ದಿನದಿಂದ ದಿನಕ್ಕೆ ಏರುತ್ತಾ ಇರುವ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯಿಂದಾಗಿ ಜನರ ಆರ್ಥಿಕ ಪರಿಸ್ಥಿತಿಯು ಹದಗೆಡುತ್ತಿದೆ. ದೇಶದಲ್ಲಿ ಹಣದುಬ್ಬರ ದರವು ಸ್ಥಿರವಾಗಿ ಉಳಿದಿದೆ. ಇದರಿಂದಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು ಸಾಮಾನ್ಯ ಜನರು ಬದುಕು ಸಾಗಿಸಲು ಕಷ್ಟಕರವಾಗಿದೆ. ಇದನ್ನು ಗಮನಿಸಿದ ಸರ್ಕಾವು ಅಡುಗೆ ಅನಿಲದ ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ಸೋಲಾರ್ ಸ್ಟೌ ಅನ್ನು ರಾಜ್ಯದ ಜನತೆಗೆ ಪರಿಚಯಿಸಿದೆ.
ಈ ಒಲೆಯನ್ನು ಖರೀದಿಸಿದರೆ ಅಡುಗೆ ಅನಿಲದಿಂದ ಮುಕ್ತಿ ಪಡೆಯಬಹುದು. ಇದನ್ನು ಸರ್ಕಾರಿ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅವರು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಇಂಡಿಯನ್ ಆಯಿಲ್ ಕಂಪನಿ ಅವರು ಈ ಸೋಲಾರ್ ಸ್ಟೌ ಅನ್ನು ಮೂರು ರೀತಿಯಲ್ಲಿ ತಯಾರು ಮಾಡಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದಾರೆ.
ಅವುಗಳೆಂದರೆ ಡಬಲ್ ಬರ್ನರ್ ಸೋಲಾರ್ ಕುಕ್ ಟಾಪ್, ಡಬಲ್ ಬರ್ನರ್ ಹೈಬ್ರಿಡ್ ಕುಕ್ ಟಾಪ್, ಸಿಂಗಲ್ ಬರ್ನರ್ ಸೋಲಾರ್ ಕುಕ್ ಟಾಪ್ ಗಳು. ಈ ಸೋಲಾರ್ ಸ್ಟೌ ಯೋಜನೆಯ ಮೂಲಕ ಪ್ರತಿಯೊಬ್ಬರಿಗೂ ಐದು ಸಾವಿರ ರೂಗಳು ಉಚಿತವಾಗಿ ಸಬ್ಸಿಡಿಯನ್ನು ಪಡೆಯುವ ಯೋಜನೆಯನ್ನು ಮಾಡಲಾಗಿದೆ. ಹಾಗಿದ್ದಲ್ಲಿ ಸೋಲಾರ್ ಸ್ಟಾವ್ ಯೋಜನೆ ಎಂದರೇನು? ಇದರ ಮೂಲಕ 5000 ಸಬ್ಸಿಡಿ ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಇತ್ತೀಚೆಗಷ್ಟೇ ಸೋಲಾರ್ ಸ್ಟೌ ಯೋಜನೆ ಸರ್ಕಾರದಿಂದ ಪ್ರಾರಂಭಗೊಂಡಿದ್ದು ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದಂತಹ ಭಾರತ ಇಂಧನ ಸಪ್ತ್ರಾಹ ಕಾರ್ಯಕ್ರಮದಲ್ಲಿ ಸೌರಶಕ್ತಿಯಿಂದ ಅಡುಗೆಯನ್ನು ತಯಾರಿಸಲು ಸೋಲಾರ್ ಸ್ಟೊವ್ ಅಥವಾ ಸೋಲಾರ್ ಕುಕ್ ಟಾಪ್ ಅನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು. ಈ ಸೋಲಾರ್ ಸ್ಟೌ ಗಳನ್ನು ಖರೀದಿಸಲು ಸರ್ಕಾರದಿಂದಲೂ ಕೂಡ ಐದು ಸಾವಿರ ರೂಗಳ ಸಬ್ಸಿಡಿ ನೀಡುವಂತೆ ತೀರ್ಮಾನಿಸಲಾಗಿದೆ.
ಈ ಸೋಲಾರ್ ಸ್ಟೊವ್ ನಾ ಬೆಲೆಯೂ 15 ಸಾವಿರ ರೂಗಳು ಆಗಿದೆ. ಈಗಾಗಲೇ ಕಳೆದ ಆರು ತಿಂಗಳುಗಳಿಂದ ಸೋಲಾರ್ ಸ್ಟೌ ಅನ್ನು ಬಳಸಿ ಅಡುಗೆ ತಯಾರಿಸಲು ಹಲವು ರಾಜ್ಯಗಳಲ್ಲಿಯೂ ಕೂಡ ಪ್ರಯೋಗ ನಡೆಸಲಾಗಿದೆ ಆ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ ಹಾಗೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದ್ದರಿಂದ ಮುಂದಿನ ಮೂರು ವರ್ಷಗಳಲ್ಲಿ ಸೋಲಾರ್ ಸ್ಟೌ ಅನ್ನು ರಾಜ್ಯದ ಪ್ರತಿಯೊಬ್ಬರ ಮನೆಗೂ ಕೂಡ ವಿತರಣೆ ಮಾಡಲು ಸರ್ಕಾರವು ನಿರ್ಧಾರ ಮಾಡಿದೆ.
ಹಾಗಾಗಿ ಸೋಲಾರ್ ಸ್ಟೌ ನಾ ನಿಖರ ಬೆಲೆ 15 ಸಾವಿರ ರೂಗಳಾಗಿದ್ದು ಇದನ್ನು ಖರೀದಿಸುವವರಿಗೆ ಸರ್ಕಾರದ ವತಿಯಿಂದ 5 ಸಾವಿರ ರೂಗಳನ್ನು ಕೂಡ ಸಬ್ಸಿಡಿ ರೂಪದಲ್ಲಿ ನೀಡಲು ಈಗಾಗಲೇ ಸರ್ಕಾರವು ನಿರ್ಧರಿಸಲಾಗಿದೆ. ಉಳಿದ ರೂ 10 ಸಾವಿರಗಳನ್ನು ಕಂತುಗಳಲ್ಲಿ ಕಟ್ಟಬಹುದಾಗಿದೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಇತರೆ ಮಾಹಿತಿಗಳು ಲಭ್ಯವಾದಲ್ಲಿ ನಿಮಗೆ ತಿಳಿಸಲಾಗುತ್ತದೆ.