ನಮ್ಮ ಭಾರತವು ದೊಡ್ಡ ಜನಸಂಖ್ಯೆಯನ್ನು ಹೊಂದಿದ್ದು ಅನೇಕ ಜನ ಕೂಲಿ ಕೆಲಸವನ್ನು ಮಾಡುವುದರ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈ ಕಾರ್ಮಿಕರಿ ಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳು ಯಾವುದೇ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಿಲ್ಲ ಎನ್ನುವುದು ಈ ಯೋಜನೆಗಳ ಉದ್ದೇಶವಾಗಿದೆ.
ಅದರಂತೆ 60 ವರ್ಷದವರೆಗೆ ಕೂಲಿ ಕಾರ್ಮಿಕರು ದಿನಗೂಲಿ ಕೆಲಸ ಮಾಡುವುದರಿಂದ ತಮ್ಮ ವೆಚ್ಚವನ್ನು ಭರಿಸಿಕೊಳ್ಳುತ್ತಾರೆ. ಆದರೆ ಅವರಿಗೆ 60 ವರ್ಷ ವಯಸ್ಸಾದ ನಂತರ ತಮ್ಮ ವೃದ್ಧಾಪ್ಯದ ಸಮಯ ದಲ್ಲಿ ಯಾವುದೇ ರೀತಿಯ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಅಂತವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು.
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಶ್ರಮ ಯೋಗಿ ಮಂಥನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಸರ್ಕಾರವು 60 ವರ್ಷ ವಯಸ್ಸಿನ ಕಾರ್ಮಿಕರಿಗೆ ಮಾಸಿಕ ಪಿಂಚಣಿ ನೀಡುತ್ತದೆ. ಹಾಗಾದರೆ ಶ್ರಮಯೋಗಿ ಮಂಥನ್ ಯೋಜನೆ ಎಂದರೆ ಏನು? ಹಾಗೂ ಇದರಿಂದ ಯಾವುದೆಲ್ಲ ರೀತಿಯ ಪ್ರಯೋಜನ ಸಿಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಕೇಂದ್ರದ ಮೋದಿ ಸರಕಾರವು ವಯೋ ವೃದ್ಧ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯಗಳನ್ನು ಒದಗಿಸಲು ಪ್ರಧಾನಮಂತ್ರಿ ಶ್ರಮ ಯೋಗಿ ಮಂಥನ್ ಯೋಜನೆ ಜಾರಿಗೆ ತರುತ್ತಿದೆ. ಈ ಯೋಜನೆ ಯ ಅಡಿ ಹೂಡಿಕೆ ಮಾಡುವುದರ ಮೂಲಕ ಪ್ರತಿ ಕಾರ್ಮಿಕರು 60 ವರ್ಷಗಳನ್ನು ಪೂರೈಸಿದ ನಂತರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ಪಡೆಯಬಹುದು.
ಅದರಂತೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು, ಅವರ ಮಾಸಿಕ ಆದಾಯ 15,000 ಕ್ಕಿಂತ ಕಡಿಮೆ ಇರುವವರು ಈ ಯೋಜನೆ ಯ ಪ್ರಯೋಜನಗಳನ್ನು ಪಡೆಯಬಹುದು. ಇನ್ನು ಟೈಲರ್ ಗಳು, ಚಮ್ಮಾರರು, ರಿಕ್ಷಾ ಚಾಲಕರು, ಮನೆ ಕೆಲಸದವರು, ಹೀಗೆ ಮುಂತಾದ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಈ ಯೋಜನೆ ಯನ್ನು ಪಡೆದುಕೊಳ್ಳಬೇಕು ಎಂದು ಬಯಸುವವರಿಗೆ 18 ವರ್ಷ ಹಾಗೂ 60 ವರ್ಷ ಒಳಗಿನವರಾಗಿರಬೇಕು. ಆದಾಯ ತೆರಿಗೆ ಪಾವತಿಸುವಂತಹ ವ್ಯಕ್ತಿಗಳು ಈ ಯೋಜನೆಯನ್ನು ಪಡೆಯಲು ಸಾಧ್ಯವಿಲ್ಲ.EPFO, NPS, NSIC ಚಂದಾದಾರರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಯೋಜನೆ ಯನ್ನು ಅನ್ವಯಿಸಲು ನೀವು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ನೀವು ಈ ಯೋಜನೆಯನ್ನು ಮಾಡಿಸಿದರೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದ್ದು, ಕಾರ್ಮಿಕರ ಕೊಡುಗೆಯ ಆಧಾರದ ಮೇಲೆ ಈ ಪಿಂಚಣಿ ಲಭ್ಯವಿದೆ. ಈ ಯೋಜನೆ ಯನ್ನು ಪಡೆಯಲು ನೀವು 50 ರಿಂದ 200 ರೂಪಾಯಿ ಠೇವಣಿಯನ್ನು ನೀಡಬೇಕಾಗುತ್ತದೆ. ಇದರಲ್ಲಿ ಶೇಕಡ 50ರಷ್ಟು ಫಲಾನುಭವಿಗಳು ಹಾಗೂ ಶೇಕಡ 50ರಷ್ಟು ಸರ್ಕಾರದಿಂದ ವಂತಿಕೆ ಪಡೆಯಲಾಗುತ್ತದೆ. ಹಾಗೇನಾದರೂ ಪಿಂಚಣಿದಾರರು ಮೃ.ತ ಪಟ್ಟರೆ ಅವರ ಪತ್ನಿ ಅಥವಾ ಪತಿ ಪಿಂಚಣಿ ಹಣವನ್ನು ಪಡೆಯುತ್ತಾರೆ.
ಈ ಸಂದರ್ಭದಲ್ಲಿ ಪ್ರತಿ ಪಿಂಚಣಿದಾರರು ವರ್ಷಕ್ಕೆ 36,000 ಪಿಂಚಣಿ ಹಣವನ್ನು ಪಡೆಯು ತ್ತಾರೆ. ಈ ಒಂದು ಯೋಜನೆಗೆ ನೀವು ಆನ್ಲೈನ್ ಅಥವಾ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಮಂಥನ್ ಮುಖ್ಯ ವೆಬ್ಸೈಟ್ ನಲ್ಲಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಮೊದಲು ಇಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.