ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇನ್ನೇನು ಒಂದು ವರ್ಷಗಳು ಕಳೆದಿದೆ ಆದರೂ ಸಹ ನಮ್ಮ ಮನಸ್ಸಿನಲ್ಲಿ ಇರುವಂತಹ ನೋವು ಇನ್ನು ಕಡಿಮೆ ಆಗುತ್ತಿಲ್ಲ. ಅಭಿಮಾನಿಗಳ ಪಾಲಿಗೆ ನುಂಗಲಾರದಂತಹ ನೋವು ಎಂದು ಹೇಳಬಹುದು ಅಭಿಮಾನಿಗಳು ಅಪ್ಪು ಅವರ ಮೇಲಿನ ಹುಚ್ಚು ಪ್ರೇಮವನ್ನು ಒಂದೊಂದಾಗಿ ತೋರಿಸುತ್ತಿದ್ದಾರೆ ಅಪ್ಪು ಅವರಿಗೋಸ್ಕರ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅಪ್ಪು ಇನ್ನಿಲ್ಲ ದೊಡ್ಡಮನೆ ಹುಡುಗ ಇನ್ನಿಲ್ಲ ಎಂದು ಗೊತ್ತಾದಾಗ ಅಭಿಮಾನಿಗಳ ಆಕ್ರಂದನ ಮುಗಿಲು ಮುಗಿಲುಮಟ್ಟಿತು. ಕರುನಾಡಿನ ಮನೆ ಮಗ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಅಕ್ಷರಶಃ ಕರ್ನಾಟಕದ ಜನರು ನೋವಿನಲ್ಲಿ ಇದ್ದಾರೆ. ಜನರು ನಾನಾ ರೀತಿಯಲ್ಲಿ ಅವರನ್ನು ನೆನೆಯುತ್ತಿದ್ದಾರೆ. ಪುನೀತ್ ನೆನಪನ್ನು ಹಸಿರಾಗಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ವರ್ಷ ಕಳೆದರೂ ಅವರ ನೆನಪು ಮಾತ್ರ ಯಾರಿಂದಲೂ ಮರೆಯಾಗುತ್ತಿಲ್ಲ. ಅಪ್ಪು ಎಂದೆಂದಿಗೂ ಜೀವಂತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ ಜೊತೆಗೆ ಅವರ ಸಮಾಧಿ ಬಳಿ ಸಾವಿರಾರು ಜನರು ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ಕರುನಾಡಿನ ಮನೆ ಮಗನನ್ನು ಕಳೆದುಕೊಂಡು ಶೂನ್ಯ ಆವರಿಸಿದೆ. ಇನ್ನು ಅಪ್ಪು ಹೆಸರಿನಲ್ಲಿ ಅನೇಕ ಕೆಲಸಗಳು ನಡೆಯುತ್ತಲೇ ಇವೆ. ಇದೀಗ ಅಪ್ಪು ಅವರ ನೆನಪಿನಲ್ಲಿ ಸಾಕಷ್ಟು ಜನರು ಸಾಕಷ್ಟು ರೀತಿಯಾದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಅದರಲ್ಲಿ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವುಳ್ಳಂತಹ ಟ್ಯಾಟೋವನ್ನು ತಮ್ಮ ಕೈ ಮೇಲೆ ಹಾಕಿಸಿಕೊಂಡು ಪುನೀತ್ ರಾಜ್‌ಕುಮಾರ್ ಎಂಬ ಹೆಸರನ್ನು ಸಹ ಅಚ್ಚಾ ಹಾಕಿಸಿಕೊಂಡಿದ್ದಾರೆ ಇದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ತೋರಿಸಿ ಅವರಿಂದಲೇ ಸಹ ಅಚ್ಚೆಯನ್ನು ರಿವೀಲ್ ಮಾಡಿದ್ದಾರೆ.
ಈ ಒಂದು ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ಅಶ್ವಿನಿ ಅವರು ಭಾವುಕರಾಗಿ ಅಭಿಮಾನಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಅಶ್ವಿನಿ ಅವರಿಗೆ ಅಪ್ಪು ಅವರನ್ನು ಕಳೆದುಕೊಂಡಂತಹ ದುಃಖ ಒಂದು ಕಡೆ ಆದರೆ ಅವರ ಮೇಲೆ ಅಭಿಮಾನಿಗಳು ಇಟ್ಟಿರುವಂತಹ ಪ್ರೀತಿಯನ್ನು ನೋಡಿದರೆ ತುಂಬಾ ಸಂತೋಷವಾಗುತ್ತಿದೆ. ಅಪ್ಪು ಅವರು ಇನ್ನು ಜೀವಂತವಾಗಿದ್ದಾರೆ ಎಂದು ಅವರಿಗೆ ಅನಿಸುತ್ತಿದೆ ಅಪ್ಪು ಅವರು ಇಲ್ಲದ ನೋವನ್ನು ಅಭಿಮಾನಿಗಳನ್ನು ತುಂಬುತ್ತಿದ್ದಾರೆ ಎಂದು ಅಶ್ವಿನಿ ಅವರು ಭಾವುಕರಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪತಿಯ ಮಾರ್ಗದರ್ಶನದಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ ಪುನೀತ್ ರಾಜ್‌ಕುಮಾರ್ ಅವರು ಯಾವೆಲ್ಲ ಸಮಾಜ ಸೇವೆಗಳನ್ನು ಮಾಡುತ್ತಿದ್ದರೊ ಅವನ್ನೆಲ್ಲಾ ಮುಂದುವರಿಸಿಕೊಂಡು ಹೋಗುವಂತಹ ಉದ್ದೇಶವನ್ನು ಹೊಂದಿದ್ದಾರೆ.
ಅಷ್ಟೇ ಅಲ್ಲದೆ ಅಪ್ಪು ಅಭಿಮಾನಿಗಳು ಸಹ ಈ ಒಂದು ಸಮಾಜ ಸೇವೆಯಲ್ಲಿ ಕೈಜೋಡಿಸುತ್ತಾ ಇದ್ದಾರೆ ಅಪ್ಪು ಅವರಲ್ಲಿ ಇದ್ದಂತಹ ಸನ್ಮಾರ್ಗಗಳು ಬಿಟ್ಟು ಹೋಗಿಲ್ಲ ಅಭಿಮಾನಿಗಳ ಜೊತೆಯಲ್ಲಿ ಹಾಗೆಯೇ ದೊಡ್ಡಮನೆ ಕುಟುಂಬದಲ್ಲಿ ನಲೆಸಿರುತ್ತವೆ. ಇಂದಿಗೂ ಸಹ ಸಾಕಷ್ಟು ಜನ ಅಪ್ಪು ಅಭಿಮಾನಿಗಳು ಅಪ್ಪು ಸಮಾಧಿಯ ಬಳಿ ಹೋಗಿ ಅವರಿಗೆ ನಮನವನ್ನು ಸಲ್ಲಿಸಿ ಬರುತ್ತಿದ್ದಾರೆ ಅಷ್ಟೇ ಅಲ್ಲದೆ ಎಷ್ಟೋ ಒಳ್ಳೆಯ ಕೆಲಸಗಳು ಅಪ್ಪು ಅವರ ಸಮಾಧಿಯಿಂದಲೇ ಪ್ರಾರಂಭ ಮಾಡುತ್ತಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ಅಪ್ಪು ಅವರು ದೇವರ ಸ್ವರೂಪ ಎಂದೇ ಹೇಳಬಹುದಾಗಿದೆ ಇಷ್ಟೊಂದು ಜನರು ಅಪ್ಪು ಅವರ ಮೇಲೆ ತೋರಿಸುತ್ತಿರುವಂತಹ ಪ್ರೀತಿ ಊಹೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.