ಗಡಿಯಾರ ಸಮಯವನ್ನು ಪ್ರತಿನಿಧಿಸುವ ಒಂದು ಸಾಧನ. ಯಾರನ್ನು ಕಾಯದ ಗಡಿಯಾರವನ್ನು ಮನೆಯಲ್ಲಿ ಯಾವ ರೀತಿ ಹಾಕಿದರೆ ಏನು ಫಲ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಸಮಸ್ಯೆಗಳು ತಪ್ಪುವುದಿಲ್ಲ. ಹಾಗಾಗಿ ಇದರ ಕುರಿತು ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.
● ಮನೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಗಡಿಯಾರವನ್ನು ಹಾಕಬಾರದು ಅದನ್ನು ಹೊರತುಪಡಿಸಿ ಪೂರ್ವ ಪಶ್ಚಿಮ ಅಥವಾ ಉತ್ತರದ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಿ.
● ಮನೆಯಾಗಲಿ, ಕಚೇರಿಯಾಗಲಿ ಮತ್ಯಾವುದೇ ಸ್ಥಳವಾಗಲಿ ಉತ್ತರ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ವೃತ್ತಿ ಮತ್ತು ವ್ಯಾಪಾರ ಅಭಿವೃದ್ಧಿಯಾಗುತ್ತದೆ.
● ಪೂರ್ವ ದಿಕ್ಕಿನ ಗೋಡೆಗೆ ಗಡಿಯಾರ ಹಾಕುವುದರಿಂದ ಕೆಲಸ ಹಾಗೂ ವಿದ್ಯಾಭ್ಯಾಸದಲ್ಲಿ ಚುರುಕಾಗುತ್ತಾರೆ ಎಂದು ಹೇಳಲಾಗಿದೆ.
● ದಕ್ಷಿಣ ದಿಕ್ಕಿನನ್ನು ಯಮನ ದಿಕ್ಕು ಎಂದು ಹೇಳಲಾಗುತ್ತದೆ. ಈ ದಿಕ್ಕಿನಲ್ಲಿ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಅದಕ್ಕೆ ಗಡಿಯಾರ ಹಾಕಿ ಪದೇಪದೇ ಅದೇ ಕಡೆ ಸಮಯ ನೋಡುವುದಕ್ಕಾಗಿ ನೋಡುತ್ತಿದ್ದರೆ ನಿಮ್ಮ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಹಾಗಾಗಿ ಇದನ್ನು ಬದಲಾಯಿಸಿ.
● ಯಾವುದೇ ಕಾರಣಕ್ಕೂ ಮನೆಯಲ್ಲಿ ಹಾಕಿರುವ ಗಡಿಯಾರಗಳು ನಿಲ್ಲಬಾರದು.
● ಮಲಗುವ ಕೋಣೆಯಲ್ಲಿ ಗಡಿಯಾರ ಹಾಕುವುದಾದರೆ ನಿಮ್ಮ ಮಲಗುವ ಕೊನೆಯ ದ್ವಾರದ ಎದುರಿನ ದಿಕ್ಕಿನಲ್ಲಿ ಗಡಿಯಾರ ಹಾಕಬಾರದು ಮತ್ತು ಗಡಿಯಾರದ ಮೇಲೆ ನಿಮ್ಮ ಹಾಸಿಗೆಯ ಪ್ರತಿಬಿಂಬ ಕಾಣಬಾರದು.
● ದಂಪತಿಗಳು ಮಲಗುವ ಕೋಣೆಯಲ್ಲಿ ಗಡಿಯಾರ ಹಾಕಿದರೆ ಕಲಹ ಹೆಚ್ಚಾಗುತ್ತದೆ.
● ಅಡುಗೆ ಮನೆಗೂ ಕೂಡ ಗಡಿಯಾರ ಹಾಕುವಂತಿಲ್ಲ.
● ಮನೆಯ ಯಾವುದೇ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಬಾರದು. ಬಾಗಿಲಿಗೆ ಅಥವಾ ಬಾಗಿಲ ಮೇಲೆ ಗಡಿಯಾರ ಹಾಕಿ ನಾವು ಅದರ ಕೆಳಗೆ ಓಡಾಡುತ್ತಿದ್ದರೆ ಗಡಿಯಾರ ಸುತ್ತುವಂತೆ ನಾವು ಕೂಡ ಸುತ್ತಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
● ಲೋಲಕ ಇರುವ ಗಡಿಯಾರ ಮನೆಗೆ ಶುಭ ಎಂದು ಹೇಳಲಾಗುತ್ತದೆ. ಇದು ಧನಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಲೋಕ ಇರುವ ಗಡಿಯಾರ ಹಾಕುವುದಾದರೆ ಪೂರ್ವ ದಿಕ್ಕು ಅತ್ಯಂತ ಸೂಕ್ತ.
● ಪಶ್ಚಿಮ ದಿಕ್ಕಿನಲ್ಲೂ ಕೂಡ ಗಡಿಯಾರ ಹಾಕಬಹುದು. ಆದರೆ ಈ ಮೇಲೆ ತಿಳಿಸಿದ ದಿಕ್ಕುಗಳಿಗೆ ಆದ್ಯತೆ ಕೊಡಿ, ಒಂದು ವೇಳೆ ಸಾಧ್ಯವಾಗದೆ ಇದ್ದಾಗ ಪಶ್ಚಿಮ ದಿಕ್ಕಿನ ಗೋಡೆಗೆ ಗಡಿಯಾರ ಹಾಕಿ.
● ಗೋಡೆ ಗಡಿಯಾರವಾಗಲಿ ಅಥವಾ ಕ್ಯಾಲೆಂಡರ್ ಗಳಾಗಲಿ ಯಾವಾಗಲೂ ಮನೆ ಒಳಗಡೆ ಹಾಕಬೇಕು ಮನೆ ಹೊರಗಿನ ಗೋಡೆಗಳಿಗೆ ಇವುಗಳನ್ನು ತೂಗು ಹಾಕಬಾರದು.
● ಕೆಟ್ಟು ಹೋಗಿರುವ ಅಥವಾ ಒಡೆದಿರುವ ಗಡಿಯಾರಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಬಳಸಬೇಡಿ ಇದರಿಂದ ನಕರಾತ್ಮಕ ಪ್ರಭಾವ ಹೆಚ್ಚಾಗಿರುತ್ತದೆ.
● ನಿಮ್ಮ ಮನೆಯಲ್ಲಿರುವ ಗೋಡೆ ಗಡಿಯಾರದ ಸಮಯವು ವಾಸ್ತವ ಸಮಯಕ್ಕಿಂತ ಹಿಂದೆ ಇರಬಾರದು, ನೈಜ ಸಮಯಕ್ಕಿಂತ ಎರಡು ಮೂರು ನಿಮಿಷ ಮುಂದೆ ಇದ್ದರೆ ಉತ್ತಮ.
● ಗಾಜಿನ ಗಡಿಯಾರಗಳಲ್ಲಿ ಬಳಸುವುದು ಉತ್ತಮ
● ಮನೆಯಲ್ಲಿನ ಗಡಿಯಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಆ ಗಡಿಯಾರ ಎಷ್ಟು ನೀಟಾಗಿ ಇರುತ್ತದೆಯೋ ನಿಮ್ಮ ಸಮಯ ಕೂಡ ಅಷ್ಟೇ ಚೆನ್ನಾಗಿರುತ್ತೆ ಎಂದು ಹೇಳಲಾಗುತ್ತದೆ.
● ಗಡಿಯಾರಗಳು ವೃತ್ತಾಕಾರ ಅಥವಾ ಚತುರ್ಬುಜ ಆಕಾರದಲ್ಲಿ ಇದ್ದರೆ ಇನ್ನು ಒಳ್ಳೆಯದು, ಆಗ ನಿಮ್ಮ ಎಲ್ಲಾ ಯೋಜನೆಗಳು ಸಮಯಕ್ಕೆ ಸರಿಯಾಗಿ ಕೈಗೂಡುತ್ತವೆ.
● ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಉಡುಗೊರೆಯಾಗಿ ಅಥವಾ ದಾನವಾಗಿ ಗಡಿಯಾರ ಕೊಡಬಾರದು. ಈ ರೀತಿ ಮಾಡಿದರೆ ನಿಮ್ಮ ಒಳ್ಳೆಯ ಸಮಯ ಅವರಿಗೆ ವರ್ಗಾವಣೆಯಾಗುತ್ತದೆ ಮತ್ತು ಅವರ ಕೆಟ್ಟ ಸಮಯ ನಿಮಗೆ ಬರುತ್ತದೆ ಎಂದು ಹೇಳಲಾಗುತ್ತದೆ.