ಆಸ್ತಿಯನ್ನು ಹೆಣ್ಣು ಮಕ್ಕಳು ವಾರಸುದಾರರ ಸಹಿ ಇಲ್ಲದೆ ಮಾರಾಟ ಮಾಡಬಹುದು ಆದರೆ ಗಂಡು ಮಕ್ಕಳಿಗೆ ಸಾಧ್ಯವಿಲ್ಲ ಯಾಕೆ ಗೊತ್ತ.? ಹೆಣ್ಣು ಮಕ್ಕಳನ್ನು ಬಿಟ್ಟು ಆಸ್ತಿ ಮಾರಟ ಮಾಡುವವರು ಎಚ್ಚರ

 

WhatsApp Group Join Now
Telegram Group Join Now

ನಮಗೆಲ್ಲರಿಗೂ ತಿಳಿದಿರುವಂತೆ ಬಹಳ ಹಿಂದಿನ ಕಾಲದಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಪಾಲನ್ನು ಕೊಡುತ್ತಿರ ಲಿಲ್ಲ. ಬದಲಿಗೆ ಆ ಸಮಯದಲ್ಲಿ ಅವಳಿಗೆ ಎಷ್ಟು ಹಣವನ್ನು ಖರ್ಚು ಮಾಡಿ ಅವಳ ಮದುವೆಯನ್ನು ಮಾಡಬೇಕು ಅಷ್ಟು ಹಣದಲ್ಲಿ ಖರ್ಚು ಮಾಡಿ ಮದುವೆ ಮಾಡಿ ಅವಳಿಗೆ ಇಂತಿಷ್ಟು ಎಂಬಂತೆ ಅವಳಿಗೆ ಆಭರಣಗಳನ್ನು ಅಥವಾ ಸ್ವಲ್ಪ ಹಣವನ್ನು ಕೊಡುತ್ತಿದ್ದರು. ಆಗ ಆ ಸಮಯದಲ್ಲಿ ಆ ಹೆಣ್ಣು ಮಗಳಿಗೆ ಅಷ್ಟರಲ್ಲಿ ಮಾತ್ರ ಹಕ್ಕು ಇತ್ತು ಆದರೆ ಈಗ ಕಾಲ ತುಂಬಾ ಬದಲಾಗಿದೆ.

2005ರ ಕೋರ್ಟ್ ಆದೇಶದ ಮೇರೆಗೆ ತಂದೆಯ ಆಸ್ತಿಯಲ್ಲಿ ಅವಳಿಗೆ ಸಮನಾದ ಹಕ್ಕು ಇದೆ ಎಂಬ ಆದೇಶವನ್ನು ಹೊರಡಿಸಿದ ನಂತರ. ಹೆಣ್ಣು ಮಕ್ಕಳು ತನ್ನ ತಂದೆಯ ಎಲ್ಲಾ ಆಸ್ತಿಗಳಲ್ಲಿಯೂ ಕೂಡ ಸಮ ನಾದ ಹಕ್ಕನ್ನು ಪಡೆಯುತ್ತಾಳೆ. ಆದರೆ 2005ರ ಹಿಂದೆ ಕೇವಲ ಅವಳ ಪಿತ್ರಾರ್ಜಿತ ಆಸ್ತಿಯನ್ನು ಮಾತ್ರ ಕೊಡಲಾಗುತ್ತಿತ್ತು ಆದರೆ 2005ರ ನಂತರ ಕೋರ್ಟ್ ಆದೇಶದಂತೆ ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಅವಳಿಗೆ ಸಮನಾದ ಹಕ್ಕು ಬಂದಿತ್ತು.

ಆದರೆ ತನ್ನ ತಂದೆ ಸ್ವಂತವಾಗಿ ಸ್ವಯಾರ್ಜಿತವಾಗಿ ಹಣವನ್ನು ಸಂಪಾದನೆ ಮಾಡಿ ಆಸ್ತಿಯನ್ನು ಖರೀದಿಸಿದರೆ ಅದನ್ನು ಅವಳಿಗೆ ಕೊಡಲೇಬೇಕು ಎನ್ನುವ ನಿಯಮ ಏನು ಇಲ್ಲ, ಬದಲಿಗೆ ಆ ತಂದೆ ತನ್ನ ಆಸ್ತಿಯನ್ನು ತನ್ನ ಮಗನಿಗೆ ಅಥವಾ ಬೇರೆ ಯಾರಿಗಾದರೂ ಕೊಡಬಹುದು. ಅದನ್ನು ಕೇಳುವಂತಹ ಹಕ್ಕು ಅವಳ ಮಗಳಿಗಾಗಲಿ, ಅವನ ಮಗನಿಗಾಗಲಿ, ಯಾರಿಗೂ ಕೂಡ ಇರುವುದಿಲ್ಲ.

ಅದೇ ರೀತಿಯಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಗಳು ಪಾಲನ್ನು ತೆಗೆದುಕೊಂಡರೆ ಅವಳು ಆ ಆಸ್ತಿಯನ್ನು ತನ್ನ ಹೆಸರಿನಲ್ಲಿಯೇ ಇಟ್ಟು ಕೊಳ್ಳಬಹುದು ಅಥವಾ ಬೇರೆಯವರಿಗೆ ಮಾರಲು ಕೂಡಬಹುದು ಆದರೆ ಅವಳು ಆ ಆಸ್ತಿಯನ್ನು ಮಾರುವ ಸಮಯದಲ್ಲಿ ಯಾವುದೇ ರೀತಿಯ ಕಾನೂನು ಬದ್ಧವಾದ ಅಂದರೆ ಆಸ್ತಿ ಯಾರ ಹಕ್ಕುದಾರರಿರು ತ್ತಾರೋ ಅವರ ಸಹಿ ಇಲ್ಲದೆ ಕೇವಲ ಅವಳೊಬ್ಬಳೇ ಆಸ್ತಿಯನ್ನು ಅಂದರೆ ತನಗೆ ಬಂದಂತಹ ಆಸ್ತಿಯನ್ನು ಮಾರಾಟ ಮಾಡಬಹುದು.

ಆದರೆ ಗಂಡು ಮಗ ಯಾವುದೇ ರೀತಿಯ ಹಕ್ಕನ್ನು ಹೊಂದಿರುವುದಿಲ್ಲ ಅಂದರೆ ಗಂಡು ಮಗನಿಗೆ ಬಂದಂತಹ ಆಸ್ತಿಯನ್ನು ಅವನು ಬೇರೆಯವರಿಗೆ ಮಾರುವ ಹಕ್ಕನ್ನು ಹೊಂದಿರುವುದಿಲ್ಲ ಬದಲಿಗೆ ಅವನಿಗೆ ಬಂದ ಪಿತ್ರಾರ್ಜಿತ ಆಸ್ತಿ ಯಾರ ಹೆಸರಿನಲ್ಲಿ ಇರುತ್ತದೆಯೋ ಆ ವಾರಸುದಾರರು ಸಹಿ ಮಾಡಿಕೊಟ್ಟರೆ ಮಾತ್ರ ಅವನು ಮಾರಬಹುದು.

ಬದಲಿಗೆ ಆ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿ ರಿಜಿಸ್ಟರ್ ಮಾಡಿಸಿ ಕೊಂಡಿದ್ದರೆ, ಮಾತ್ರ ಅವನು ತನ್ನ ಸಹಿಯನ್ನು ಮಾಡುವುದರ ಮೂಲಕ ಆಸ್ತಿಯನ್ನು ಮಾರಾಟ ಮಾಡಬಹುದು. ಆದರೆ ತನಗೆ ಹುಟ್ಟಿದಂತಹ ಮಗ ಅಥವಾ ಮಗಳು 18 ವರ್ಷ ಮೇಲ್ಪಟ್ಟಿದ್ದರೆ ಅವರ ಸಹಿ ಇಲ್ಲದೆ ಅವನು ಅದನ್ನು ಕೂಡ ಮಾರಾಟ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಅಂದರೆ ಹೆಣ್ಣು ಮಕ್ಕಳು ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ತೆಗೆದುಕೊಂಡಿದ್ದರೆ, ಅವಳು ಯಾರದ್ದೇ ಹಕ್ಕನ್ನು ಪಡೆದುಕೊಳ್ಳದೆ ಅಂದರೆ ಅವರ ಸಹಿಯನ್ನು ಪಡೆಯದೆ ತಾನು ಸ್ವಂತವಾಗಿ ಮಾರಾಟ ಮಾಡಬಹುದು. ಆದರೆ ಗಂಡು ಮಕ್ಕಳಿಗೆ ಈ ರೀತಿಯ ಹಕ್ಕು ಇಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now