ್ನು ಎಂ. ಆರ್. ಸತ್ಯ ನಾರಾಯಣ ಅವರು ಉತ್ತರಿಸಲಿದ್ದಾರೆ.