ಮದುವೆಯಾಗಿ ಬರೋಬ್ಬರಿ 22 ವರ್ಷದ ನಂತರ ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಮದುವೆ ಲಗ್ನ ಪತ್ರಿಕೆ. ಅಂತದೇನಿದೆ ಗೊತ್ತ.! ಈ ಲಗ್ನ ಪತ್ರಿಕೆಯಲ್ಲಿ.

 

ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ.

ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ ರೂಪದಲ್ಲಿ ನಮ್ಮ ಜೊತೆ ಇದ್ದೇ ಇರುತ್ತಾರೆ. ಈಗಾಗಲೇ ಕನ್ನಡ ಜನತೆಯು ಎಲ್ಲಾ ಕಾರ್ಯಕ್ರಮದಲ್ಲೂ ಕೂಡ ಪುನೀತ್ ರವರನ್ನು ಬಿಡದೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಮೂಲಕ ಗೌರವವನ್ನು ನೀಡಿದ್ದಾರೆ. ಇದರ ಜೊತೆಗೆ ನಮ್ಮ ಕರ್ನಾಟಕ ಸರ್ಕಾರವು ಪುನೀತ್ ರವರ ಸಾಮಾಜಿಕ ಸೇವೆಗಳಿಗಾಗಿ ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇನ್ನು ಪುನೀತ್ ರವರ ಸಾವಿನ ಬಳಿಕ ಪುನೀತ್ ರವರ ಒಂದಲ್ಲ ಒಂದು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿವೆ. ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿಯವರ ಮದುವೆ ವಾರ್ಷಿಕೋತ್ಸವವಿದ್ದು ಇವರಿಬ್ಬರ ಮದುವೆ ಪತ್ರಿಕೆಯು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡಿದೆ. ಇವರಿಬ್ಬರ ಮದುವೆಯ ಪತ್ರಿಕೆಯ ಫೋಟೋ ಒಂದು ಪ್ರೇಕ್ಷಕರ ಗಮನ ಸೆಳೆದಿದ್ದು ಇವರಿಬ್ಬರ ಲಗ್ನ ಪತ್ರಿಕೆಯೊಳಗೆ ಏನು ಇರಬಹುದು ಎಂಬ ಕುತೂಹಲವು ಹೆಚ್ಚಾಗಿದೆ.

ನಿಮಗೂ ಕೂಡ ಲಗ್ನ ಪತ್ರಿಕೆಯನ್ನು ನೋಡುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಓದಬಹುದು. ಇದರ ಜೊತೆಗೆ ನಿಮ್ಮ ಸ್ನೇಹಿತರೊಂದಿಗೆ ಕೂಡ ಹಂಚಿಕೊಳ್ಳಬಹುದು. ಸದಾ ಎಲ್ಲರನ್ನು ಬೆರೆಯುವಂತಹ ಗುಣವಿರುವ ಪುನೀತ್ ರಾಜಕುಮಾರ್ ಅವರು ಒಬ್ಬ ಗೆಳೆಯನಂತೆ ಅಶ್ವಿನಿ ಅವರಿಗೆ ಪರಿಚಯವಾಗಿದ್ದರು ಒಬ್ಬ ಕಾಮನ್ ಫ್ರೆಂಡ್ ಇಂದ ಪರಿಚಯವಾದಂತಹ ಅಶ್ವಿನಿಯವರ ಜೊತೆ ಸ್ನೇಹ ಬೆಳೆದಿತ್ತು ದಿನ ದಿನಕ್ಕೆ ತಮ್ಮ ಸ್ನೇಹವೂ ಪ್ರೀತಿಗೆ ಜರುಗಿತ್ತು.

ಒಂದು ದಿನ ಸ್ವತಃ ಪುನೀತ್ ರಾಜಕುಮಾರ್ ಅವರ ಅಶ್ವಿನಿ ಅವರ ಬಳಿ ಹೋಗಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರಂತೆ. ಪುನೀತ್ ರವರು ಅಶ್ವಿನಿ ಅವರನ್ನು ನನ್ನನ್ನು ಮದುವೆ ಮಾಡಿಕೊಳ್ಳುತ್ತೀಯ ಎಂದು ಕೇಳಿದರಂತೆ ಅದಕ್ಕೆ ಅಶ್ವಿನಿಯವರು ಹಿಂದೆ ಮುಂದೆ ನೋಡದೆ ಒಂದೇ ಬಾರಿ ಪ್ರೀತಿಯನ್ನು ಒಪ್ಪಿಕೊಂಡಿದ್ದರಂತೆ.

ಇನ್ನು ಅಶ್ವಿನಿ ಅವರು ತಮ್ಮ ತವರು ಮನೆಯಿಂದ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರು ತನ್ನ ಅಣ್ಣನ ಬಳಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರಂತೆ, ಈ ಬಳಿಕ ಸಂಪೂರ್ಣ ರಾಜ ಕುಟುಂಬಕ್ಕೆ ಪುನೀತ್ ರವರ ಪ್ರೀತಿಯ ವಿಷಯವು ತಿಳಿದಿತ್ತು. ಇನ್ನು ಈ ವಿಷಯವಾಗಿ ಎರಡು ಕುಟುಂಬದವರ ಒಪ್ಪಿಗೆಯಿದ್ದು ಮದುವೆಯ ಪ್ರಸ್ತಾಪವು ನಡೆದಿತ್ತು.

ಈ ಜೋಡಿಯ ಮದುವೆಗೆ ಗುರಿ ಹಿರಿಯರ ಹಾಗೂ ಕನ್ನಡ ಸಿನಿಮಾ ರಂಗವು ಸಾಕ್ಷಿಯಾಗಿದೆ. ಡಿಸೆಂಬರ್ 1 1999 ರಂದು ಈ ಜೋಡಿಯು ತಮ್ಮ ದಾಂಪತ್ಯ ಜೀವನವನ್ನು ಶುರು ಮಾಡಿದೆ. ಇವರ ಇಬ್ಬರ ವೈವಾಹಿಕ ಜೀವನವು ಶುರುವಾಗಿ 22 ವರ್ಷಗಳು ಕಳೆದರೂ ಯಾವುದೇ ತರದ ಸಣ್ಣ ಭಿನ್ನಾಭಿಪ್ರಾಯಗಳು ಹಾಗೂ ಕಲಹಗಳು ಇವರ ಮದ್ಯ ಬಂದಿಲ್ಲದಿರುವುದು ವಿಶೇಷ. ಹಾಗೂ ಈ ಜೋಡಿಗೆ ದೃತಿ ಹಾಗೂ ವಂದಿತ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ.

ಇವರಿಬ್ಬರ ಆದರ್ಶ ದಂಪತ್ಯ ಎಷ್ಟೋ ಜೋಡಿಗಳಿಗೆ ಮಾದರಿಯಾಗಿದೆ. ಪುನೀತ್ ರವರ ಅಕಾಲಿಕ ಸಾವು ಎಲ್ಲರನ್ನೂ ಬೇಸರ ಮಾಡಿದೆ ಎಂದರೆ ಸುಳ್ಳಲ್ಲ. ಮೊನ್ನೆ ಡಿಸೆಂಬರ್ ಒಂದರಂದು ಪುನೀತ್ ರವರ ಮದುವೆ ವಾರ್ಷಿಕೋತ್ಸವದ ಸಲುವಾಗಿ ಪುನೀತ್ ರವರ ಲಗ್ನ ಪ‌ತ್ರಿಕೆಯು ವೈರಲ್ ಆಗಿದೆ.

Leave a Comment

%d bloggers like this: