ಉದ್ಯೋಗಸ್ಥರೇ ಆಗಲಿ, ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡುವವರೇ ಆಗಲಿ, ಗೃಹಿಣಿಯರಿಗೆ ಪತಿ ಅಥವಾ ಕುಟುಂಬದವರೇ ಆಗಲಿ ಅದರಲ್ಲಿ ಸ್ವಲ್ಪ ಮೊತ್ತದ ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ (Saving) ಮಾಡಿಲೇಬೇಕು. ಈ ರೀತಿ ಉಳಿತಾಯ ಮಾಡಿದ ಹಣವನ್ನು ಹಾಗೆ ಇಡುವುದರ ಬದಲು ಹೂಡಿಕೆ ಮಾಡುವುದು ಬೆಸ್ಟ್. ಇದಕ್ಕಾಗಿ ಸಾಕಷ್ಟು ಉಳಿತಾಯ ಯೋಜನೆಗಳಿವೆ (Saving Scheme).
ಈ ಉಳಿತಾಯ ಯೋಜನೆಗಳಲ್ಲಿ ನಾವು ಯಾವ ಯೋಜನೆ ಆರಿಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಎಲ್ಲಾ ಯೋಜನೆಗಳಲ್ಲೂ ನಾವಂದು ಕೊಂಡಂತೆ ಉತ್ತಮ ರಿಟರ್ನ್ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಧಿಕ ಲಾಭದ ಆಸೆಯಿಂದ ಹೂಡಿಕೆ ಮಾಡಿದ ಯೋಚನೆಗಳಲ್ಲಿ ಹಣಕ್ಕೆ ಭದ್ರತೆ ಸಿಗದೇ ಲಾಸ್ ಮಾಡಿಕೊಂಡವರು ಇದ್ದಾರೆ.
ಮಧ್ಯಮ ವರ್ಗದ ಜನರಿಗೆ ಜೊತೆಗೆ ತಮ್ಮ ಹಣಕ್ಕೆ ಗ್ಯಾರೆಂಟಿ ಕೂಡ ಅಷ್ಟೇ ಮುಖ್ಯ ಹಾಗಾಗಿ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಬಹಳ ಸೇಫ್. ಈಗಂತೂ ಈ ಸರ್ಕಾರಿ ಯೋಜನೆಗಳನ್ನು ಕೂಡ ಒಳ್ಳೆ ಬಡ್ಡಿ ದರಗಳು ಸಿಗುತ್ತವೆ ಅತ್ಯುತ್ತಮ ಯೋಜನೆಗಳು ಇವೆ ನಿಮಗೆ ಹಣದ ಸೇಫ್ಟಿ ಜೊತೆ ಉತ್ತಮ ರಿಟರ್ನ್ ಹಾಗೂ ಮಾರುಕಟ್ಟೆ ಅಪಾಯವು ಇರಬಾರದು ಎಂದು ಬಯಸಿದರೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳನ್ನು (Post Office Saving Schemes) ಆಯ್ದುಕೊಳ್ಳಿ.
ಈ ಸುದ್ದಿ ಓದಿ:- ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ನಿಮ್ಮ ಹೆಸರಲ್ಲಿ ಬುಕ್ ಮಾಡಿದ ಟಿಕೆಟ್ ಅನ್ನು ಈಗ ನಿಮ್ಮ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಬಹುದು.!
ಈಗ ಅಂಚೆ ಕಚೇರಿಯಲ್ಲಿ ಇಂತಹ ಸಾಕಷ್ಟು ಯೋಜನೆಗಳು ಇದ್ದು ನಿಮ್ಮ ಅಗತ್ಯಕ್ಕೆ ಮತ್ತು ಅನುಕೂಲಕ್ಕೆ ತಕ್ಕ ಯೋಚನೆಗಳನ್ನು ಆರಿಸಿಕೊಳ್ಳಬಹುದು. ಅಂಚೆ ಕಚೇರಿಯ ಯೋಜನೆಗಳಲ್ಲಿ ರೆಕ್ಯೂರಿಂಗ್ ಡೆಪೋಸಿಟ್ ಯೋಜನೆಯು ಕೂಡ ಒಂದು. ಇದರಲ್ಲಿ ತಿಂಗಳಿಗೆ ರೂ.25,000 ಹೂಡಿಕೆ ಮಾಡಿದರೆ ರೂ.18 ಲಕ್ಷ ರಿಟರ್ನ್ಸ್ ಪಡೆಯಬಹುದು. ಅಂಚೆ ಕಚೇರಿ RD (recurring deposit) ತೆರೆಯುವುದು ಹೇಗೆ ಮತ್ತು ಈ ಯೋಜನೆ ಕುರಿತಾದ ಕೆಲವು ಮುಖ್ಯ ಅಂಶಗಳು ಹೀಗಿದೆ ನೋಡಿ
ಯೋಜನೆಯ ಹೆಸರು:-
* ಕನಿಷ್ಟ ರೂ.100 ನಿಂದ ಗರಿಷ್ಠ ಯಾವುದೇ ಮಿತಿ ಇಲ್ಲದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
* ಈ ಯೋಜನೆಯ ಅವಧಿ 5 ವರ್ಷಗಳು, 5 ವರ್ಷಗಳವರೆಗೆ ಪ್ರತಿ ತಿಂಗಳು ನಿಗದಿ ಪಡಿಸಿಕೊಂಡ ಮೊತ್ತವನ್ನು ನಿಗದಿತ ದಿನಾಂಕದೊಳಗೆ ಅಂಚೆ ಕಚೇರಿಯಲ್ಲಿ ಪ್ರೀಮಿಯಂನಂತೆ ಪ್ರತಿ ತಿಂಗಳು ಪಾವತಿ ಮಾಡಬೇಕು.
* ಪ್ರಸ್ತುತವಾಗಿ ಈ ಯೋಜನೆಗೆ 6.7% ನಷ್ಟು ಬಡ್ಡಿದರವಿದೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಇದು ಪರೀಷ್ಕೃತಗೊಳ್ಳುತ್ತಿರುತ್ತದೆ 6.7% ಬಡ್ಡಿದರದ ಅನ್ವಯ 5 ವರ್ಷಗಳವರೆಗೆ ಪ್ರತಿ ತಿಂಗಳು ನೀವು ರೂ.25,000 ಠೇವಣಿ ಮಾಡಿದರೆ ಮೆಚುರಿಟಿ ನಂತರ 18 ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯುತ್ತೀರಿ.
* ಹತ್ತು ವರ್ಷ ಮಕ್ಕಳಿಗೂ ಪಾಲಕರು ತಮ್ಮ ಹೆಸರಿನಲ್ಲಿ RD ಖಾತೆ ಆರಂಭಿಸಬಹುದು, ಒಂಟಿಯಾಗಿ ಮಾತ್ರವಲ್ಲದೆ, ಇಬ್ಬರು ಒಟ್ಟಿಗೆ ಮೂರು ಜನ ಜಂಟಿಯಾಗಿ RD ಖಾತೆ ಆರಂಭಿಸಲು ಅವಕಾಶ ಇದೆ. ಗರಿಷ್ಠ ಯಾವುದೇ ವಯಸ್ಸಿನ ಮಿತಿ ಇಲ್ಲ.
ಈ ಸುದ್ದಿ ಓದಿ:- Prize money scholorship: ಈ ವಿದ್ಯಾರ್ಥಿಗಳಿಗೆ ಸಿಗಲಿದೆ 35,000 ಪ್ರೋತ್ಸಾಹ ಧನ.! ಆಸಕ್ತ ಅರ್ಜಿ ಸಲ್ಲಿಸಿ.!
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿರುತ್ತದೆ. ಒಂದು ವೇಳೆ ಹೂಡಿಕೆದಾರ ಯೋಜನೆ ಮೆಚ್ಯೂರಿಟಿಗೂ ಮುನ್ನ ಮೃ’ತಪಟ್ಟರೆ ಆತ ಸೂಚಿಸಿದ್ದ ವ್ಯಕ್ತಿಗೆ ಕಾನೂನು ಪ್ರಕಾರವಾಗಿ ಸೇರಬೇಕಾದ ಹಣ ತಲುಪುತ್ತದೆ.
* RD ಖಾತೆ ತೆರೆದ ಒಂದು ವರ್ಷದ ನಂತರ ಹೂಡಿಕೆ ಅರ್ಧದಷ್ಟು ಹಣವನ್ನು ಸಾಲ ಪಡೆದುಕೊಳ್ಳಬಹುದು
* RD ಖಾತೆ ತೆರೆಯಲು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ.
ಬೇಕಾಗುವ ದಾಖಲೆಗಳು:
1. ಆಧಾರ್ ಕಾರ್ಡ್
2. ಇತ್ತೀಚಿನ ಭಾವಚಿತ್ರ
3. ಮೊಬೈಲ್ ಸಂಖ್ಯೆ
4. ಅಂಚೆ ಕಚೇರಿಯ ಸೇವಿಂಗ್ ಅಕೌಂಟ್ ಡೀಟೇಲ್ಸ್