ರಾಜ್ಯದಲ್ಲಿ ನಕಲಿ BPL ಮತ್ತು AAY ಕಾರ್ಡ್ ಹೊಂದಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ತುಂಬಾ ಪರಿಣಾಮಕಾರಿಯಾಗಿ ಆಹಾರ ಇಲಾಖೆ ನಿರ್ವಹಿಸುತ್ತಿದೆ. ಯಾಕೆಂದರೆ ಇತ್ತೀಚಿಗೆ BPL ಕಾರ್ಡ್ ಹೊಂದಿರುವ ಬಡ ಕುಟುಂಬಗಳ ಸದಸ್ಯರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗುತ್ತದೆ ಅದರಲ್ಲೂ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನೀಡುತ್ತೇವೆ ಎಂದು ಹೇಳಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಬಹುತೇಕ ಯೋಜನೆಗಳಿಗೆ BPL ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.
ಮೊದಲಿನಿಂದಲೂ ಕೂಡ ನಕಲಿ ಫಲಾನುಭವಿಗಳನ್ನು ಗುರುತಿಸಿ ಅವರು ಪಡೆದಿರುವ BPL ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ನಡೆಸಿಕೊಂಡು ಬರುತ್ತಿದ್ದ ಈ ಕಾರ್ಯವನ್ನು ಈಗ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ರಾಜ್ಯದಲ್ಲಿ 3 ಲಕ್ಷ ಬಿಪಿಎಲ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇರುವ ಇದೆ ಎನ್ನುವ ಸೂಚನೆಯನ್ನು ಕೂಡ ಆಹಾರ ಇಲಾಖೆ ನೀಡಿರುವುದರಿಂದ ನಿಮ್ಮ ಕಾರ್ಡ್ ಕೂಡ ಈ ಪಟ್ಟಿಯಲ್ಲಿ ಎಂದು ಚೆಕ್ ಮಾಡಿಕೊಳ್ಳಿ.
ಈಗಾಗಲೇ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಈ ರೀತಿ BPL ಕಾರ್ಡ್ ಗಳನ್ನು ಹೊಂದಿದ್ದರೆ ಅವರ ಕಾರ್ಡುಗಳನ್ನು ವಶಪಡಿಸಿಕೊಂಡು ಅವರಿಗೆ ನೋಟಿಸ್ ಕೊಡುವ ಕಾರ್ಯವನ್ನು ಸರ್ಕಾರ ಮಾಡಿದೆ. ಮುಂದುವರೆದು ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವ ಕುಟುಂಬಗಳನ್ನು ಕೂಡ ಗುರುತಿಸಿ ಅವರು PDS ಅಡಿ BPL ಕಾರ್ಡ್ ಗೆ ಅರ್ಹರಲ್ಲದ ಕಾರಣ ಅವರು ಹೊಂದಿರುವ BPL ಗಳನ್ನು ರದ್ದು ಪಡಿಸುವುದು ಅಥವಾ ಅವುಗಳನ್ನು ಬದಲಾಯಿಸುವ ಕಾರ್ಯವನ್ನು ಕೂಡ ಸರ್ಕಾರ ಮಾಡುತ್ತಿದೆ.
ಇಲ್ಲಿಯವರೆಗೂ ಒಟ್ಟಾರೆಯಾಗಿ 16,300 ನಕಲಿ ಬಿಪಿಎಲ್ ಕಾರ್ಡ್ಗಳನ್ನು ಈ ರೀತಿ ರದ್ದು ಮಾಡಲಾಗಿದ್ದು ಇನ್ನೂ ಸಹ ಅನರ್ಹರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ನಕಲಿ ಕಾರ್ಡ್ ಗಳನ್ನು ಪತ್ತೆ ಅದನ್ನು ಕ್ಯಾನ್ಸಲ್ ಮಾಡಿ ಆ ಜಾಗದಲ್ಲಿ ಹೊಸ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುತ್ತಿರುವ ಫಲಾನುಭವಿಗಳಿಗೆ ಅವಕಾಶ ಮಾಡಿಕೊಳ್ಳಲು ಸರಕಾರ ಚಿಂತನೆ ನಡೆಸಿದೆ.
ಕರ್ನಾಟಕದಲ್ಲಿ ಈಗ 20 ಲಕ್ಷ BPL ಕಾರ್ಡ್ ಗಳಿವೆ. ಅದರಲ್ಲಿ 3 ಲಕ್ಷಕ್ಕಿಂತ ಹೆಚ್ಚು ಕುಟುಂಬಗಳು ಅನರ್ಹರಾಗಿದ್ದರು ಕೂಡ ನಕಲಿ ಮಾಹಿತಿಯನ್ನು ಕೊಟ್ಟು ಈ ರೀತಿ ಕಾರ್ಡುಗಳನ್ನು ಪಡೆದಿದ್ದಾರೆ ಎನ್ನುವ ಅನುಮಾನಗಳು ಇವೆ. ಆಧಾರ್ ಕಾರ್ಡ್ ಲಿಂಕ್ ಮಾಡುವುದು ಸೇರಿದಂತೆ ಇನ್ನಷ್ಟು ಮನದಂಡಗಳನ್ನು ಹಾಕಿ ಇವರನ್ನು ಗುರುತಿಸಲು ಕ್ರಮ ಕೈಗೊಂಡಿರುವ ಆಹಾರ ಇಲಾಖೆಯು ದಿನಕ್ಕೆ 2,000 ಕಾರ್ಡುಗಳನ್ನು ಪತ್ತೆ ಹಚ್ಚಿ ಅವುಗಳನ್ನು ಹಿಂಪಡೆಯುವ ಕಾರ್ಯಾಚರಣೆ ಮಾಡುವ ನಿರ್ಧಾರಕ್ಕೆ ಬಂದಿದೆ.
ಈ ಮೂಲಕ ಸರ್ಕಾರಕ್ಕೆ ತಿಂಗಳಿಗೆ 1,18,000 ಕೋಟಿ ಆಗಲಿರುವುದರಿಂದ ಅತ್ಯಂತ ವೇಗವಾಗಿ ಈ ಕಾರ್ಯಗಳನ್ನು ಮಾಡುತ್ತಿದೆ. ನೀವು ಸಹ ನಿಮ್ಮ BPL ಕಾರ್ಡ್ ಮಾನ್ಯವಾಗಿದೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿ ಇದ್ದರೆ ಈ ಕ್ರಮಗಳನ್ನು ಅನುಸರಿಸುವ ಮೂಲಕ ಚೆಕ್ ಮಾಡಿಕೊಳ್ಳಬಹುದು.
ಆಕ್ಟಿವ್ ಆಗಿರುವ BPL ಕಾರ್ಡ್ ಚೆಕ್ ಮಾಡುವ ವಿಧಾನ:-
● ಮೊದಲಿಗೆ ಅರ್ಜಿದಾರರು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು ಆಕ್ಟಿವ್ ಆಗಿರುವ BPL ಕಾರ್ಡ್ ಚೆಕ್ ಮಾಡುವ ಲಿಂಕ್ ಕ್ಲಿಕ್ ಮಾಡಬೇಕು.
https://mahitikanaja.karnataka.gov.in/FCS/MyAreaData?ServiceId=1043&Type=TABLE&DepartmentId=1010
● ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಪಂಚಾಯಿತಿ, ಗ್ರಾಮ ನಿಮ್ಮ ಕಾರ್ಡ್ ಪ್ರಕಾರ ಅದು AAY / BPL ಎನ್ನುವುದನ್ನು ಸೆಲೆಕ್ಟ್ ಮಾಡಿ. ನಿಮ್ಮ ಕಾರ್ಡ್ RD ಸಂಖ್ಯೆಯನ್ನು ಕೂಡ ನಮೂದಿಸಿ. ನಿಮ್ಮ ಕಾರ್ಡ್ ಆಕ್ಟಿವ್ ಆಗಿ ಇದ್ದರೆ ನಿಮ್ಮ ಹೆಸರು ಹಾಗೂ ನಿಮ್ಮ ಕುಟುಂಬದ ಸದಸ್ಯರ ಹೆಸರು ಸ್ಕ್ರೀನ್ ಮೇಲೆ ಕಾಣಿಸುತ್ತದೆ.