ಅಪ್ಪು ಅವರ ಲಕ್ಕಿ ಮ್ಯಾನ್ ಸಿನಿಮಾ ಎಷ್ಟು ಅದ್ಭುತವಾಗಿದೆ ಗೊತ್ತಾ.?‌ ಅಪ್ಪು ಅವರ ಕೊನೆಯ ಸಿನಿಮಾ ನೋಡಿ ಭಾವಕರಾದ ಪ್ರೇಕ್ಷಕರು.

ಅಪ್ಪು ಅವರ ಕೊನೆಯ ಸಿನಿಮ ಲಕ್ಕಿ ಮ್ಯಾನ್ ಇದೀಗ ತೆರೆಕಂಡಿದ್ದು ಅಭಿಮಾನಿಗಳು ಈ ಸಿನಿಮಾ ನೋಡಿ ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ಅವರು ನಿರ್ದೇಶನ ಮಾಡಿದ್ದು, ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಸುಂದರ್ ಕುಮಾರ್ ಅವರು ಈ ಸಿನಿಮಾವನ್ನು ಅವರು ನಿರ್ಮಾಣ ಮಾಡಿದ್ದಾರೆ. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹೀರೋ ಆಗಿ ನಟನೆಯನ್ನು ಮಾಡಿದ್ದು ನಮ್ಮ ಪುನೀತ್ ರಾಜಕುಮಾರ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಹಿಂದೆಂದೂ ಮಾಡದಂತಹ ಒಂದು ವಿಭಿನ್ನವಾದ ಅಂತಹ ಪಾತ್ರವನ್ನು ಈ ಸಿನಿಮಾದಲ್ಲಿ ನಿರ್ವಹಿಸಿದ್ದು ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಅಪ್ಪು ಅವರು ದೇವರ ಪಾತ್ರವನ್ನು ನಿರ್ವಹಿಸಿದ್ದಾರೆ.

WhatsApp Group Join Now
Telegram Group Join Now

ಒಟ್ಟಾರೆಯಾಗಿ ಈ ಒಂದು ಸಿನಿಮಾ ವಿಭಿನ್ನ ಕಥೆಯನ್ನು ಒಳಗೊಂಡಿದ್ದು ಸಿನಿಮಾವನ್ನು ನೋಡಿದಂತಹ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಜೊತೆಯಲ್ಲಿ ಡಾರ್ಲಿಂಗ್ ಕೃಷ್ಣ ಅವರು ಅಭಿನಯ ಮಾಡಲು ತುಂಬಾ ಅದೃಷ್ಟ ಮಾಡಿದ್ದರು ಎಂದು ಹೇಳಬಹುದು ಯಾಕೆಂದರೆ ಪುನೀತ್ ರಾಜಕುಮಾರ್ ಅವರು ಈಗ ನಮ್ಮೆಲ್ಲರನ್ನು ಅಗಲಿದ್ದು ಅವರ ಜೊತೆ ನಾವು ಮಾತನಾಡಲು ಆಗುವುದಿಲ್ಲ, ನಟಿಸಲು ಆಗುವುದಿಲ್ಲ ಡಾರ್ಲಿಂಗ್ ಕೃಷ್ಣ ಅವರು ಪುಣ್ಯ ಮಾಡಿದ್ದರು ಎಂದು ಹೇಳಬಹುದು. ಈಗಾಗಲೇ ಈ ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾವನ್ನು ನೋಡಿದಂತಹ ಕುಟುಂಬಸ್ಥರು ತುಂಬಾ ಭಾವಕರಾಗಿದ್ದಾರೆ. ಅಪ್ಪು ಅವರ ನಟನೆಯ ಬಗ್ಗೆ ನಾವು ಏನು ಹೇಳುವಂತಿಲ್ಲ ಅಷ್ಟರಮಟ್ಟಿಗೆ ಇವರು ಅಭಿನಯಿಸುತ್ತಾರೆ ಅಷ್ಟೇ ಅಲ್ಲದೆ ಡಾನ್ಸ್ ನಲ್ಲಿಯೂ ಸಹ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ.

ಈ ಒಂದು ಸಿನಿಮಾದಲ್ಲಿ ಅಪ್ಪು ಅವರು ಪ್ರಭುದೇವ ಅವರ ಜೊತೆ ನೃತ್ಯವನ್ನು ಮಾಡಿದ್ದು ಇದು ಎಲ್ಲರ ಗಮನ ಸೆಳೆದಿದೆ. ಇನ್ನು ಈ ಒಂದು ಸಿನಿಮಾದಲ್ಲಿ ಫೈಟಿಂಗ್ ಸಹ ಇದ್ದು ಅಪ್ಪು ಅವರು ದೇವರ ರೂಪದಲ್ಲಿಯೇ ಸಾಹಸ ಸನ್ನಿವೇಶಗಳನ್ನು ಸಹ ಎದುರಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ಹಾಡಿನಲ್ಲಿ ಪ್ರಭುದೇವ ಮತ್ತು ನಟ ಪುನೀತ್ ರಾಜಕುಮಾರ್ ರಾಜಕುಮಾರ್ ಅವರು ಜೊತೆಯಾಗಿ ಡಾನ್ಸ್ ಮಾಡಿದ್ದಾರೆ. ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆಯಲ್ಲಿ ಇದ್ದಾಗ ಎಷ್ಟು ಪ್ರೀತಿ ಮಾಡುತ್ತಿದ್ದರು ಅದಕ್ಕಿಂತ ಹೆಚ್ಚಾಗಿ ಅವರು ನಮ್ಮನ್ನು ಹಗಲಿದ ನಂತರ ಅಪ್ಪು ಮೇಲಿರುವಂತಹ ಪ್ರೀತಿ ಮತ್ತು ಗೌರವ ಹೆಚ್ಚಾಗಿದೆ.

ಪುನೀತ್ ರಾಜಕುಮಾರ್ ಅವರನ್ನು ಕರ್ನಾಟಕದ ಆರಾಧ್ಯ ದೈವ ಎಂದೇ ಹೇಳಬಹುದೇ ಈ ಸಿನಿಮಾದಲ್ಲಿ ಇವರ ನಟನೆಯು ಸಹ ಹಾಗೆ ಇದೆ. ಪುನೀತ್ ರಾಜಕುಮಾರ್ ರವರನ್ನು ಇಷ್ಟ ಪಡದೇ ಇರುವವರು ನಮ್ಮ ಕರ್ನಾಟಕದಲ್ಲಿ ಅತಿ ವಿರಳ ಅಷ್ಟರಮಟ್ಟಿಗೆ ಕರ್ನಾಟಕದ ಕನ್ನಡ ಅಭಿಮಾನಿಗಳು ಎಲ್ಲರೂ ಸಹ ಪುನೀತ್ ರಾಜಕುಮಾರ್ ಅವರನ್ನು ಇಷ್ಟಪಡುತ್ತಾರೆ. ಕರ್ನಾಟಕದಲ್ಲಿ ಲಕ್ಕಿ ಮ್ಯಾನ್ ಸಿನಿಮಾ ಗೆ ಮುಂಚೆ ಜೇಮ್ಸ್ ಸಿನಿಮಾ ರಿಲೀಸ್ ಆಗಿತ್ತು ಈ ಒಂದು ಸಿನಿಮಾಗೆ ಪ್ರೇಕ್ಷಕರು ತುಂಬಾ ಒಳ್ಳೆಯ ಪ್ರೋತ್ಸಾಹವನ್ನು ನೀಡಿ ಪುನೀತ್ ರಾಜಕುಮಾರ್ ಅವರ ಜೇಮ್ ಸಿನಿಮಾ ವನ್ನು ನೋಡಿದ್ದರು. ಅದೇ ಉತ್ಸಾಹ ಈ ಒಂದು ಲಕ್ಕಿ ಮ್ಯಾನ್ ಸಿನಿಮಾಗು ಸಹ ತೋರಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now