ರೈಲ್ವೆ ಪ್ರಯಾಣ ಎಲ್ಲರಿಗೂ ಅಚ್ಚು ಮೆಚ್ಚು. ಟಿಕೆಟ್ ದರ ಕಡಿಮೆ, ಪ್ರಯಾಣ ಆಯಾಸಕರವಾಗಿರುವುದಿಲ್ಲ, ಕುಟುಂಬ ಸಮೇತ ಪ್ರಯಾಣ ಮಾಡುವುದಕ್ಕೆ ಅನುಕೂಲಕರ, ಬಸ್ ಗಳಿಗೆ ಹೋಲಿಸಿದರೆ ಊಟೋಪಚಾರ ಹಾಗೂ ಶೌಚಾಲಯ ವ್ಯವಸ್ಥೆ ಕೂಡ ಇದೆ. ದೂರದ ಪ್ರಯಾಣಗಳಿಗೆ ಮತ್ತೆ ಬಸ್ಸು ಇಳಿದು ಹತ್ತಬೇಕಾದ ಅಗತ್ಯ ಇಲ್ಲ ಇತ್ಯಾದಿ ಕಾರಣಗಳಿಂದಾಗಿ ಹೆಚ್ಚಿನ ಮಂದಿ ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ.
ಆದರೆ ಒಮ್ಮೊಮ್ಮೆ ರೈಲ್ವೆ ಟಿಕೆಟ್ ತೆಗೆದುಕೊಂಡಿದ್ದರು ಹತ್ತಬೇಕಾದ ಸಮಯಕ್ಕೆ ಸ್ಥಳ ತಲುಪಲಾಗದ ಕಾರಣದಿಂದ ರೈಲು ಮಿಸ್ ಆಗುತ್ತದೆ. ಇನ್ನು ಕೆಲವೊಮ್ಮೆ ಸಮಯ ಇದ್ದರೂ ಮುಂಚಿತವಾಗಿ ಟಿಕೆಟ್ ಬುಕಿಂಗ್ ಆಗಿದ್ದರೂ ನಾವು ಆ ದಿನ ಆ ಸಮಯಕ್ಕೆ ಪ್ರಯಾಣ ಮಾಡುವುದಕ್ಕೆ ಆಗುವುದಿಲ್ಲ.
ಈ ಸುದ್ದಿ ಓದಿ:- Prize money scholorship: ಈ ವಿದ್ಯಾರ್ಥಿಗಳಿಗೆ ಸಿಗಲಿದೆ 35,000 ಪ್ರೋತ್ಸಾಹ ಧನ.! ಆಸಕ್ತ ಅರ್ಜಿ ಸಲ್ಲಿಸಿ.!
ಅಂತಹ ಸಮಯದಲ್ಲಿ ಹಣ ವ್ಯರ್ಥವಾಯಿತ್ತಲ್ಲ ಎಂದು ಬೇಸರ ಆಗುವುದರ ಜೊತೆಗೆ ಬಹಳ ಮುಖ್ಯವಾದ ಕೆಲಸ ಆಗಿದ್ದರೆ ನನ್ನ ಬದಲು ನನ್ನ ಮಗನನ್ನು ಅಥವಾ ಮಗಳನ್ನು ಅಥವಾ ಹೆಂಡತಿಯನ್ನು ಕಳುಹಿಸಬಹುದಿತ್ತು. ಅವರಿಗೆ ಟಿಕೆಟ್ ಬುಕ್ ಮಾಡಲಿಲ್ಲವಲ್ಲ ಎಂದು ಬೈದುಕೊಂಡಿರುತ್ತೇವೆ. ಈಗ ಈ ರೀತಿ ಸಮಸ್ಯೆ ಮಾಡಿಕೊಂಡವರಿಗೆ ಒಂದು ಸಮಾಧಾನಕರ ಸುದ್ದಿ ಇದೆ.
ಅದೇನೆಂದರೆ, ಇನ್ನು ಮುಂದೆ ರೈಲು ಟಿಕೆಟ್ ಕಾಯ್ದಿರಿಸಿ ಯಾವುದಾದರೂ ಅಗತ್ಯ ಕಾರಣದಿಂದಾಗಿ ಆ ಸಮಯಕ್ಕೆ ವ್ಯಕ್ತಿಯೊಬ್ಬ ಪ್ರಯಾಣ ಮಾಡಲು ಆಗದಿದ್ದರೆ ಅವರು ಆ ಟಿಕೆಟ್ ನ್ನು ಕುಟುಂಬದ ಮತ್ತೊಬ್ಬ ಸದಸ್ಯರಿಗೆ ವರ್ಗಾಯಿಸಬಹುದು. ರೈಲು ಪ್ರಯಾಣವನ್ನು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರಗೊಳಿಸಿ ಉತ್ತಮ ಸೇವೆ ನೀಡುವ ಉದ್ದೇಶದಿಂದ ರೈಲ್ವೆ ಇಲಾಖೆ ಇಂತಹದೊಂದು ಆಯ್ಕೆಯನ್ನು ನೀಡಿದೆ.
ಇದರಿಂದಾಗಿ ಟಿಕೆಟ್ಗೆ ಖರ್ಚು ಮಾಡಿದ ಹಣ ಉಳಿಯುತ್ತದೆ. ಆದರೆ ಒಂದು ಕಂಡೀಶನ್ ಏನೆಂದರೆ , ಈ ರೀತಿ ಟಿಕೆಟ್ ವರ್ಗಾವಣೆಯನ್ನು ವ್ಯಕ್ತಿಯ ತಂದೆ, ತಾಯಿ, ಸಹೋದರಿ, ಸಹೋದರ, ಮಗಳು, ಮಗ, ಪತಿ ಅಥವಾ ಹೆಂಡತಿ ಸೇರಿದಂತೆ ತಕ್ಷಣದ ಕುಟುಂಬದ ಸದಸ್ಯರಿಗೆ ಮಾತ್ರ ವರ್ಗಾವಣೆ ಮಾಡಲು ಇದನ್ನು ಸೀಮಿತಗೊಳಿಸಲಾಗಿದೆ.
ಈ ಸುದ್ದಿ ಓದಿ:- ಪೇಪರ್ ಆಧಾರಿತ ಆಸ್ತಿ ನೋಂದಣಿ ರದ್ದು.! ಇನ್ಮುಂದೆ ಇ-ಆಸ್ತಿ ನೋಂದಣಿ ಕಡ್ಡಾಯ.! ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಇದ್ದವರು ನೋಡಿ.!
ಈ ಸೇವೆ ಪಡೆಯಲು ಕೆಲ ಕಂಡೀಶನ್ಗಳು ಇವೆ:-
* ಟಿಕೆಟ್ ಖರೀದಿ ಮಾಡಿದ್ದ ಪ್ರಯಾಣಿಕರು ವರ್ಗಾವಣೆ ಗಾಗಿ ನಿಗದಿತ ರೈಲು ನಿರ್ಗಮನವಾಗುವ ಕನಿಷ್ಠ 24 ಗಂಟೆಗಳ ಮೊದಲು ವಿನಂತಿಯನ್ನು ಸಲ್ಲಿಸಬೇಕು
* ಟಿಕೆಟ್ ವರ್ಗಾವಣೆಯನ್ನು ಒಬ್ಬ ವ್ಯಕ್ತಿಗೆ ಒಮ್ಮೆ ಮಾತ್ರ ಮಾಡಲು ಅವಕಾಶ ನೀಡಲಾಗಿದೆ. ವ್ಯಕ್ತಿಯು ಈಗಾಗಲೇ ತನ್ನ ಹೆಸರಿನಲ್ಲಿದ್ದ ಟಿಕೆಟ್ ನ್ನು ಯಾರಿಗಾದರೂ ವರ್ಗಾಯಿಸಿದ್ದರೆ ಮತ್ತೊಮ್ಮೆ ಬೇಡ ಎಂದು ಎರಡನೇ ಬಾರಿ ಬೇರೆಯವರಿಗೆ ವರ್ಗಾಯಿಸಲು ಅರ್ಹರಾಗಿರುವುದಿಲ್ಲ.
* ಮತ್ತೊಂದು ಮುಖ್ಯವಾದ ಗಮನಿಸಲೇಬೇಕಾದ ಅಂಶವೇನೆಂದರೆ, ಭಾರತೀಯ ರೈಲ್ವೆ ಮಾರ್ಗಸೂಚಿಗಳ ಪ್ರಕಾರ, ಟಿಕೆಟ್ ವರ್ಗಾವಣೆ ವಿನಂತಿಯ ಸಾಮಾನ್ಯ ನಿಯಮ ಕೆಲವೊಮ್ಮೆ ವ್ಯತ್ಯಾಸವಾಗಬಹುದು. ಕೆಲವೊಂದು ಸಂದರ್ಭಗಳು ಮತ್ತು ಪ್ರಯಾಣಿಕರ ಆಧಾರದ ಮೇಲೆ ಇದಬದಲಾಗಬಹುದು.
* ಸರ್ಕಾರಿ ನೌಕರರಿಗೆ ವರ್ಗಾಯಿಸುವುದಾದರೆ ರೈಲು ನಿಗದಿತ ನಿರ್ಗಮನದ ಕನಿಷ್ಠ 24 ಗಂಟೆಗಳ ಮೊದಲು
* ಹಬ್ಬದ ಸಂದರ್ಭಗಳಲ್ಲಿ, ಮದುವೆ ಸಮಾರಂಭಗಳು ಅಥವಾ ವೈಯಕ್ತಿಕ ವಿಷಯಗಳ ಸಂದರ್ಭದಲ್ಲಿ, ವ್ಯಕ್ತಿಗಳು ರೈಲು ಹೊರಡುವ 48 ಗಂಟೆಗಳ ಮೊದಲು ವಿನಂತಿಯನ್ನು ಸಲ್ಲಿಸಬೇಕು
* NCC ಅಭ್ಯರ್ಥಿಗಳು ಟಿಕೆಟ್ ವರ್ಗಾವಣೆ ಸೇವೆ ಮತ್ತು ಅದರ ಸಂಬಂಧಿತ ಪ್ರಯೋಜನಗಳನ್ನು ಹೆಚ್ಚು ಪಡೆಯಲು ಅರ್ಹರಾಗಿರುತ್ತಾರೆ.
ರೈಲು ಟಿಕೆಟ್ ವರ್ಗಾಯಿಸುವ ವಿಧಾನ:-
* ಮೊದಲಿಗೆ ಟಿಕೆಟ್ನ ಪ್ರಿಂಟ್ ಔಟ್ ತೆಗೆದುಕೊಳ್ಳಿ.
* ನೀವು ಟಿಕೆಟ್ ನ್ನು ವರ್ಗಾಯಿಸಲು ಬಯಸುವ ವ್ಯಕ್ತಿಯ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ಕೂಡ ಜೊತೆಗೆ ತೆಗೆದುಕೊಳ್ಳಿ
* ನಿಮ್ಮ ಹತ್ತಿರದ ರೈಲ್ವೇ ನಿಲ್ದಾಣದಲ್ಲಿರುವ ಮೀಸಲಾತಿ ಕೌಂಟರ್ಗೆ ಹೋಗಿ, ಟಿಕೆಟ್ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.