ರೇಷನ್ ಕಾರ್ಡ್(Ration card) ದಾಖಲೆಯಲ್ಲಿ ಫಲಾನುಭವಿಗಳ ಹೆಸರು ಇಲ್ಲದಿದ್ದರೆ ಅಥವಾ ತಪ್ಪಾಗಿದ್ದರೆ ಸರ್ಕಾರಿ ಯೋಜನೆಗಳು ಪ್ರಯೋಜನ ಪಡೆಯಲು ಆಗುವುದಿಲ್ಲ. ಅದರಲ್ಲೂ ಗ್ಯಾರಂಟಿ ಯೋಜನೆಗಳು ಜಾರಿಯಾದ ಮೇಲೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Annabhagya & Gruhalakshmi) ಹೆಚ್ಚುವರಿ ಹಣ ಪಡೆಯಲು ರೇಷನ್ ಕಾರ್ಡ್ ನಲ್ಲಿ ಮಾಹಿತಿ ಸರಿಯಾಗಿರಬೇಕು.
ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಸಿಕೊಳ್ಳಲು ಫಲಾನುಭವಿಗಳು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಸದ್ಯಕ್ಕೆ ಸರ್ಕಾರ ಆನ್ಲೈನ್ ನಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ನೀಡಿದೆ. ಕಳೆದು ತಿಂಗಳಿನಲ್ಲಿ ಸರ್ಕಾರ ಮೂರು ಬಾರಿ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ನೀಡಿತ್ತು.
NIELT ನೇಮಕಾತಿ, ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್
ಸರ್ವರ್ ಸಮಸ್ಯೆ ತಲೆದೋರಿದ ಕಾರಣ ಮತ್ತು ಆ ಅವಧಿಯಲ್ಲಿ ಹೆಚ್ಚಿನ ರಜಾ ದಿನಗಳು ಇದ್ದ ಕಾರಣ ಮತ್ತು ಇನ್ನಿತರ ಸಮಸ್ಯೆಗಳ ಕಾರಣ ಇನ್ನು ಸಹ ತಿದ್ದುಪಡಿ ಮಾಡಿಕೊಳ್ಳಬೇಕಾದವರ ಸಂಖ್ಯೆ ಸಾಕಷ್ಟಿದೆ. ಸರ್ಕಾರಕ್ಕೆ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಕೆ ಅವಕಾಶ ನೀಡಬೇಕು ಎನ್ನುವ ಕೋರಿಕೆ ಕೇಳಿ ಬಂದ ಕಾರಣ ಮತ್ತೊಮ್ಮೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಎರಡನೇ ಹಂತದಲ್ಲಿ ಅಕ್ಟೋಬರ್ ತಿಂಗಳಲ್ಲಿ ಕೂಡ APL ಹಾಗೂ BPL ರೇಷನ್ ಕಾರ್ಡ್ ಗಳಲ್ಲಿ ಕೆಲವು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದೆ.
ಕಳೆದ ಬಾರಿ ಆದ ಸರ್ವರ್ ಒತ್ತಡ ತಪ್ಪಿಸಲು ಈ ಬಾರಿ ಜಿಲ್ಲಾವಾರು ವಿಭಾಗ ಮಾಡಿ ಅವಕಾಶ ನೀಡಲಾಗಿದೆ. ಎಲ್ಲಿ, ಹೇಗೆ ತಿದ್ದುಪಡಿ ಮಾಡಿಸಬೇಕು, ಯಾವೆಲ್ಲ ತಿದ್ದುಪಡಿ ಮಾಡಿಸಬಹುದು ಇವುಗಳ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ.
ಏನೆಲ್ಲಾ ತಿದ್ದುಪಡಿ ಮಾಡಿಸಬಹುದು:-
● ಹೆಸರು ತಿದ್ದುಪಡಿ
● ಹೊಸ ಸದಸ್ಯರ ಸೇರ್ಪಡೆ
● ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಬದಲಾವಣೆ.
ಯಾವ ದಿನಾಂಕದಂದು ಯಾವ ಜಿಲ್ಲೆಯವರಿಗೆ ಅವಕಾಶ:-
● ಅಕ್ಟೋಬರ್ 1 ರಿಂದ 13 ರವರೆಗೆ ಜಿಲ್ಲಾವಾರು ವಿಭಾಗ ಮಾಡಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ.
● ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಕ್ಟೋಬರ್ 5 ರಿಂದ 7ರವರೆಗೆ ಅವಕಾಶ ನೀಡಲಾಗಿತ್ತು, ಈಗ ಆ ಅವಧಿ ಮುಕ್ತಾಯವಾಗಿದೆ.
● ಅಕ್ಟೋಬರ್ 8 ರಿಂದ 10 ರವರೆಗೆ ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ. ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ವಿಜಯಪುರ, ಧಾರವಾಡ ಗದಗ, ಹಾಸನ, ಹಾವೇರಿ ಒಟ್ಟು 15 ಜಿಲ್ಲೆಗಳಿಗೆ ಅವಕಾಶ.
● ಮೂರನೇ ಹಂತದಲ್ಲಿ ಅಕ್ಟೋಬರ್ 11 ರಿಂದ 13 ರವರೆಗೆ ಇನ್ನುಳಿದ 14 ಜಿಲ್ಲೆಗಳಾದ ಬಳ್ಳಾರಿ, ಕಲ್ಬುರ್ಗಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ, ವಿಜಯನಗರ ಜಿಲ್ಲೆಗೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
● ಈ ಮೇಲೆ ತಿಳಿಸಿದ ದಿನಾಂಕಗಳಂದು ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಎಲ್ಲಿ ತಿದ್ದುಪಡಿ ಮಾಡಿಸಬಹುದು:-
● ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದು.
● ಮೊಬೈಲ್ ನಲ್ಲಿ ಕೂಡ ತಿದ್ದುಪಡಿ ಮಾಡಲು ಅವಕಾಶವಿದೆ. ಆದರೆ ಹೆಬ್ಬೆರಳ ಗುರುತು ನೀಡುವ ಮೂಲಕ ತಿದ್ದುಪಡಿಗೆ ಮಾಡಬೇಕಿರುವುದರಿಂದ ಬಯೋಮೆಟ್ರಿಕ್ ಡಿವೈಸ್ ಹೊಂದಿರಬೇಕಾಗುತ್ತದೆ. ಮೊಬೈಲ್ಗೆ ಬಯೋಮೆಟ್ರಿಕ್ ಡಿವೈಸ್ ಕಲೆಕ್ಷನ್ ಹೊಂದಿದ್ದರೆ ಮೊಬೈಲ್ ನಲ್ಲಿ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದು.