ನೀರು ಬಂದಿಲ್ಲ ಅಂದ್ರೆ 50% ಹಣ ವಾಪಸ್ ಕೊಡ್ತಾರೆ ವಿದೇಶಿ ತಂತ್ರಜ್ಞಾನದ ಮೂಲಕ 2500 ಬೋರ್ವೆಲ್ ಗಳು ಯಶಸ್ವಿಯಾಗಿದೆ. ಜಾಮೀನು or ಮನೆಯಲ್ಲಿ ಬೋರ್ವೆಲ್ ಹಾಕಿಸುವವರು ನೋಡಿ

 

ಪದೇ ಪದೇ ಬೋರ್ವೆಲ್ ಪಾಯಿಂಟ್ ಗಳು ಫೇಲ್ ಆಗುತ್ತಿದೆಯೇ? ಇಲ್ಲಿದೆ ಗುಡ್ ನ್ಯೂಸ್.. ವಿದೇಶಿ ತಂತ್ರಜ್ಞಾನದ ಮೂಲಕ ಸಕ್ಸಸ್ ಆದ 2500 ಬೋರ್ವೆಲ್ ಪಾಯಿಂಟ್ ಗಳು..! ಆಹಾರ ವಸ್ತುಗಳು, ಧಾನ್ಯಗಳು, ತೋಟವನ್ನು ಬೆಳೆಸುವಾಗ ರೈತ ಹೆಚ್ಚಿನ ನೀರಿನ ಅವಶ್ಯಕತೆಯಿಂದಾಗಿ ಬೋರ್ವೆಲ್ ಗಳನ್ನು ಹೊಡೆಸಲು ಮುಂದಾಗುತ್ತಾನೆ. ಆದರೆ ಕುಸಿದ ಅಂತರ್ಜಲ ಮಟ್ಟದಿಂದಾಗಿ ಪದೇಪದೇ ನೋಡಿದ ಬೋರ್ವೆಲ್ ಪಾಯಿಂಟ್ ಗಳು ಫೇಲ್ ಆಗುತ್ತಿವೆ. ಭೂಮಿಯ ತಳ ಮುಟ್ಟಿದರು ನೀರಿನ ಹನಿಯೇ ಹೊರಬರದೆ ರೈತ ಕಂಗಾಲಾಗಿದ್ದಾನೆ.

3 4 ಬೋರ್ವೆಲ್ ಗಳನ್ನು ಹೊಡೆದು ಫೇಲಾದ ನಂತರ ಸಾಕಷ್ಟು ಹಣದ ನಷ್ಟವನ್ನು ಅನುಭವಿಸಿ, ಕಷ್ಟದಿಂದ ಕಂಗಾಲಾಗಿ ಕುಳಿತುಕೊಳ್ಳುತ್ತಾನೆ. ಇತ್ತೀಚಿನ ದಿನಗಳಲ್ಲಿ ರೈತರು ಹೊಸ ಹೊಸ ಬೆಳೆಗಳನ್ನು ಬೆಳೆಯಲು ಪ್ರಯತ್ನ ಪಡುತ್ತಿರುತ್ತಾರೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಸಸ್ಯವಿರಲಿ, ಪ್ರಾಣಿಗಳಿರಲಿ ಉತ್ತಮವಾಗಿ ಬೆಳೆಯಲು ಸಾಕಷ್ಟು ಪ್ರಮಾಣದ ನೀರಿನ ಅವಶ್ಯಕತೆ ಇರುತ್ತದೆ. ಕೃಷಿ ಭೂಮಿಗಾಗಿ ನೀರಿನ ಅವಶ್ಯಕತೆ ಎಲ್ಲಕ್ಕಿಂತ ಜಾಸ್ತಿಯೇ ಇದೆ ಎಂದರು ತಪ್ಪಾಗಲಾರದು.

ಹವಾಮಾನ ವೈಪರೀತ್ಯದಿಂದಾಗಿ ಮಳೆಗಾಲದಲ್ಲಿ ಪ್ರವಾಹವಾಗುವಷ್ಟು ನೀರು ಸುರಿದರು, ಬೇಸಿಗೆಯಲ್ಲಿ ದಿನನಿತ್ಯದ ಬಳೆಕೆಗೂ ನೀರಿನ ಅಭಾವವು ಕಾಡುತ್ತಿದೆ. ದಿನನಿತ್ಯದ ಚಟುವಟಿಕೆಗಳಿಗೆ ವ್ಯವಸಾಯ ಭೂಮಿಗೆ ನೀರನ್ನು ಒದಗಿಸುವುದು ಒಂದು ದೊಡ್ಡ ಸಮಸ್ಯೆಯಾಗಿ ದೇಶದ ವಿವಿಧ ಭಾಗಗಳಲ್ಲಿ ಕಾಣುತ್ತಿದೆ. ಬೋರ್ವೆಲ್ ಗಳಿಂದ ನೀರನ್ನು ಪಡೆಯಲು ಪಾಯಿಂಟ್ಗಳನ್ನು ನೋಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕಡ್ಡಿ ಪಾಯಿಂಟ್, ಕಾಯಿ ಪಾಯಿಂಟ್ ಎಂಬೆಲ್ಲಾ ವಿಧಾನಗಳನ್ನು ಅನುಸರಿಸಲಾಗುತ್ತದೆ.

ತಮ್ಮ ಭೂಮಿಯ ಯಾವ ಒಂದು ಜಾಗದಲ್ಲಿ ಹೆಚ್ಚಿನ ನೀರು ಸಿಗಬಹುದು ಎಂದು ಊಹಿಸಲು ನುರಿತ ತಜ್ಞರನ್ನು ಕರೆಯಿಸಲಾಗುತ್ತದೆ. 200 ರಿಂದ 300 ಸಕ್ಸೆಸ್ ಬೊರ್ವೆಲ್ ಪಾಯಿಂಟ್ಗಳನ್ನು ತೋರಿಸಿಕೊಟ್ಟ ತಜ್ಞರಿಗೆ ಬಹು ಬೇಡಿಕೆ ಇರುತ್ತದೆ. ನಾವೀಗ ಪರಿಚಯಿಸುತ್ತಿರುವ ವ್ಯಕ್ತಿಯು 2500 ಸಕ್ಸಸ್ ಬೋರ್ವೆಲ್ ಪಾಯಿಂಟ್ ಗಳನ್ನು ತೋರಿಸಿಕೊಟ್ಟವರು.

ಮಂಚೇಗೌಡ ಎಂಬುವವರು ವಿದೇಶಿ ತಂತ್ರಜ್ಞಾನಗಳನ್ನು ಉಪಯೋಗಿಸಿ, ಭೂಮಿಯ ಯಾವ ಭಾಗದಲ್ಲಿ ಮತ್ತು ಎಷ್ಟು ಆಳದಲ್ಲಿ ನೀರು ಸಿಗಬಹುದು ಎಂಬುದನ್ನು ಅಂದಾಜಿಸುತ್ತಾರೆ. ಇವರು ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನವರು. ಕೋಲಾರ, ಹಾಸನ, ಮಂಡ್ಯ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನೇಕ ವ್ಯವಸಾಯ ಭೂಮಿಗಳಲ್ಲಿ ಬೋರ್ವೆಲ್ ಪಾಯಿಂಟ್ ಗಳನ್ನು ತೋರಿಸಿರುತ್ತಾರೆ. ಕರ್ನಾಟಕದ ಉದ್ದಗಲಕ್ಕೂ ಇವರಿಗೆ ಬಹು ಬೇಡಿಕೆ ಇದೆ. ಇವರಲ್ಲಿ ಜರ್ಮನ್, ಜಪಾನ್, ಯುಕೆ ದೇಶಗಳ ಯಂತ್ರೋಪಕರಣಗಳಿವೆ.

ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೇಗೆ ಉಪಯೋಗ ಪಡೆಯಬೇಕು ಎಂದು ಅರಿತವನೇ ಜಾಣ. ಮಂಚೇಗೌಡ ಅವರು ನಾಲ್ಕು ವಿಧದ ಉಪಕರಣಗಳನ್ನು ಬಳಸಿ ನೀರಿರುವ ಜಾಗವನ್ನು ಪತ್ತೆ ಹಚ್ಚುತ್ತಾರೆ. ಅವು ಡಿಟೆಕ್ಟರ್, ಸ್ಕ್ಯಾನರ್, ಜಿಪಿಎಸ್ ಪೊಯಂಟರ್ ಹಾಗೂ ಡೌಸಿಂಗ್ ಸಾಧನ. ಸ್ಕ್ಯಾನರ್ ನಿಂದ 42 ಫ್ರಿಕ್ವೆನ್ಸಿಯಲ್ಲಿ ಲೇಯರ್ ಮ್ಯಾಪ್ ಅನ್ನು ಪಡೆದು ಯಾವ ಆಳದಲ್ಲಿ ನೀರಿದೆ ಎಂಬುದನ್ನು ನಿಂತ ಜಾಗದಲ್ಲಿಯೇ ಹೇಳುತ್ತಾರೆ.

ಮೀಟರ್ ನಲ್ಲಿ ತೋರಿಸುವ ಅಳತೆಯನ್ನು ಅಡಿಗೆ ಬದಲಾಯಿಸಿ ತಿಳಿಸಿಕೊಡುತ್ತಾರೆ. ಇವಿಷ್ಟೇ ಅಲ್ಲದೆ ಎಷ್ಟು ಅಡಿ ತೋಡಿದರೆ ಎಷ್ಟು ಇಂಚು ನೀರು ಬರುತ್ತದೆ ಎಂಬುದನ್ನು ಕೂಡ ಹೇಳುತ್ತಾರೆ. ಊರಿನ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೇಳಿದರೆ ಉಚಿತವಾಗಿ ಪಾಯಿಂಟ್ ಅನ್ನು ಗುರುತಿಸಿ ಕೊಡುತ್ತಾರಂತೆ. ಈ ಕುರಿತಾಗಿ ಮಂಚೆಗೌಡರಲ್ಲಿ ಪ್ರಶ್ನಿಸಿದಾಗ ಅವರು, ‘ಇಕ್ವಿಪ್ಮೆಂಟ್ಸ್ ಗಳನ್ನು ಹೊಂದಿರುವುದು ದೊಡ್ಡ ವಿಚಾರವಲ್ಲ. ಆದರೆ ಅದನ್ನು ಹೇಗೆ ಉಪಯೋಗಿಸುತ್ತಿದ್ದೇವೆ ಎಂಬುದು ಬಹು ಮುಖ್ಯ.

ನಾವು ತೋರಿಸಿದ ಪಾಯಿಂಟ್ ಗಳು ಫೇಲಾದರೆ ನೀಡಿದ 50% ಹಣವನ್ನು ವಾಪಸ್ ಕೊಡುತ್ತೇವೆ’ ಎಂದರು. ಮಾತನ್ನು ಮುಂದುವರಿಸಿ ,’ಬೇಸರದ ಸಂಗತಿ ಎಂದರೆ ಭೂತಾಯಿಯು ಮಡಿಲಿನಲ್ಲಿ ಇಟ್ಟುಕೊಂಡ ನೀರನ್ನು ನಾವೆಲ್ಲರೂ ಬಳಸಲು ಮುಂದಾಗುತ್ತಿದ್ದೇವೆ. ಆದರೆ ಅದನ್ನು ತುಂಬಿಸುವ ಪ್ರಯತ್ನವನ್ನು ಯಾರೊಬ್ಬರೂ ಮಾಡುತ್ತಿಲ್ಲ. ರೇನ್ ವಾಟರ್ ಹಾರ್ವೆಸ್ಟಿಂಗ್ ಗಾಗಿ ಸರ್ಕಾರದಿಂದ 20000 ಸಹಾಯಧನ ದೊರೆಯುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರು ನೀರನ್ನು ಉಳಿಸುವ ಯೋಚನೆ ಮಾಡಬೇಕು’ ಎಂದು ಸಂದೇಶವನ್ನು ನೀಡಿದರು.

Leave a Comment

%d bloggers like this: