ಹೌದು, ಈ ಸುದ್ದಿ ನಿಜಕ್ಕೂ ಸತ್ಯ. ಕರ್ನಾಟಕ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ರೀತಿ ಸಿಹಿ ಸುದ್ದಿ ಕೊಟ್ಟಿದೆ. ಅದೇನೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಯಾರು ಉಚಿತ ದ್ವಿಚಕ್ರ ವಾಹನ ಯೋಜನೆಯಲ್ಲಿ ಹಾಕಿದ್ದರೋ ಅವರಿಗೆ ಈಗ ಉಚಿತ ದ್ವಿ ಚಕ್ರ ವಾಹನ ವಿತರಣೆ ಮಾಡುತ್ತಿದ್ದಾರೆ. ನೀವು ಸರ್ಕಾರದ ಉಚಿತ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೆ ದ್ವಿ ಚಕ್ರ ವಾಹನ ವಿತರಣೆ ಎಲ್ಲಿ ನಡೆಯುತ್ತಿದೆ ಅದನ್ನು ಹೇಗೆ ಪಡೆಯಬೇಕು ಎಂಬ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
ಮಾನ್ಯ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಕಟ್ಟಡಗಳ ಶಂಕು ಸ್ಥಾಪನೆ ಕಾರ್ಯಕ್ರಮವು ನಡೆಯುತ್ತಿದೆ. 09.03.2023 ಗುರುವಾರ ಬೆಳಿಗ್ಗೆ 9:00 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಈ ಕಾರ್ಯಕ್ರಮದಲ್ಲಿ ಇದಕ್ಕೆ ಚಾಲನೆ ದೊರೆತಿದೆ. ಈ ಮೊದಲ ತಿಳಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಅವರಿಗಾಗಿ ಮಾಡಿದ್ದ ದ್ವಿ ಚಕ್ರ ವಾಹನ ವಿತರಣೆ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದರೋ ಅವರಿಗೆ ದ್ವಿ ವಾಹನಗಳನ್ನು ವಿತರಣೆ ಮಾಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ನಿಗಮಗಳ ಫಲಾನುಭವಿಗಳ ಆಧಾರಿತ ಸವಲತ್ತು ವಿತರಣೆ ಮಾಡಲಾಯಿತು. ಈ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಬೇರೆ ಬೇರೆ ಉಪಜಾತಿಗಳನ್ನು ಕೂಡ ಸೇರಿಸಲಾಗಿದೆ. ಅದರ ಪ್ರಕಾರ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ ತಾಂಡ ಅಭಿವೃದ್ಧಿ ನಿಗಮಗಳ ವತಿಯಿಂದ ದ್ವಿಚಕ್ರವಾಹನ ಸಬ್ಸಿಡಿ ಲೋನ್ ಗೆ ಅಪ್ಲೈ ಮಾಡಿದ್ದ ಪರಿಶಿಷ್ಟ ಜಾತಿಯ ಕೆಲವು ಫಲಾನುಭವಿಗಳಿಗೆ ಅಂದು ಆ ಕಾರ್ಯಕ್ರಮದಲ್ಲಿ ಈ ಯೋಜನೆಯ ಸಹಾಯ ದೊರೆತಿದೆ.
ಅಂದು ನಡೆದ ಆ ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ ರಾಮ್ ಸ್ವ ಉದ್ಯೋಗ ಯೋಜನೆ ಅಡಿಯಲ್ಲಿ 28,000 ದ್ವಿಚಕ್ರ ವಾಹನ ವಿತರಣೆಗಾಗಿ ಗುರಿ ನಿಗದಿಪಡಿಸಲಾಗಿತ್ತು. ಈ ವಿನೂತನ ಕಾರ್ಯಕ್ರಮಕ್ಕೆ ನಮ್ಮ ಕರ್ನಾಟಕ ಸಾಕ್ಷಿ ಆಗಿದೆ. ಈ ಯೋಜನೆಯಿಂದ ಸಾಕಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವ ಜನತೆಗೆ ಇದರಿಂದ ಬಹಳ ಅನುಕೂಲ ಆಗಿದೆ. ನೀವು ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದು, ನೀವು ಸಹ ಈ ಯೋಜನೆಯಲ್ಲಿ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದರೆ ಹೇಗೆ ಇದನ್ನು ಪಡೆಯಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ನೀವು ಯಾವ ನಿಗಮದ ಕಡೆಯಿಂದ ಈ ಸಬ್ಸಿಡಿ ದ್ವಿಚಕ್ರ ವಾಹನ ಲೋನ್ ಗೆ ಅಪ್ಲೈ ಮಾಡುತಿದ್ದಿರೋ ಆ ಅಭಿವೃದ್ಧಿ ನಿಗಮಕ್ಕೆ ಭೇಟಿ ಕೊಡಿ ಸಂಬಂಧ ಪಟ್ಟ ಸಿಬ್ಬಂದಿಯನ್ನು ಈ ಬಗ್ಗೆ ವಿಚಾರಿಸಿ. ನಾವು ಸಹ ಯೋಜನೆ ಅಡಿ ಅರ್ಜಿ ಸಲ್ಲಿಸಿದೆವು ನಮಗೆ ಯಾವಾಗ ಕೊಡುತ್ತೀರಾ ಎಂದು ಕೇಳಿ. ನೀವು ಅಪ್ಲೈ ಮಾಡಿದಾಗ ಪಡೆದುಕೊಂಡಿದ್ದ ರಶೀದಿಯನ್ನು ಕೂಡ ತೋರಿಸಿ. ನೀವು ಯಾವಾಗ ಆ ಸಬ್ಸಿಡಿ ದ್ವಿಚಕ್ರ ವಾಹನ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಅವರೇ ನಿಮಗೆ ತಿಳಿಸಿಕೊಡುತ್ತಾರೆ.