ಬಹುದಿನದ ನಂತರ ಮದುವೆ ಮನೆಯಲ್ಲಿ ಸಖತ್ ಗ್ರಾಂಡ್ ಆಗಿ ಕಾಣಿಸಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್.

ಪುನೀತ್ ರಾಜ‌್‌ಕುಮಾರ್ ಅವರು ನಮ್ಮ ಜೊತೆಯಲ್ಲಿ ಇಲ್ಲ ಎಂದರು ಅವರು ಜನರೊಟ್ಟಿಗೆ ಕಳೆದಂತಹ ನೆನಪು ಮಾತ್ರ ಸದಾ ಇದ್ದೇ ಇರುತ್ತದೆ ಅವರ ಸಿನಿಮಾಗಳು ಹಾಡು ಅವರು ಮಾಡಿದಂತಹ ಸಮಾಜ ಸೇವೆ ಎಲ್ಲವೂ ಸಹ ನಮ್ಮ ಕಣ್ಣೆದುರಲ್ಲಿ ಇದ್ದೇ ಇರುತ್ತದೆ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಹಗಲಿ ಒಂದು ವರ್ಷಗಳು ಕಳೆದಿದೆ ಆದರೂ ಸಹ ಯಾರಿಂದಲೂ ಆ ನೋವನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಅಕ್ಟೋಬರ್ 29 ಒಂದು ಕರಾಳ ದಿನ ಎಂದೇ ಹೇಳಬಹುದು ನಮ್ಮ ಕರ್ನಾಟಕದ ಜನರ ಮನಸ್ಸಿಗೆ ಒಂದು ದೊಡ್ಡ ಆಘಾತವೆ ಆಗಿತ್ತು. ಕನ್ನಡಿಗನಾಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ದೊಡ್ಡ ಸಾಧನೆಯನ್ನು ಮಾಡಿರುವಂತಹ ನಮ್ಮ ನಿಮ್ಮೆಲ್ಲರ ಪುನೀತ್ ರಾಜ್ ಕುಮಾರ್ ಅವರು ನಮ್ಮ ಕರ್ನಾಟಕದಲ್ಲಿ ಇದ್ದರು ಎಂದು ಹೇಳಿಕೊಳ್ಳುವುದೇ ಕನ್ನಡಿಗರಿಗೆ ಒಂದು ದೊಡ್ಡ ಹೆಮ್ಮೆ. ಮದುವೆ ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಅವರು ಜೊತೆಯಾಗಿ ಕಳೆದಿರುವಂತಹ ಸುಂದರ ಕ್ಷಣಗಳ ವಿಡಿಯೋ ಕೆಳಗೆ ಇದೆ.

WhatsApp Group Join Now
Telegram Group Join Now

ಅಪ್ಪು ಅವರನ್ನು ಕಳೆದುಕೊಂಡ ನಂತರ ಅವರ ಹೆಸರಿನಲ್ಲಿ ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಅಪ್ಪು ಅಗಲಿದ ನಂತರ ಅವರ ಮೂರು ಸಿನಿಮಾಗಳು ಸಹ ಬಿಡುಗಡೆಯಾಗಿ ದೊಡ್ಡ ಯಶಸ್ಸನ್ನು ಕಂಡಿದೆ ಅದರಲ್ಲಿ ಗಂಧದಗುಡಿ ಸಿನಿಮಾವನ್ನು ಜನರು ನೋಡಿ ಮೆಚ್ಚಿ ಹಾಡಿಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ರತ್ನ ಪ್ರಶಸ್ತಿಯೂ ಸಹ ನೀಡಲಾಗಿದೆ ಈ ಒಂದು ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪರವಾಗಿ ಅವರ ಪತ್ನಿಯ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಪ್ರಶಸ್ತಿಯನ್ನು ಅಪ್ಪು ಅವರ ಫೋಟೋ ಮುಂದೆ ಇಟ್ಟು ಅವರಿಗೆ ಸಮರ್ಪಣೆ ಮಾಡಿದ್ದಾರೆ. ಅಭಿಮಾನಿಗಳಾಗಿ ನಮಗೆ ಇಷ್ಟು ನೋವು ಉಂಟಾಗಬೇಕಾದರೆ ಅವರ ಪತ್ನಿ ಹಾಗೂ ಅವರ ಮಕ್ಕಳಿಗೆ ಎಷ್ಟು ಆಘಾತವಾಗಿದೆ ಎಂದು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ.

ಪುನೀತ್ ರಾಜ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಅವರ ಪತ್ನಿ ನಡೆದುಕೊಂಡು ಹೋಗುತ್ತಿದ್ದಾರೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಇವರು ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಅಪ್ಪು ಅವರ ಹೆಸರನ್ನು ಉಳಿಸಿಕೊಂಡು ಹೋಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದು. ಅಪ್ಪು ಕೇವಲ ಒಬ್ಬ ನಟನಾಗಿ ಜನರಿಗೆ ಇಷ್ಟವಾಗದೆ, ಉತ್ತಮ ವ್ಯಕ್ತಿಯಾಗಿಯೂ ಸಹ ಇಷ್ಟಪಟ್ಟಿದ್ದಾರೆ ಇವರು ನಟನೆಯನ್ನು ಹೇಗೆ ಮೈಗೂಡಿಸಿಕೊಂಡಿದ್ದರು ಹಾಗೆ ಇವರಿಗೆ ಒಳ್ಳೆತನ ಎನ್ನುವಂತಹದ್ದು ರಕ್ತದಲ್ಲಿಯೇ ಬಂದಿತ್ತು, ತಮ್ಮ ತಂದೆಯ ಹಾದಿಯಂತೆ ಇವರು ಸಹ ಸಾಕಷ್ಟು ಜನರಿಗೆ ಸಹಾಯವನ್ನು ಮಾಡಿದ್ದಾರೆ. ಅನಾಥಾಶ್ರಮ, ವೃದ್ಧಾಶ್ರಮ ಹಾಗೆಯೇ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿರುವುದು ಇನ್ನೂ ಅನೇಕ ರೀತಿಯಲ್ಲಿ ಯಾರಿಗೂ ತಿಳಿಯದ ಹಾಗೆ ಇವರು ಸಹಾಯವನ್ನು ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರು ಹಾಗೂ ಅವರ ಪತ್ನಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಂತಹ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತದೆ ಪುನೀತ್ ರಾಜ್‌ಕುಮಾರ್ ಅವರು ಸಾಕಷ್ಟು ಸರಳ ವ್ಯಕ್ತಿತ್ವ ಇದ್ದಂತಹ ವ್ಯಕ್ತಿ ಇವರು ಎಲ್ಲೇ ಯಾವುದೇ ಮದುವೆ ಗಳಿಗೆ ಸಮಾರಂಭಗಳಿಗೆ ಹೋದರು ಸಹಿತ ಸಾಕಷ್ಟು ಸರಳ ರೀತಿಯಲ್ಲಿ ಹೋಗುತ್ತಿದ್ದರು ಹಾಗೆಯೇ ತಮ್ಮ ಪತ್ನಿಯನ್ನು ಯಾವಾಗಲೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು ಈ ಜೋಡಿಯನ್ನು ನೋಡಿದರೆ ಸಾಕಷ್ಟು ಜನರು ಹೀಗೆ ಇರಬೇಕು ಎಂದುಕೊಂಡಿದ್ದು ಹೌದು ಆದರೆ ವಿಧಿಯ ಆಟದ ಮುಂದೆ ಯಾರು ನಿಲ್ಲಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದೇ ಉದಾವರಣೆ. ಇಂತಹ ಉತ್ತಮ ವ್ಯಕ್ತಿಯಾದರೂ ಸಹ ಒಂದಲ್ಲ ಒಂದು ದಿನ ಎಲ್ಲವನ್ನು ಬಿಟ್ಟು ಹೋಗಲೇಬೇಕು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now