ಕರ್ನಾಟಕ ರಾಜ್ಯದಾದ್ಯಂತ ಯಾವುದೇ ಆಸ್ತಿ ಮಾರಾಟ ಮತ್ತು ಖರೀದಿಗೆ ಹೊಸ ರೂಲ್ಸ್ ಮಾಡಿ ಮಾನ್ಯ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಯಾವುದೇ ಆಸ್ತಿಗಳನ್ನು ನೋಂದಣಿ ಮಾಡುವುದಕ್ಕೆ ಸಬ್ ರಿಜಿಸ್ಟರ್ ಆಫೀಸಿಗೆ ಸಾಕಷ್ಟು ಬಾರಿ ಅಲೆದಾಡುವುದು, ಮಧ್ಯವರ್ತಿಗಳ ಹಾವಳಿ, ಲಂಚಗುಳಿತನ ಸಹ ಸಾಕಷ್ಟು ಸಮಸ್ಯೆಗಳನ್ನು ನೋಡಿ ಸಾಕಾಗಿದ್ದ ಜನತೆಗೆ ಇವುಗಳಿಂದ ಮುಕ್ತಿ ನೀಡಲು ಇನ್ನು ಮುಂದೆ ಕೇವಲ 10 ನಿಮಿಷಗಳಲ್ಲಿ ಮನೆಯಲ್ಲಿ ಕುಳಿತು ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟ ಮಾಡಬಹುದು.
ಯಾವುದೇ ಸಬ್ ರಿಜಿಸ್ಟರ್ ಆಫೀಸಿಗೆ ಹೋಗುವ ಅವಶ್ಯಕತೆಯೂ ಇರುವುದಿಲ್ಲ ಇನ್ನು ಮುಂದೆ ಕರ್ನಾಟಕದಲ್ಲಿ ಮನೆ ಅಥವಾ ಫ್ಲಾಟ್ ಮಾರಾಟ ಮಾಡುವುದು ಮತ್ತು ಖರೀದಿ ಮಾಡಿರುವುದನ್ನು ಆನ್ಲೈನ್ ಅಲ್ಲಿ ನೋಂದಣಿ ಮಾಡಿಕೊಳ್ಳಲು ಹೊಸ ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿದೆ. ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಂಶ 2.0 ಜಾರಿಗೆ ತಂದಿದ್ದು ಈ ಮೂಲಕ ಏಳರಿಂದ ಹತ್ತು ನಿಮಿಷಗಳಲ್ಲಿ ಆಸ್ತಿ ನೋಂದಣಿ ಅಗಲಿದೆ. ಸುದ್ದಿಗೋಷ್ಠಿಯಲ್ಲಿ ಕಾವೇರಿ 2.0 ತಂತ್ರಾಂಶದ ಬಗ್ಗೆ ಮಾತನಾಡಿದ ಮಾನ್ಯ ಸಚಿವರಾದ ಅಶೋಕ್ ಅವರು ಈ ತಂತ್ರಾಂಶ ವಿನೂತನ ನಾಗರಿಕ ಸೇವೆ ಆಗಿದೆ.
ಮದ್ಯವರ್ತಿಗಳ ಹಾವಳಿ ಕಡಿಮೆ ಆಗಲಿದೆ ವರ್ಷದಲ್ಲಿಯೇ ಈ ರೀತಿ ಕೈಯಲ್ಲಿ ಅರ್ಜಿ ಹಾಕುವುದನ್ನು ತಪ್ಪಿಸಿ ಆನ್ಲೈನ್ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಮೂರು ತಿಂಗಳ ಒಳಗೆ ಎಲ್ಲಾ ಕಡೆ ಪ್ರಾರಂಭವಾಗಲಿದೆ. ಆಸ್ತಿ ವಿವಾಹ ನೋಂದಣಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ನೋಂದಣಿಗಳನ್ನು ಆನ್ಲೈನ್ ಅಲ್ಲಿಯೇ ಮಾಡಲಾಗುತ್ತದೆ ಎಂದಿದ್ದಾರೆ. ಈ ನೋಂದಣಿ ಮಾಡುವ ಮೊದಲು ಮನೆಯಲ್ಲಿಯೇ ಕುಳಿತು ಡೀಡ್ ಅನ್ನು ಉಪನೋಂದಣಾಧಿಕಾರಿ ಕಛೇರಿಗೆ ಕಳುಹಿಸಿದರೆ ಅದರಲ್ಲಿ ತಪ್ಪುಗಳಿದ್ದರೆ ನೋಂದಣಾಧಿಕಾರಿಗಳು ತಿದ್ದಿ ಕಳುಹಿಸುತ್ತಾರೆ.
ನಂತರ ಎಲ್ಲವು ಸರಿ ಇದ್ದರೆ ನಿಗದಿತ ಹಣ ಕಟ್ಟಲು ಸೂಚನೆ ಸೂಚಿಸುತ್ತಾರೆ. ಎಲ್ಲವೂ ಸರಿಯಾದ ಬಳಿಕ ಸ್ಲಾಟ್ ಬುಕ್ ಮಾಡಲಾಗುವುದು. ಆ ಸಮಯದಲ್ಲಿ ಹೋಗಿ ಮುಖ, ಸಹಿ, ಹೆಬ್ಬಟ್ಟು ಹಾಕಿ ನೋಂದಣಿ ಮಾಡಿಸಿಕೊಳ್ಳಬಹುದು. ಇದರಿಂದ ಡೇಟಾ ಎಂಟ್ರಿ ಕಡಿಮೆ ಆಗಲಿದೆ. ಆನ್ಲೈನ್ ಅಲ್ಲಿಯೇ ಇಸಿ ಮತ್ತು ಪ್ರಮಾಣ ಪತ್ರವನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಕಾವೇರಿ ತಂತ್ರಜ್ಞಾನ 2.0 ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತಿದೆ.
ಇದನ್ನು ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ. ಡಿಡಿ ಮತ್ತು ಚಲನ್ ಹಿಂದೆ ಸ್ಕ್ಯಾನ್ ಆಗಿತ್ತು. ಯಾರದೋ ಹೆಸರಿಗೆ ಡಿಡಿ ಹೋಗುತ್ತಿತ್ತು. ಈಗ ಅವರ ಬ್ಯಾಂಕ್ ಅಕೌಂಟ್ ಇಂದ ನೇರವಾಗಿ ಇಲಾಖೆಯ ಖಾತೆಗೆ ವರ್ಗಾವಣೆ ಆಗಲಿದೆ. ಸರ್ವರ್ ಸಮಸ್ಯೆ ಕೂಡ ಇರುವುದಿಲ್ಲ. ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ಜನರ ಗುಂಪು ಕೂಡ ಇರುವುದಿಲ್ಲ. ಅವರಿಗೆ ಅನುಕೂಲ ಆದ ಸಮಯದಲ್ಲಿ ಬಂದು ಹೋಗಬಹುದು. ಮಧ್ಯವರ್ತಿಗಳ ಹಾವಳಿಯೂ ಇರುವುದಿಲ್ಲ. ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು.
ಉಪ ನೊಂದಣಾಧಿಕಾರಿ ಇನ್ನು ಮುಂದೆ ಪಾಸ್ಪೋರ್ಟ್ ಕಛೇರಿ ರೀತಿ ಕಾರ್ಯನಿರ್ವಹಿಸಲಿದೆ. ಲಿಫ್ಟ್ ಹಾಗೂ ವಿಕಲಚೇತನರ ರಾಂಪ್ ಎಲ್ಲವೂ ಕೂಡ ಇರಲು ಸೂಚಿಸಲಾಗಿದೆ. ವಿವಿಧ ಕಛೇರಿಗಳಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಮೊದಲು ಸಬ್ ರಿಜಿಸ್ಟ್ರಾರ್ ಕಛೇರಿಗೆ ಹೋಗಲು ಪಹಣಿ ನಕಲಿನ ದಾಖಲೆ ನೀಡಿ ನೋಂದಣಿ ಮಾಡಲಾಗುತ್ತಿತ್ತು ಈಗ ಸಬ್ ರಿಜಿಸ್ಟರ್ ಕಛೇರಿಯಲ್ಲಿಯೇ ಎಲ್ಲ ದಾಖಲೆಗಳು ಲಭ್ಯವಿರಲಿವೆ.
ಖಾತೆ, ಪಹಣಿ, ಸರ್ವೆ ನಂಬರ್ ಎಲ್ಲಾ ದಾಖಲೆ ಸಬ್ ರಿಜಿಸ್ಟರ್ ಕಛೇರಿಯಲ್ಲಿಯೇ ಇರಲಿದೆ. ನೋಂದಣಿ ಮಾಡಿದ ನಂತರ ಸಹಿ ಮಾಡಿದ ದಾಖಲೆ ಡಿಜಿ ಲಾಕರ್ ಗೆ ಹೋಗಲಿದೆ. ಮನೆಯಲ್ಲಿಯೇ ಕುಳಿತು ದಾಖಲೆ ಪಡೆಯಬಹುದೆಂದಿದ್ದಾರೆ. 79 ಎ ಮತ್ತು ಬಿ ತೆಗೆಯಲಾಗಿದೆ ಎಂಬಿತ್ಯಾದಿ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ.