ತಂದೆಯ ಮಾತಿಗೆ ಕಟ್ಟುಬಿದ್ದು ತಾವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿಗೆ ಕೈ ಕೊಟ್ಟ ರವಿಚಂದ್ರನ್, ಅವರು ಪ್ರೀತಿಸಿದ ಹುಡುಗಿ ಯಾರು ಗೊತ್ತಾ.?

ಒಂದು ಕಾಲದಲ್ಲಿ ರವಿಚಂದ್ರನ್ ಅವರ ಸಿನಿಮಾಗಳಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿದ್ದರು. ಅಷ್ಟರಮಟ್ಟಿಗೆ ರವಿಚಂದ್ರನ್ ಅವರ ಸಿನಿಮಾಗಳನ್ನು ಇಷ್ಟಪಟ್ಟು ನೋಡುತ್ತಿದ್ದರು. ಕನ್ನಡದ ಟಾಪ್ ನಟನಾಗಿ ಗುರುತಿಸಿಕೊಂಡಿದಂತಹ ರವಿಚಂದ್ರನ್ ಅವರ ಸಿನಿಮಾಗಳನ್ನುಗಳು ಇಂದಿಗೂ ಕೂಡ ಜೀವಂತ ಅವರ ಯಾವುದೇ ಸಿನಿಮಾಗಳು ಬಂದರು ಸಹ ಈಗಿನ ಯುವ ಜನಾಂಗವು ಸಹ ತುಂಬಾ ಇಷ್ಟ ಪಟ್ಟು ನೋಡುತ್ತಾರೆ. ನಮ್ಮ ಕನ್ನಡ ಸಿನಿಮಾರಂಗದಲ್ಲಿ ಒಂದು ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರು ನಟಿಸಿರುವಂತಹ ಎಲ್ಲಾ ಸಿನಿಮಾಗಳು ಒಂದಕ್ಕಿಂತ ಒಂದು ವಿಭಿನ್ನತೆಯಿಂದ ಕೂಡಿದೆ ನಮ್ಮ ಕನ್ನಡದಲ್ಲಿ ಕ್ರೇಜಿಸ್ಟಾರ್ ಎಂದೇ ಗುರುತಿಸಿಕೊಂಡಿರುವಂತಹ ರವಿಚಂದ್ರನ್ ಅವರು ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ಎಲ್ಲರ ಮನಸ್ಸಿನಲ್ಲಿಯೂ ಕುಳಿತಿದ್ದಾರೆ.

WhatsApp Group Join Now
Telegram Group Join Now

ರವಿಚಂದ್ರನ್ ಅವರ ತಂದೆ ನಿರ್ಮಾಪಕ ವೀರ ಸ್ವಾಮಿಯವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಹಲವು ಚಿತ್ರಗಳನ್ನು ರವಿಚಂದ್ರನ್ ಅವರು ನಿರ್ಮಿಸಿದ್ದಾರೆ. ಇವರ ಸಿನಿಮಾದ ಪ್ರತಿಯೊಂದು ಹಾಡುಗಳು ಸಹ ಸೂಪರ್ ಹಿಟ್. ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹೀರೋಯಿನ್ ಗಳನ್ನು ತುಂಬಾ ಸುಂದರವಾಗಿ ತೋರಿಸುತ್ತಿದ್ದರು ಆದ್ದರಿಂದ ರವಿಚಂದ್ರನ್ ಅವರ ಜೊತೆಯಲ್ಲಿ ಸಿನಿಮಾ ಮಾಡಲು ಸಾಕಷ್ಟು ಹೀರೋಯಿನ್ ಗಳು ಮುಗಿಬಿದ್ದು ಕಾಯುತ್ತಿದ್ದರು. ಇನ್ನು ರವಿಚಂದ್ರನ್ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರಿಗೆ 1986 ಫೆಬ್ರವರಿ 14ರಂದು ಸುಮತಿ ಎಂಬುವರನ್ನು ಮದುವೆಯಾಗುತ್ತಾರೆ ಇನ್ನು ರವಿಚಂದ್ರನ್ ದಂಪತಿಗಳಿಗೆ ಮನೋರಂಜನ್, ವಿಕ್ರಂ ಹಾಗೆ ಗೀತಾಂಜಲಿ ಎಂಬ ಮೂರು ಮಕ್ಕಳಿದ್ದಾರೆ. ರವಿಚಂದ್ರನ್ ಅವರ ತಂದೆ ಸಂಪ್ರದಾಯಸ್ಥರು, ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ ಈ ಕಾರಣದಿಂದ ರವಿಚಂದ್ರನ್ ಅವರು ತಮ್ಮ ಪ್ರೀತಿಯ ವಿಚಾರವನ್ನು ತಂದೆಯ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ.

ಹೌದು ರವಿಚಂದ್ರನ್ ಅವರು ಸಿನಿಮಾರಂಗದಲ್ಲಿ ಇದ್ದಂತಹ ಸಂದರ್ಭದಲ್ಲಿ ಒಬ್ಬರು ಹುಡುಗಿಯನ್ನು ಪ್ರೀತಿ ಮಾಡಿರುತ್ತಾರೆ ಇವರ ಮಧ್ಯೆ ಜಾತಿ ಅಡ್ಡ ಬಂದಿದ್ದರಿಂದ ಇವರು ಆ ಹುಡುಗಿಯನ್ನು ಮದುವೆಯಾಗುವುದಿಲ್ಲ. ಈ ವಿಚಾರವನ್ನು ಸ್ವತಹ ರವಿಚಂದ್ರನ್ ಅವರೇ, ಕಾರ್ಯಕ್ರಮ ಒಂದರಲ್ಲಿ ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರು ಪ್ರೀತಿಸಿದ್ದಂತಹ ಹುಡುಗಿಯ ಜಾತಿ ಬೇರೆ ಆದ್ದರಿಂದ ರವಿಚಂದ್ರನ್ ಅವರ ತಂದೆ ಈ ಮದುವೆಗೆ ಒಪ್ಪಲಿಲ್ಲ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ. ರವಿಚಂದ್ರನ್ ಅವರು ನಿರ್ಮಾಣ ಮಾಡಿರುವಂತಹ ಹಾಗೆ ನಟನೆ ಮಾಡಿರುವಂತಹ ಎಲ್ಲಾ ಸಿನಿಮಾಗಳಲ್ಲಿಯೂ ತುಂಬಾ ರೋಮ್ಯಾಂಟಿಕ್ ಆಗಿ ಮಾಡಿದ್ದಾರೆ ಹಾಗೆ ಹೀರೋಯಿನ್ ಗಳನ್ನು ತುಂಬಾ ಸುಂದರವಾಗಿ ಹಾಗೂ ಅವರ ಜೊತೆ ಸಾಕಷ್ಟು ರೋಮ್ಯಾಂಟಿಕ್ ದೃಶ್ಯಗಳನ್ನು ಸಹ ತೆಗೆದಿದ್ದಾರೆ ಆದರೆ ನಿಜ ಜೀವನದಲ್ಲಿ ಅವರು ಪ್ರೀತಿಸಿದ ಹುಡುಗಿಯನ್ನು ಒಮ್ಮೆಯೂ ಸಹ ಮುಟ್ಟಿಲ್ಲ ಎಂದು ಇವರು ಹೇಳಿದ್ದಾರೆ.

ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ ಆಕೆಗೂ ನಾನು ಬಹಳ ಇಷ್ಟವಿದ್ದೆ ನನ್ನ ಪ್ರೀತಿಯ ವಿಚಾರ ನನ್ನ ತಂದೆಯ ಬಳಿ ಹೇಳುವ ಧೈರ್ಯ ನನಗೆ ಇರಲಿಲ್ಲ, ನಮ್ಮಿಬ್ಬರ ಜಾತಿ ಅಡ್ಡ ಬಂದಿದ್ದರಿಂದ ನಾನು ನಮ್ಮ ತಂದೆ ತೋರಿಸಿದಂತಹ ಹುಡುಗಿಯನ್ನು ಮದುವೆಯಾದೆ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ. ನಾನು ಈಗ ನನ್ನ ಕುಟುಂಬದ ಜೊತೆಯಲ್ಲಿ ತುಂಬಾ ಚೆನ್ನಾಗಿ ಕಾಲ ಕಳೆಯುತ್ತಿದ್ದೇನೆ ಹಾಗೆ ಅವಳು ಸಹ ಅವಳ ಸಂಸಾರವೂ ಸಹ ತುಂಬಾ ಸುಂದರವಾಗಿದೆ ನಾನು ಅವಳ ಹೆಸರನ್ನು ಹೇಳುವುದಿಲ್ಲ ಎಂದು ಕಾರ್ಯಕ್ರಮ ಒಂದರಲ್ಲಿ ಬಹಿರಂಗವಾಗಿ ತಮ್ಮ ಪ್ರೀತಿಯ ವಿಚಾರವನ್ನು ರವಿಚಂದ್ರನವರು ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now