ಭಾರತ ಸರ್ಕಾರವು ಪ್ರತಿಯೊಬ್ಬರಿಗೂ ಕೂಡ ಅನುಕೂಲಕರವಾಗು ವಂತೆ ಅವರೆಲ್ಲರಿಗೂ ಕೂಡ ಆಹಾರ ಪದ್ಧತಿಯಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಆಗಬಾರದು ಎಂದು ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದ್ದರು ಅದೇ ರೀತಿಯಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಅಕ್ಕಿಯನ್ನು ಕೊಡುವಂತೆ ಕೇಂದ್ರ ಸರ್ಕಾರವು ಆದೇಶವನ್ನು ಹೊರಡಿಸಿದ್ದು.
ಅದೇ ರೀತಿಯಾಗಿ ಕಳೆದ ವರ್ಷದವರೆಗೂ ಕೂಡ ಬಿಪಿಎಲ್ ಕಾರ್ಡ್ ಹೊಂದಿರುವಂತಹ ವ್ಯಕ್ತಿಗಳಿಗೆ ಅಕ್ಕಿಯನ್ನು ಉಚಿತವಾಗಿ ಕೊಡುವಂತೆ ಈ ಬಾರಿ ಬಜೆಟ್ ಮಂಡನೆ ಹೊರಡಿಸುವಂತಹ ವೇಳೆಯಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಈ ವಿಷಯವನ್ನು ಹೊರಡಿಸಿದ್ದು ಈ ವಿಷಯ ಪ್ರತಿಯೊಬ್ಬರಿಗೂ ಕೂಡ ಖುಷಿಯನ್ನು ತಂದು ಕೊಡುವಂತಹ ವಿಷಯವಾಗಿದೆ ಎಂದೇ ಹೇಳಬಹುದು.
ಹೌದು ನಮ್ಮ ಕೇಂದ್ರ ಸರ್ಕಾರವು ಪ್ರತಿಯೊಬ್ಬರಿಗೂ ಕೂಡ ಅನುಕೂಲ ವಾಗುವಂತೆ ಹಾಗೂ ಈ ಯೋಜನೆಯನ್ನು ಜಾರಿಗೆ ತಂದಿದ್ದು ಮುಂದಿನ ವರ್ಷದವರೆಗೂ ಕೂಡ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿ ಯೊಬ್ಬರಿಗೂ ಕೂಡ ಉಚಿತವಾಗಿ ಅಕ್ಕಿಯನ್ನು ಕೊಡುವಂತೆ ಆದೇಶ ವನ್ನು ಹೊರಡಿಸಿದ್ದು ಪ್ರತಿಯೊಬ್ಬರಿಗೂ ಕೂಡ ಇದು ಉಪಯೋಗ ವಾಗುತ್ತದೆ ಎಂದು ಹೇಳಬಹುದು.
ಗರೀಬ್ ಕಲ್ಯಾಣ ಯೋಜನೆಯನ್ನು ಮತ್ತೆ ತರಲಾಗಿದೆ. ಈ ಬಾರಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ವತಿಯಿಂದ ವಿಶೇಷ ಆದ್ಯತೆಯನ್ನು ಕೊಟ್ಟಿದ್ದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಯ ವತಿಯಿಂದ ಮರು ಜಾರಿಗೆ ತಂದಿದೆ ಈ ಯೋಜನೆಯಡಿ ಜನವರಿ 1ನೇ ತಾರೀಖಿನಿಂದ ಮುಂದಿನ ವರ್ಷದವರೆಗೆ ದೇಶದಾದ್ಯಂತ ಬಿಪಿಎಲ್ ಹಾಗೂ ಅಂತ್ಯದಯ ಕಾರ್ಡ್ ಹೊಂದಿರುವ ಫಲಾನುಭವಿ ಗಳಿಗೆ ಉಚಿತವಾಗಿ ಅಕ್ಕಿ ಸಿಗಲಿದೆ.
ಇದಕ್ಕಾಗಿ ಎರಡು ಲಕ್ಷ ಕೋಟಿ ರೂಪಾಯಿ ಹಣವನ್ನು ಅನುದಾನವನ್ನು ಕೇಂದ್ರ ಸರ್ಕಾರ ಭರಿಸಲಿದೆ ಹಿಂದೆ ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರವು ಕೆಜಿಗೆ 30 ರೂಪಾಯಿ ಅಕ್ಕಿ ಮತ್ತು ಗೋಧಿಯನ್ನು ಖರೀದಿಸಿ ರಾಜ್ಯ ಸರ್ಕಾರಕ್ಕೆ ಕೆ.ಜಿ ಅಕ್ಕಿಗೆ ಮೂರು ರೂಪಾಯಿ ಕೆಜಿ ಅಕ್ಕಿಗೆ ಎರಡು ರೂಪಾಯಿ ನಂತೆ ಸಬ್ಸಿಡಿ ಮೂಲಕ ನೀಡುತ್ತಿತ್ತು ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್ ಟನ್ ಪಡಿತರ ಧಾನ್ಯಗಳನ್ನು ನೀಡುವ ಕೇಂದ್ರದ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಆಹಾರ ಇಲಾಖೆ ಮೂಲಕ 1,15,82,636 ಬಿಪಿಎಲ್ ಮತ್ತು 23,96,619 ಎಪಿಎಲ್ ಹಾಗೂ 10,90,818 ಅಂತ್ಯೋದಯ ಸೇರಿ ಒಟ್ಟು 1,50,70,073 ರೇಷನ್ ಕಾರ್ಡ್ ಗಳಿಗೆ ಪಡಿತರ ವಿತರಿಸುತ್ತಿತ್ತು.
ಇದರಿಂದ ಸಬ್ಸಿಡಿ ಸೇರಿ ವರ್ಷಕ್ಕೆ 350 ರಿಂದ 450 ಕೋಟಿ ರಾಜ್ಯದ ಬುಕ್ಕಸಕ್ಕೆ ಹೊರೆಯಾಗುತ್ತಿತ್ತು ಈಗ ಕೇಂದ್ರ ಸರ್ಕಾರ ಯೋಜನೆಯ ಅಡಿ ದೇಶದಾದ್ಯಂತ ಪಡಿತರ ವಿತರಣೆಗೆ ಜವಾಬ್ದಾರಿಯನ್ನು ವಹಿಸಿಕೊಂಡು ಪರಿಣಾಮ ಅಕ್ಕಿ ಮತ್ತು ಗೋಧಿಗಾಗಿ ನೂರಾರು ಕೋಟಿ ರೂಪಾಯಿ ಪಾವತಿಸುತ್ತಿದ್ದ ಸಬ್ಸಿಡಿ ಹಣವು ರಾಜ್ಯ ಸರ್ಕಾರಕ್ಕೆ ಉಳಿತಾಯವಾಗಲಿದೆ.
2022 ಮತ್ತು 2023ರಲ್ಲಿ ಬಜೆಟ್ ನಲ್ಲಿ ಯಾವುದೇ ವಿಷಯ ಘೋಷಿಸದೆ ಇದ್ದರೂ ಪಡಿತರ ವ್ಯವಸ್ಥೆಯ ಸುಧಾರಣೆಗೆ ಬಜೆಟ್ ನಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಗೆ 2,00,06,831 ಕೋಟಿ ಹಣ ಹಂಚಿಕೆ ಮಾಡಲಾಗಿದೆ. ಒಟ್ಟಾರೆಯಾಗಿ ಈ ಎಲ್ಲಾ ವಿಷಯಗಳು ಕೂಡ ಪಡಿತರ ಚೀಟಿ ಹೊಂದಿರುವವರಿಗೆ ಉಪಯೋಗವಾಗುವಂತಹ ಸಂಗತಿಗಳಾಗಿದೆ ಎಂದೇ ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.