ಹಲವಾರು ಕಾರಣಕ್ಕಾಗಿ ಬ್ಯಾಂಕ್ ಕಡೆಯಿಂದ ಸಾಲ ತೆಗೆದುಕೊಂಡು ತೀರಿಸಲು ಆಗದೆ ಇದ್ದಾಗ ನಿಮ್ಮನ್ನು ಡಿಫಾಲ್ಟರ್ ಎಂದು ಅವರು ಗುರುತಿಸುತ್ತಾರೆ. ಈ ರೀತಿ ತೆಗೆದುಕೊಂಡ ಸಾಲವನ್ನು ಕಟ್ಟದೆ ಇರುವುದು ಅಪರಾಧ. ಆದರೆ ಕಾನೂನು ಅಡಿ ಕೆಲವೊಮ್ಮೆ ಇದಕ್ಕೆ ನಿಯಮ ಹಾಗೂ ವಿನಾಯಿತಿ ಸಹ ಇದೆ. ನೀವು ಬ್ಯಾಂಕ್ ಇಂದ ಪಡೆದುಕೊಂಡಿರುವ ಲೋನ್ ಗಳಿಗೆ ಇಎಂಐ ಸರಿಯಾಗಿ ಕಟ್ಟದೇ ಇದ್ದಾಗ ಅವರು ನಿಮಗೆ ನೋಟಿಸ್ ಕಳುಹಿಸುತ್ತಾರೆ.
ಆಗ ನೀವು ನಿಮ್ಮ ಬ್ಯಾಂಕ್ ಗಳಿಗೆ ಭೇಟಿಯಾಗಿ ಯಾವ ಕಾರಣಕ್ಕಾಗಿ ಈ ರೀತಿ ಹಣ ಕಟ್ಟಲಾಗುತ್ತಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು. ಆದರೆ ಖಂಡಿತವಾಗಿಯೂ ನೀವು ಹೇಳುವ ಕಾರಣ ಪ್ರಾಮಾಣಿಕವಾಗಿದ್ದು ನಿಮಗೆ ಆ ರೀತಿ ಹಣ ಕಟ್ಟಲು ಶಕ್ತಿಯೇ ಇಲ್ಲ ಎಂದಾಗ ಮಾತ್ರ ಕೆಲವೊಮ್ಮೆ ಬ್ಯಾಂಕ್ ಇವುಗಳನ್ನು ಒಪ್ಪಿಕೊಂಡು ಕೆಲ ರೀತಿಯಾಗಿ ನಿಮಗೆ ಸಹಾಯಕ್ಕೆ ಬರಬಹುದು.
ನೀವು ಕಟ್ಟಬೇಕಾದ ಮೊತ್ತದಲ್ಲಿ ಸ್ವಲ್ಪ ಕಡಿಮೆ ಮಾಡಬಹುದು ಅಥವಾ ಕೆಲ ತಿಂಗಳು ನಿಮ್ಮ ಈಎಂಐಗೆ ಈಎಂಐ ಹಾಲಿಡೇಸ್ ಎಂದು ಕೊಟ್ಟು ಲೇಟಾಗಿ ಕಟ್ಟುವ ರೀತಿ ಮಾಡಬಹುದು ಅಥವಾ ಸಾಲ ತಿಳಿಸಲು ಇರುವ ಅವಧಿಯನ್ನು ಹೆಚ್ಚಿಗೆ ಮಾಡಬಹುದು ಈ ರೀತಿ ಏನಾದರೂ ಒಂದು ವಿನಾಯಿತಿ ನೀಡುತ್ತದೆ. ಒಂದು ವೇಳೆ ನಿಮ್ಮ ಬಳಿ ಹಣ ಇದೆ ಇಲ್ಲ ಕಟ್ಟಲು ಆಗದೆ ಇರುವ ಹಂತ ತಲುಪಿದ್ದೀರಿ ಎಂದರೆ ಅದನ್ನು ಅವರ ಬಳಿ ಹೇಳಿಕೊಂಡಾಗ ಮೊದಲಿಗೆ ನಿಮ್ಮ ಕೈಯಲ್ಲಿ ಸ್ವಲ್ಪ ಹಣ ಮೊತ್ತದ ಹಣವಾದ್ದಾದರೂ ಕಟ್ಟಲು ಆಗುತ್ತದೆಯಾ ಎಂದು ಅವರು ಪರೀಕ್ಷಿಸುತ್ತಾರೆ.
ನಿಮ್ಮ ಆಸ್ತಿ ಅಥವಾ ಇನ್ನಿತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಆ ಮೂಲಕ ಅದನ್ನು ಹಿಂಪಡೆಯಲು ಸಹ ಪರೀಕ್ಷಿಸಿ ನೋಡುತ್ತಾರೆ. ಜೊತೆಗೆ ನೀವು ಲೋನ್ ಪಡೆಯುವಾಗ ನಿಮಗೆ ಗ್ಯಾರಂಟಿ ಯಾರು ಕೊಟ್ಟಿದ್ದರು ಅವರ ಪ್ರಕಾರ ತುಂಬಿಸಲು ಸಾಧ್ಯವಾಗುತ್ತದೆ ನೋಡುತ್ತಾರೆ. ಈ ಎಲ್ಲಾ ದಾರಿಗಳು ಇಲ್ಲ ಎಂದಾಗ ಅವರು ನಿಮ್ಮನ್ನು ನಿಗಸ್ತಿಷ್ಯನ್ಸ್ ಎಂದು ಪರಿಗಣಿಸುತ್ತಾರೆ .ಆಗ ಇರುವಷ್ಟಕ್ಕೆ ಹಣ ಪಡೆದುಕೊಂಡು ನಿಮ್ಮನ್ನು ಲೋನ್ ಗಳಿಂದ ಬಿಡುಗಡೆ ಮಾಡಬಹುದು.
ಇದು ನೀವು ಸಂಪೂರ್ಣವಾಗಿ ದಿವಾಳಿ ಆಗಿದ್ದಾಗ ಮಾತ್ರ ಒಂದು ವೇಳೆ ನೀವು ಹಣ ಇಟ್ಟುಕೊಂಡು ಹಣ ಬಿಚ್ಚುತ್ತಿಲ್ಲ ಸಾಲ ಮರುಪಾಯಿಸಲು ಇಷ್ಟಪಡುತ್ತಿಲ್ಲ ಎಂದರೆ ಅದು ವೈಯಕ್ತಿಕ ಸಾಲ ಆಗಿದ್ದರೆ ಅವರು ಇನ್ನೊಂದು ಮುಖಾಂತರವಾಗಿ ನಿಮ್ಮಿಂದ ಹಣ ವಸೂಲಿ ಮಾಡುತ್ತಾರೆ. ನೀವು ಲೋನ್ ಪಡೆದುಕೊಳ್ಳುವಾಗ ಕೆಲವರು ಪೋಸ್ಟೇಟೆಡ್ ಚೆಕ್ ಗಳನ್ನು ಕೊಟ್ಟಿರುತ್ತೀರಿ ಅವುಗಳನ್ನು ಅವರು ಪ್ರೆಸೆಂಟ್ ಮಾಡುತ್ತಾರೆ ಆಗ ಚೆಕ್ ಬೌನ್ಸ್ ಆಗಿ ಅದು ಕ್ರಿಮಿನಲ್ ಅಫೆನ್ಸ್ ಆಗುತ್ತದೆ.
ಈ ರೀತಿಯಾಗಿ ನಿಮ್ಮಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಾರೆ ನೀವು ಹೋಂ ಲೋನ್ ಅಥವಾ ವಾಹನಕ್ಕಾಗಿ ಲೋನ್ ಈ ರೀತಿ ಲೋನ್ ಗಳನ್ನು ತೆಗೆದುಕೊಂಡಿದ್ದಾಗ ಅದಕ್ಕೂ ಸಹ ನೋಟಿಸ್ ಕೊಡುತ್ತಾರೆ. ನೀವು ರೆಸ್ಪಾನ್ಸ್ ಮಾಡದೇ ಇದ್ದಾಗ ಅದನ್ನು ಎನ್ಪೀಎ ಎಂದು ಪರಿಗಣಿಸುತ್ತಾರೆ. ಹಲವು ತಿಂಗಳುಗಳ ವರೆಗೆ ಕಾದು ನಿಮ್ಮಿಂದ ಪ್ರತಿಕ್ರಿಯೆ ಬರದೇ ಇದ್ದಾಗ ಪಬ್ಲಿಕ್ ನೋಟಿಸ್ ಕೊಡುತ್ತಾರೆ. ಅದರಲ್ಲಿ ಅಸಲು ಮತ್ತು ಬಡ್ಡಿ ಸೇರಿ ಎಷ್ಟಾಗಿದೆ.
ಎಲ್ಲಾ ವಿವರ ಬರೆದು ಇಷ್ಟು ದಿನದೊಳಗೆ ಪೂರೈಸದೆ ಇದ್ದರೆ ನೀವು ತೆಗೆದುಕೊಂಡ ವಾಹನ ಅಥವಾ ಮನೆಯನ್ನು ಹರಾಜು ಆಗುವುದಾಗಿ ತಿಳಿಸುತ್ತಾರೆ. ಅದಕ್ಕೂ ಪ್ರತಿಕ್ರಿಯೆ ನೀಡದಿದ್ದಾಗ ಮಾರ್ಕೆಟ್ ವ್ಯಾಲ್ಯೂ ನೋಡಿ ಮನೆ ಅಥವಾ ವಾಹನ ಹರಾಜು ಹಾಕಿ ಅವರ ಸಾಲದ ಹಣವನ್ನು ಪಡೆದುಕೊಳ್ಳುತ್ತಾರೆ. ಈ ವಿಷಯದ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.