Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಸ್ನೇಹಿತರೆ ಇಂದು ನಮ್ಮ ರಾಜ್ಯ ಹಾಗೂ ದೇಶದ ಜನತೆಗೆ ಬಹಳ ಉಪಯೋಗವಾಗುವ ಮಾಹಿತಿಯೊಂದನ್ನು ನಿಮ್ಮ ಬಳಿ ತಂದಿದ್ದೇವೆ, ಹೌದು ಸ್ನೇಹಿತರೆ ಇಂದಿನ ಪುಟದಲ್ಲಿ ಪಡಿತರ ಚೀಟಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎಂದು ತಿಳಿಸಲಿದ್ದೇವೆ. ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಮಧ್ಯಮ ವರ್ಗದವರು ಹಾಗೂ ಕಡು ಬಡವರೇ ಇದ್ದಾರೆ. ಅದರಲ್ಲೂ ನಮ್ಮ ದೇಶದಲ್ಲಿ ಹಳ್ಳಿ ಜನತೆ ಹೆಚ್ಚು, ಸದ್ಯ ನಮ್ಮ ಭಾರತ ದೇಶದ ಜನತೆಗೆ ಪಡಿತರ ಚೀಟಿ ಒಂದು ದೊಡ್ಡ ಹಕ್ಕಾಗಿದೆ ಎಂದರೆ ತಪ್ಪಾಗುವುದಿಲ್ಲ.
ನಮ್ಮ ದೇಶದಲ್ಲಿ ಅನಕ್ಷರಸ್ಥರು ಕೂಡ ಸ್ವಲ್ಪ ಹೆಚ್ಚಾಗಿ ಇರುವುದರಿಂದ ಪಡಿತರ ಚೀಟಿಯನ್ನು ಹೇಗೆ ಅಪ್ಡೇಟ್ ಮಾಡಬೇಕೆಂದು ತಿಳಿದಿಲ್ಲ ಅದರಲ್ಲೂ ಈ ಕೆಲಸಕ್ಕಾಗಿ ಹೆಚ್ಚು ದಿನಗಳು ತಾಲೂಕು ಪಂಚಾಯಿತಿಗಳು ಹಾಗೂ ಬೆಂಗಳೂರು ದಿನವೂ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡು ಅಲ್ಲಿದಾಡುವವರೆ ಹೆಚ್ಚು. ಇಂತಹ ಜನರಿಗೆ ನಮ್ಮಿಂದ ಪುಟ್ಟ ಸಹಾಯ ಎಂದರೆ ತಪ್ಪಾಗದು ಸ್ನೇಹಿತರೆ ಬನ್ನಿ ಅಂತವರಿಗೆ ನಮ್ಮ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡಿಕೊಂಡು ಬಳಸುವುದು ತಿಳಿಸಿಕೊಡಲಿದ್ದೇವೆ.
ಇನ್ನು ಸ್ನೇಹಿತರೆ ಹೊಸದಾಗಿ ಪಡಿತರ ಚೀಟಿಯನ್ನು ಮಾಡಲು ಇಚ್ಚಿಸುವವರಿಗೆ ಅಥವಾ ತಿದ್ದುಪಡಿಯನ್ನು ಮಾಡುವ ಹೊಸದಾಗಿ ಸದಸ್ಯರನ್ನು ಸೇರಿಸುವ ಅಥವಾ ತೆಗೆಯುವ ಇಚ್ಛೆಯಿದ್ದಲ್ಲಿ ಅವರಿಗೆ ಇದೊಂದು ಸಿಹಿ ಸುದ್ಧಿ ಎಂದೇ ಹೇಳಬಹುದು. ಸರ್ಕಾರ ನಿಗದಿತ ಪಡಿಸಿರುವ ಆಪೀಸಿಯಲ್ ವೆಬ್ಸೈಟ್ ಆದ ahaara.kar.nic.in. ಇನ್ನು ಸ್ನೇಹಿತರೆ ಈ ವೆಬ್ಸೈಟ್ ಅನ್ನು ತೆರೆಯುತ್ತಿದಂತೆ ನಮಗೆ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಆಯ್ಕೆಯು ದೊರೆಯುತ್ತದೆ.
ಇನ್ನು ಈ ಆಯ್ಕೆಯನ್ನು ಆರಿಸಿಕೊಂಡ ನಂತರ ನಮಗೆ ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಗಾಗಿ ಆಯ್ಕೆ ಮಾಡಿಕೊಳ್ಳುವ ಪೇಜ್ ತೆರೆಯುತ್ತದೆ. ಅದರಲ್ಲಿ ನಮಗೆ ಬೇಕಾದ ಪಡಿತರ ಚೀಟಿಯನ್ನು ಆರಿಸಿಕೊಳ್ಳಬೇಕು. ಇನ್ನೂ ಅಲ್ಲಿ ನೀಡಿರುವ ಆಯ್ಕೆ ಮೇಲೆ ಒತ್ತಿದರೆ ನಮಗೆ ಅರ್ಜಿಯನ್ನು ಸಲ್ಲಿಸಲು ಪೇಜ್ ತೆರೆಯುತ್ತದೆ. ಅಲ್ಲಿ ಒಪ್ಪಿಗೆ ಎಂದು ಕ್ಲಿಕ್ ಮಾಡಿದರೆ ಮುಂದಿನ ಪುಟವೂ ತೆರೆದಿರುತ್ತದೆ. ಇನ್ನು ಸ್ನೇಹಿತರೆ ನಿಮ್ಮ ಪಡಿತರ ಚೀಟಿಯಲ್ಲಿ ಸದಸ್ಯರನ್ನು ಸೇರಿಸಬೇಕಾದ ಆಯ್ಕೆಯು ಇದಲ್ಲಿ ನೀವು ಕಾಣಬಹುದು.
ಸ್ನೇಹಿತರೆ ಪುಟದಲ್ಲಿ ತೆರೆದಿರುವ ಖಾಲಿ ಜಾಗವನ್ನು ಬರ್ತಿಮಾಡಬೇಕು. ನಮ್ಮ ಹೆಸರು ಅಥವಾ ಆಹಾರ ನೀಡುವ ನ್ಯಾಯಬೆಲೆ ಅಂಗಡಿ ಇದರ ಜೊತೆಗೆ ಅಪ್ಡೇಟ್ ಅನ್ನು ಮಾಡಬಹುದು. ಇನ್ನೂ ವಿಶೇಷವೆಂದರೆ ಅಂದಿನ ದಿನಾಂಕ ಹಾಗೂ ಸಮಯವನ್ನು ಆ ವೆಬ್ಸೈಟ್ನಲ್ಲಿ ನೀವು ನೋಡಬಹುದು. ತಿದ್ದುಪಡಿಗಾಗಿಯೆ ಆಯ್ಕೆಯು ದೊರೆಯುತ್ತದೆ.1 ಇನ್ನು ಅದೇ ವೆಬ್ಸೈಟ್ನ ಮೇಲೆ ಎಡ ಭಾಗದಲ್ಲಿ ಹಲವು ಆಯ್ಕೆಗಳು ಇರುತ್ತದೆ ಅದರಲ್ಲಿ ಹೊಸ ಪಡಿತರ ಚೀಟಿ ಎಂಬ ಆಯ್ಕೆಯನ್ನು ಆರಿಸಬೇಕು.
ನಂತರ ಅಲ್ಲಿ ನೀವು ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದು ಅದರಲ್ಲಿ ಕೆಲವು ವಿವರಗಳನ್ನು ತುಂಬ ಬೇಕಾಗುತ್ತದೆ ನೀವು ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಬಹುದು ಸ್ನೇಹಿತರೆ ಇದು ಪಡಿತರ ಚೀಟಿಗಾಗಿ ಈಗಾಗಲೇ ಹುಡುಕಾಟ ಹಾಗೂ ಹಲವು ಕಡೆ ತಿರುಗುತ್ತಿದ್ದರೆ ಆ ತಿರುಗಾಟವನ್ನು ಬಿಟ್ಟು ಇಂದು ನಾವು ಹೇಳಕೊಟ್ಟಿರುವ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಕೆಲವೇ ದಿನಗಳಲ್ಲಿ ನಿಮ್ಮ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ. ಇನ್ನು ಇದಾದ ನಂತರ ನಿಮ್ಮ ಪಡಿತರ ಚೀಟಿಯ ಸಂಖ್ಯೆ ಕೂಡ ಇಲ್ಲಿ ಕ್ರಿಯೇಟ್ ಆಗುತ್ತದೆ ಈ ಸಂಖ್ಯೆಯನ್ನು ನೀವು ಒಂದು ಕಡೆ ನೆನಪಿನಲ್ಲಿ ಅಥವಾ ಒಂದು ಕಡೆ ಬರೆದಿಟ್ಟುಕೊಂಡು ಟ್ರ್ಯಾಕ್ ಕೂಡ ಮಾಡಬಹುದು.