ಬಿಗ್ ಬಾಸ್ ಮನರಂಜನೆಯಿಂದ ಕೂಡಿರುವ ಕಾರ್ಯಕ್ರಮವಾಗಿದ್ದು ಇದನ್ನು ಮನೆ ಮಂದಿಯಲ್ಲ ಕೂತು ನೋಡುತ್ತಾರೆ. ಬಿಗ್ ಬಾಸ್ ಮನೆಗೆ ಬರುವಂತಹ ಅನೇಕ ಸ್ಪರ್ಧಿಗಳು ಕಲಾವಿದರು ಆಗಿರುತ್ತಾರೆ ಅವರು ತೆರೆಯ ಮೇಲೆ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ಜನರಿಂದ ಮೆಚ್ವುಗೆ ಪಡೆದುಕೊಂಡಿರುತ್ತಾರೆ. ಆದರೆ ಅವರ ವೈಯಕ್ತಿಕ ಬದುಕು ಯಾರಿಗೂ ಸಹ ತಿಳಿದಿರುವುದಿಲ್ಲ, ಬಿಗ್ ಬಾಸ್ ಮನೆಗೆ ಬಂದ ನಂತರ ಅವರ ಜೀವನದಲ್ಲಿ ಅಂದರೆ ಅವರ ವೈಯಕ್ತಿಕ ಜೀವನದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ಮನ ಬಿಚ್ಚಿ ಹೇಳಿಕೊಂಡು ಅವರ ಮನಸ್ಸಿನಲ್ಲಿರುವ ದುಃಖವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಹಾಗೆ ಅವರ ಜೀವನದಲ್ಲಿ ಏನೆಲ್ಲಾ ಸಾಧನೆಯನ್ನು ಮಾಡಿದ್ದಾರೆ ಎಂಬುದು ಸಹ ನಮಗೆ ತಿಳಿಯುತ್ತದೆ. ಆದರೆ ಈ ಬಾರಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿರುವಂತಹ ಕೆಲವು ಕಲಾವಿದರು ಯೋಗ್ಯರಲ್ಲ ಎಂದೇ ಹೇಳಬಹುದು.
ಬಿಗ್ ಬಾಸ್ ಜನರಿಗೆ ಯಾವುದಾದರೂ ಒಂದು ಸಂದೇಶವನ್ನು ಮೂಡಿಸುವಂತಹ ಕಾರ್ಯಕ್ರಮ ಆದರೆ ಈ ಬಾರಿಯ ಬಿಗ್ ಬಾಸ್ ಇದನ್ನು ಮರೆತಿದೆ. ಈ ಬಾರಿಯ ಬಿಗ್ ಬಾಸ್ ನಿಂದ ಜನರಿಗೆ ಯಾವುದೇ ರೀತಿಯ ಒಳ್ಳೆಯ ಸಂದೇಶಗಳು ರವಾನೆ ಆಗುತ್ತಿಲ್ಲ ಬದಲಿಗೆ ಬಿಗ್ ಬಾಸ್ ಅನ್ನು ನೋಡುಗರು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಸಾಕಷ್ಟು ಸ್ಪರ್ದಿಗಳು ಚರ್ಚೆಗೆ ಒಳಗಾಗುತ್ತಿದ್ದಾರೆ ಅದರಲ್ಲಿ ರಾಕೇಶ್ ಅಡಿಗ, ಸೋನು ಗೌಡ ಹಾಗೆ ಜಯಶ್ರೀ ಅವರು ಸದ್ಯದಲ್ಲಿ ಚರ್ಚೆ ಆಗುತ್ತಿರುವಂತಹ ಸ್ಪರ್ಧಿಗಳು. ರಾಕೇಶ್ ಅಡಿಗ ಮತ್ತು ಸೋನು ಗೌಡ ಅವರ ಮಧ್ಯೆ ಒಳಗೊಳಗೆ ಏನೋ ನಡೆಯುತ್ತಿದೆ ಎನ್ನುವಂತಹ ವಿಚಾರ ಜನರಲ್ಲಿ ಕುತೂಹಲವನ್ನು ಉಂಟು ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸೋನು ಗೌಡ ಅವರು ತಮಗೆ ಅರಿವಿಲ್ಲದೆ ಏನೇನು ಮಾತನಾಡುತ್ತಾರೆ ಹಾಗೆಯೇ ಯಾರ ಜೊತೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವಂತಹದ್ದು ಇವರಿಗೆ ತಿಳಿದಿಲ್ಲ, ಅವರ ಮಾತಿನ ಮೇಲೆ ಅವರಿಗೆ ಹಿಡಿತ ಇಲ್ಲ ಬಾಯಿಗೆ ಬಂದಂತೆ ಏನೇನೋ ಬಡಬಡಾಯಿಸುತ್ತಾರೆ. ವೀಕ್ಷಕರು ನನ್ನನ್ನು ಗಮನಿಸುತ್ತಾ ಇರುತ್ತಾರೆ ನನ್ನಿಂದ ವೀಕ್ಷಕರಿಗೆ, ನೋಡುಗರಿಗೆ ಯಾವುದಾದರೂ ಒಂದು ಉತ್ತಮವಾದಂತಹ ಸಂದೇಶವನ್ನು ನೀಡಬೇಕು ಎನ್ನುವಂತಹ ಪ್ರಜ್ಞೆಯೂ ಸಹ ಅವರಲ್ಲಿ ಇಲ್ಲ. ಸೋನು ಗೌಡ ಅವರು ತಮ್ಮ ಪಕ್ಕದಲ್ಲಿಯೇ ಇದ್ದಂತಹ ರಾಕೇಶ್ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡು ಒಂದು ಮುತ್ತನ್ನು ಕೊಡುವುದಾಗಿ ಕೇಳುತ್ತಾರೆ ಅದಕ್ಕೆ ರಾಕೇಶ್ ಅಡಿಗ ಅವರು ಯಾವುದೇ ಯೋಚನೆಯನ್ನು ಮಾಡದೆ ಮಾಡದೆ ಸೋನು ಗೌಡ ಅವರಿಗೆ ಮುತ್ತನ್ನು ಕೊಡುತ್ತಾರೆ.
ಇದನ್ನು ನೋಡಿದಂತಹ ಜಯಶ್ರೀ ಅವರು ತಮಗೂ ಸಹ ಮುತ್ತನ್ನು ಕೊಡುವುದಾಗಿ ಕೇಳುತ್ತಾರೆ ಅದಕ್ಕೆ ರಾಕೇಶ್ ಅಡಿಗ ಅವರು ಯಾವುದೇ ರೀತಿಯಲ್ಲಿ ಯೋಚನೆ ಮಾಡುವುದಿಲ್ಲ ಜಯಶ್ರೀ ಅವರಿಗೂ ಸಹ ಮುತ್ತನ್ನು ಕೊಡುತ್ತಾರೆ. ನಾವು ಮಾತನಾಡುವಾಗ ಮಾತಿನ ಮೇಲೆ ಹಿಡಿತ ಇರಬೇಕು ಹಾಗೆ ಯಾವುದೇ ಒಂದು ಸಂದರ್ಭವನ್ನು ಎದುರಿಸುವಾಗಲು ಅದನ್ನು 10 ಬಾರಿ ಯೋಚನೆ ಮಾಡಿ ನಂತರ ಅದನ್ನು ಮಾಡಬೇಕು ಆದರೆ ಈ ಬಿಗ್ ಬಾಸ್ ಮನೆಯಲ್ಲಿ ಅವರಿಗೆ ತೋಚಿದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಈ ರೀತಿಯ ವರ್ತನೆಗಳು ನೋಡುಗರಲ್ಲಿ ಬೇಸರವನ್ನು ವ್ಯಕ್ತಪಡಿಸುತ್ತಿದೆ ಸಾಕಷ್ಟು ಜನರು ಈ ವಿಚಾರಕ್ಕೆ ಬಿಗ್ ಬಾಸ್ ಅನ್ನು ನೋಡುವುದೇ ನಿಲ್ಲಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ಸ್ ಮೂಲಕ ತಿಳಿಸಿ.