ಜನರು ತಾವು ಉಳಿತಾಯ ಮಾಡಿದ ಹಣವನ್ನು ಭದ್ರತೆಯಿಂದ ಇಡಲು ಬ್ಯಾಂಕಗಳ ಮೊರೆ ಹೋಗುತ್ತಾರೆ ಅಥವಾ ಯಾವುದೇ ಹಣಕಾಸಿನ ಸಂಸ್ಥೆಯನ್ನು ಹುಡುಕುತ್ತಾರೆ. ಕೆಲವು ಜನರು ಹಣವನ್ನು ಉಳಿತಾಯ ಮಾಡುವುದರ ಜೊತೆಗೆ, ಅದರ ಸುರಕ್ಷತೆಗೂ ಕೂಡ ಹೆಚ್ಚಿನ ಆದ್ಯತೆ ನೀಡುತ್ತಾರೆ ಮತ್ತು ಹಣವನ್ನು ಖಾತೆಯಲ್ಲಿ ಇಡುವುದರ ಬದಲು ಆ ಹಣವನ್ನು ಹೂಡಿಕೆ ಮಾಡಿದರೆ ಇನ್ನು ಹೆಚ್ಚಿನ ಲಾಭ ಪಡೆಯಬಹುದು ಎಂದು ಯೋಚಿಸುತ್ತಾರೆ.
ಆದರೆ ಪ್ರತಿದಿನ ಸುದ್ದಿ ಮಾಧ್ಯಮಗಳಲ್ಲಿ ಶೇರ್ ಮಾರ್ಕೆಟ್ ಕುರಿತು ಮತ್ತು ಚಿಟ್ ಫಂಡ್ ಗಳ ಕುರಿತು ಆಘಾತಕರ ಸುದ್ದಿ ಕೇಳುವುದರಿಂದ ಹಣಕ್ಕೆ ಹೆಚ್ಚಗಿ ಲಾಭ ಇಲ್ಲದಿದ್ದರೂ ಭದ್ರತೆ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಬಂದಿದೆ. ಈ ರೀತಿ ಹಣಕ್ಕೆ ಗ್ಯಾರೆಂಟಿ ಮತ್ತು ಉತ್ತಮ ಬಡ್ಡಿದರ ಕೂಡ ಸಿಗಬೇಕು ಎಂದರೆ ಪೋಸ್ಟ್ ಆಫೀಸಿನ ಉಳಿತಾಯ ಸ್ಕೀಮ್ ಗಳು ಅತ್ಯುತ್ತಮ ಯೋಜನೆಗಳಾಗಿವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಸರ್ಕಾರವೇ ಭದ್ರತೆ ಕೊಡುತ್ತದೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡಲು ಒಟ್ಟು 12 ಯೋಜನೆಗಳಿವೆ. ಅದರಲ್ಲಿ ನಿಶ್ಚಿತ ಠೇವಣಿ ಯೋಜನೆ ಕೂಡ ಒಂದು. ಇದನ್ನು ಪೋಸ್ಟ್ ಆಫೀಸ್ FD ಯೋಜನೆ ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಎಷ್ಟು ಬಡ್ಡಿದರ ಸಿಗುತ್ತದೆ, ಇದಕ್ಕೆ ಇರುವ ನಿಯಮಗಳು ಏನು, ಈ ಯೋಜನೆಯನ್ನು ಹೇಗೆ ಮಾಡಿಸಬೇಕು ಮತ್ತು ಅದಕ್ಕಾಗಿ ಏನೇನು ದಾಖಲೆಗಳನ್ನು ಕೊಡಬೇಕು ಎನ್ನುವ ಪ್ರಮುಖ ಸುದ್ದಿಗಳನ್ನು ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಯೋಜನೆ ಹೆಸರು:- ಪೋಸ್ಟ್ ಆಫೀಸ್ FD ಯೋಜನೆ.
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ವೋಟರ್ ಐಡಿ
● ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
ವಯಸ್ಸಿನ ಮಿತಿ:- 10 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಯಾರು ಬೇಕಾದರೂ ಈ ಖಾತೆ ತೆರೆಯಬಹುದು.
ಮೆಚ್ಯುರಿಟಿ ಅವಧಿ:- ಒಂದರಿಂದ ಐದು ವರ್ಷಗಳು.
ಪ್ರಮುಖ ನಿಯಮಗಳು:-
● ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ FD ಅಕೌಂಟ್ ಓಪನ್ ಮಾಡಬಹುದು.
● ಜಂಟಿಯಾಗಿ ಕೂಡ ತಂದೆ ಮಕ್ಕಳು ಅಥವಾ ಗಂಡ ಹೆಂಡತಿ ಈ ಖಾತೆಯನ್ನು ಓಪನ್ ಮಾಡಬಹುದು.
● ಒಂದು ಪೋಸ್ಟ್ ಆಫೀಸಿನಿಂದ ಭಾರತದಾದ್ಯಂತ ಯಾವುದೇ ಪೋಸ್ಟ್ ಆಫೀಸಿಗೆ ಬೇಕಾದರೂ ನಿಮ್ಮ FD ಅಕೌಂಟನ್ನು ಟ್ರಾನ್ಸ್ಫರ್ ಮಾಡಿಸಿಕೊಳ್ಳಬಹುದು.
● ನಾಮಿನೇಷನ್ ಫೆಸಿಲಿಟಿ ಕೂಡ ಇದ್ದು, ಒಂದು ವೇಳೆ ಯೋಜನೆ ಮಧ್ಯದಲ್ಲಿ ನೀವು ಮೃತಪಟ್ಟಲ್ಲಿ ನೀವು ನಾಮಿನಿ ಮಾಡಿದ ಸದಸ್ಯರಿಗೆ ಕಾನೂನಿನ ಮೂಲಕ ಸಲ್ಲಬೇಕಾದ ಮೊತ್ತ ಸಲ್ಲುತ್ತದೆ.
● ಕನಿಷ್ಠ 1,000 ರೂಪಾಯಿ ಇಡುವುದರಿಂದ ಗರಿಷ್ಠವಾಗಿ ಎಷ್ಟು ಮೊತ್ತದ ಹಣವನ್ನು ಬೇಕಾದರೂ ಈ ಯೋಜನೆಯಲ್ಲಿ ಇಡಬಹುದು. ಯಾವುದೇ ಲಿಮಿಟ್ ಇರುವುದಿಲ್ಲ.
● ಆದಾಯ ತೆರಿಗೆ ಇಲಾಖೆಯ 80C ಅಡಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಮೊತ್ತಕ್ಕೆ ರಿಯಾಯಿತಿ ಇರುತ್ತದೆ.
● FD ಅಕೌಂಟಿನಲ್ಲಿ ಇಡುವ ಹಣಕ್ಕೆ 5.5% ಇಂದ 6.7%ವಾರ್ಷಿಕ ಬಡ್ಡಿ ದೊರೆಯುತ್ತದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪರೀಷ್ಕರಿಸಲ್ಪಡುತ್ತದೆ.
●ಎಫ್ ಡಿ ಅಕೌಂಟ್ ನಲ್ಲಿ ನೀವು ಎಷ್ಟು ವರ್ಷಗಳವರೆಗೆ ಹಣ ಇಡುತ್ತಿರೋ ಅದರ ಮೇಲೆ ಬಡ್ಡಿದ ನಿರ್ಧಾರವಾಗುತ್ತದೆ.
ಒಂದು ವರ್ಷಕ್ಕೆ 5.5%
ಎರಡು ವರ್ಷಕ್ಕೆ 5.5%
ಐದು ವರ್ಷಕ್ಕೆ 6.7%
ಇವುಗಳ ಕುರಿತು ಪೂರ್ತಿ ಮಾಹಿತಿ ಪಡೆಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮ್ಮ ಹತ್ತಿರದ ಅಂಚೆಕಛೇರಿ ಠಾಣೆಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.