ಪೋಸ್ಟ್ ಆಫೀಸ್ ನಿಮ್ಮ ಹಣ ಡಬಲ್ ಧಮಾಕ ಸ್ಕೀಮ್ ! ಸರ್ಕಾರ ಗ್ಯಾರಂಟಿ

10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಪೋಸ್ಟ್ ಆಫೀಸ್ ಧಮಾಕ ಸ್ಕೀಮ್!  ಸರ್ಕಾರ ಗ್ಯಾರಂಟಿ !

ಬಂಧುಗಳೇ ರೈತರಿಗಾಗಿ ಸರ್ಕಾರದ post office ಕಡೆಯಿಂದ ಹಲವಾರು ಯೋಜನೆಗಳ ಅನುಕೂಲತೆ ಸಿಗುತ್ತದೆ. ಈ ಯೋಜನೆಗಳ ಮೂಲಕ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳು ಅಥವಾ ಕೃಷಿ ಪರಿಕರಗಳು  ಹಾಗೂ ಕೃಷಿಗೆ ಸಾಲ ಇತ್ಯಾದಿಗಳನ್ನು ಪಡೆಯಬಹುದಾಗಿತ್ತು.

ಇತ್ತೀಚಿಗೆ ಬೆಳೆ ವಿಮೆ ಹಾಗೂ ಕೃಷಿಗೆ ಪ್ರೋತ್ಸಾಹ ಧನ ಸರ್ಕಾರ ಕಡೆಯಿಂದ ಸಿಗುತ್ತಿದೆ ಎನ್ನುವುದು ಗೊತ್ತು ಇವುಗಳನ್ನು ಹೊರತುಪಡಿಸಿ ಹಲವಾರು ವರ್ಷಗಳಿಂದ ರೈತನಿಗಾಗಿಯೇ ಮೀಸಲಾದ ಒಂದು ವಿಶೇಷ ಯೋಜನೆಯನ್ನು ಭಾರತ ಸರ್ಕಾರದಡಿ ಕಾರ್ಯ ನಿರ್ವಹಿಸುವ ಅಂಚೆ ಇಲಾಖೆ ಜಾರಿಗೆ ತಂದಿದೆ ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ.

WhatsApp Group Join Now
Telegram Group Join Now

ಈ ಯೋಜನೆ ವಿಶೇಷತೆ ಏನೆಂದರೆ ಕಿಸಾನ್ ವಿಕಾಸ್ ಪತ್ರ ಎಂದು ರೈತನೇ ಹೆಸರನ್ನೇ ಹೊಂದಿರುವ ಈ ಯೋಜನೆಯಲ್ಲಿ ರೈತ ಹೂಡಿದ ಹಣವು ಶೀಘ್ರದಲ್ಲಿ ದುಪ್ಪಟ್ಟಾಗುತ್ತದೆ ಮತ್ತು ಅಂಚೆ ಕಚೇರಿಗೆ ಯೋಜನೆ ಆಗಿರುವುದರಿಂದ 100% ರಷ್ಟು ಹೂಡಿಕೆ ಮಾಡಿದ ಹಣಕ್ಕೆ ಭದ್ರತೆಯು ಇರುತ್ತದೆ ಇಂತಹ ವಿಶೇಷವಾದ ಯೋಜನೆ ಕುರಿತ ವಿವರ ಹೀಗಿದೆ ನೋಡಿ.

ಯೋಜನೆ ಹೆಸರು:- ಕಿಸಾನ್ ವಿಕಾಸ್ ಪತ್ರ ಯೋಜನೆ (Kisan Vikas Patra Scheme)

ಈ ಯೋಜನೆ ಕುರಿತ ಪ್ರಮುಖ ಅಂಶಗಳು:-

* ಮೊದಲು ಹೇಳಬೇಕಾದ ಮುಖ್ಯ ವಿಷಯ ಏನೆಂದರೆ ಯೋಜನೆ ಹೆಸರೇ ಸೂಚಿಸುವಂತೆ ಈ ಯೋಜನೆಯನ್ನು ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದಲೇ ರೂಪಿಸಲಾಗಿತ್ತು ಆದರೆ ನಂತರದ ದಿನಗಳಲ್ಲಿ 10 ವರ್ಷ ವಯಸ್ಸಿನ ಮೇಲ್ಪಟ್ಟ ಭಾರತದ ಯಾವುದೇ ನಾಗರಿಕ ಈ ಯೋಜನೆ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.

  1.  ಪ್ರತಿ ತ್ರೈಮಾಸಿಕಕೊಮ್ಮೆ ಕಿಸಾನ್ ವಿಕಾಸ್ ಪತ್ರ ಯೋಜನೆ ಬಡ್ಡಿದರವು ಪರಿಷ್ಕೃತವಾಗುತ್ತಿರುತ್ತದೆ. ಪ್ರಸ್ತುತವಾಗಿ 7.50% ಬಡ್ಡಿದರ ಅನ್ವಯವಾಗುತ್ತಿದೆ
    * ಈ ಯೋಚನೆಯ ಮೆಚ್ಯುರಿಟಿ ಅವಧಿ 115 ತಿಂಗಳುಗಳು (10 ವರ್ಷಗಳು)
  2. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು 10 ವರ್ಷದಲ್ಲಿ ದುಪ್ಪಟ್ಟಾಗಿ ನಿಮ್ಮ ಕೈ ಸೇರುತ್ತದೆ ಎನ್ನುವುದೇ ಈ ಯೋಜನೆಯ ಮುಖ್ಯ ಆಕರ್ಷಣ ಸಂಗತಿಯಾಗಿದೆ. ನೀವೇನಾದರೂ ರೂ.10 ಲಕ್ಷ ಯೋಜನೆಯಡಿ ಇಂದು ಹೂಡಿಕೆ ಮಾಡಿದರೆ ಇನ್ನು 10 ವರ್ಷಗಳಲ್ಲಿ ಅದು ರೂ.20 ಲಕ್ಷ ಹಣವಾಗಿರುತ್ತದೆ.
  3. ಕನಿಷ್ಠ ರೂ.1000 ದಿಂದ ಗರಿಷ್ಠ ಯಾವುದೇ ಮಿತಿ ಇಲ್ಲದೆ ಈ ಯೋಜನೆಯಡಿ ಹಣ ಹೂಡಿಕೆ ಮಾಡಬಹುದು
  4. ರೂ.1.5 ಲಕ್ಷದವರೆಗೆ ಸೆಕ್ಷನ್ 1961ರ ಸೆಕ್ಷನ್ 80C ನಡಿ ತೆರಿಗೆ ವಿನಾಯಿತಿ ಇರುತ್ತದೆ
  5. 10 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಒಂಟಿಯಾಗಿ, ಜಂಟಿಯಾಗಿ ಅಥವಾ ಮೂರು ಜನರು ಒಟ್ಟಾಗಿ ಈ ಯೋಜನೆ ಖಾತೆ ತೆರೆಯಬಹುದು.
  6. ಯೋಜನೆ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಲಭ್ಯವಿದೆ (ಕಿಸಾನ್ ವಿಕಾಸ್ ಪತ್ರ ಯೋಜನೆಯ ಸರ್ಟಿಫಿಕೇಟ್ ನೀಡಿ ನೀವು ಗೃಹ ಸಾಲ ಅಥವಾ ಇನ್ನಿತರ ಸಾಲಗಳನ್ನು ಯಾವುದೇ ಹಣಕಾಸು ಸಂಸ್ಥೆ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪಡೆಯಬಹುದು)
  7. 2 ವರ್ಷ 6 ತಿಂಗಳು ತುಂಬಿದ ಬಳಿಕ ಈ ಯೋಜನೆಯನ್ನು ಬೇಕಾದರೆ ರದ್ದು ಪಡಿಸಬಹುದು, ಆದರೆ ಕಡಿಮೆ ಬಡ್ಡಿ ನೀಡಲಾಗುತ್ತದೆ.
  8. ನಾಮಿನಿ ಲಭ್ಯ ಕೂಡ  ಇರಲಿದೆ .
  9. ಹತ್ತಿರದ ಯಾವುದೇ ಅಂಚೆ ಕಚೇರಿಯಲ್ಲಿ ಈ ಕೆಳಗಿನ ದಾಖಲೆಗಳನ್ನು ನೀಡಿ ಕಿಸಾನ್ ವಿಕಾಸ್ ಪತ್ರ ಖಾತೆ ತೆರೆಯಬಹುದು.

1. ಆಧಾರ್ ಕಾರ್ಡ್
2. ಪ್ಯಾನ್ ಕಾರ್ಡ್
3. ಇ-ಕೆವೈಸಿ
4. ಮೊಬೈಲ್ ನಂಬರ್

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment

WhatsApp Group Join Now
Telegram Group Join Now