ಮಲ್ಲ-2 ಸಿನಿಮಾದಲ್ಲಿ ಈ ಬಾರಿ ನಾಯಕ ನಟಿಯಾಗಿ ಯಾರು ನಟಿಸಲಿದ್ದಾರೆ ಗೊತ್ತಾ.?

ರವಿಚಂದ್ರನ್ ಅವರ ಮಲ್ಲ 2 ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎನ್ನುವಂತಹ ಸಾಕಷ್ಟು ಚರ್ಚೆಗಳು ಇದೀಗ ನಡೆಯುತ್ತಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಲ್ಲ ಸಿನಿಮಾ ಕೋಟಿ ರಾಮು ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಬ್ಲಾಕ್ಬಸ್ಟರ್ ಸಿನಿಮಾ ಎಂದೇ ಹೇಳಬಹುದು. ಈ ಸಿನಿಮಾ ಎಷ್ಟರಮಟ್ಟಿಗೆ ಹಿಟ್ಟಾಗಿತ್ತು ಎನ್ನುವುದು ಹೇಳಬೇಕಿಲ್ಲ ಇಂದಿಗೂ ಸಹ ಈ ಸಿನಿಮಾದ ಹಾಡುಗಳು ಸಖತ್ ಫೇಮಸ್ ಇತ್ತೀಚಿಗೆ ನಡೆದ ಸಿನಿಮಾ ಈವೆಂಟ್ ಒಂದರಲ್ಲಿ ನಟ ರವಿಚಂದ್ರನ್ ಮಲ್ಲ 2 ಸಿನಿಮಾ ಮಾಡುವುದರ ಬಗ್ಗೆ ಸ್ವತಹ ತಾವೇ ತಿಳಿಸಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಮಾತನಾಡಿದಂತಹ ರವಿಚಂದ್ರನ್ ಅವರು ಮಾಲಾಶ್ರೀ ಅವರ ಮಗಳನ್ನು ಮಲ್ಲ 2 ಸಿನಿಮಾದಲ್ಲಿ ಹೀರೋಯಿನ್ ಆಗಿ ತೆಗೆದುಕೊಳ್ಳುತ್ತೇನೆ ಅಥವಾ ಮಲಶ್ರೀ ಅವರನ್ನೇ ಹೀರೋಯಿನ್ ಆಗಿ ತೆಗೆದುಕೊಂಡು ಸಿನಿಮಾ ಮಾಡುತ್ತೇನೆ ಎಂದು ಹಾಸ್ಯವಾಗಿ ತಿಳಿಸಿದ್ದಾರೆ.

ಇಲ್ಲವಾದರೆ ನನ್ನ ಮಗ ಹಾಗೆ ನಿನ್ನ ಮಗಳನ್ನು ಮುಂದೆ ಇಟ್ಟು ಮಲ್ಲ 2 ಸಿನಿಮಾ ಮಾಡುತ್ತೇನೆ ಎಂದು ಮಾಲಾಶ್ರೀ ಅವರ ಜೊತೆಯಲ್ಲಿ ಹೇಳಿದ್ದಾರೆ. ಇವರ ಮಲ್ಲ 2 ಸಿನಿಮಾದ ಕನಸು ನನಸಾಗಲಿ ಎಂದು ಸಾಕಷ್ಟು ಅಭಿಮಾನಿಗಳು ಶುಭಾಶಯಗಳು ಕೋರಿದ್ದಾರೆ. ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಇಂದಿಗೂ ಸಹ ಸಖತ್ ಕ್ರೇಜ್ ಇಂದ ಜನ ನೋಡುತ್ತಾರೆ. ಇವರ ಸಿನಿಮಾದಲ್ಲಿ ಹೀರೋಯಿನ್ ಗಳನ್ನು ತುಂಬಾ ಸುಂದರವಾಗಿ ತೋರಿಸುತ್ತಾರೆ ಅಷ್ಟೇ ಅಲ್ಲದೆ ಇವರ ಸಿನಿಮಾದಲ್ಲಿ ನಟಿಸಿದ ನಂತರ ಹೀರೋಯಿನ್ ಗಳಿಗೆ ಬಹು ಬೇಡಿಕೆ ಉಂಟಾಗುತ್ತದೆ ಆದ್ದರಿಂದ ಸಾಕಷ್ಟು ಜನ ಹೀರೋಯಿನ್ ಗಳು ರವಿಚಂದ್ರನ್ ಅವರ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತಿದ್ದರು. ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಕ್ಕನ್ನೇ ಬದಲಿಸಿದಂತಹ ನಟ, ನಿರ್ದೇಶಕರು, ನಿರ್ಮಾಪಕ ರವಿಚಂದ್ರನ್ ಅವರು ಎಂದು ಹೇಳಿದರೆ ತಪ್ಪಾಗಲಾರದು.

ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಪರಿಶ್ರಮವನ್ನು ಹಾಕಿದಂತಹ ನಟ ಎಂದರೆ ಅದು ನಮ್ಮ ರವಿಚಂದ್ರನ್ ಅವರು. ರವಿಚಂದ್ರನ್ ಅವರು ತಮ್ಮ ಸಿನಿಮಾಗಳಿಗಾಗಿ ಎಲ್ಲವನ್ನು ಸಹ ಕಳೆದುಕೊಂಡರು ಸಾಕಷ್ಟು ಕಾರ್ಯಕ್ರಮಗಳಲ್ಲಿ ಸ್ವತಹ ಅವರೇ ಹೇಳಿಕೊಂಡಿದ್ದಾರೆ ನನ್ನ ತಂದೆ ನನಗಾಗಿ ಸಾಕಷ್ಟು ಆಸ್ತಿಯನ್ನು ಮಾಡಿಬಿಟ್ಟಿದ್ದರು ಆದರೆ ನಾನು ಸಿನಿಮಾ ಮೇಲಿನ ಹುಚ್ಚು ಪ್ರೀತಿಯಿಂದ ಎಲ್ಲವನ್ನು ಕಳೆದುಕೊಂಡುಬಿಟ್ಟೆ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ರವಿಚಂದ್ರನ್ ಅವರ ಸಿನಿಮಾಗಳಿಗೆ ಅಷ್ಟೇನು ಬೇಡಿಕೆ ಇಲ್ಲದಿದ್ದರೂ ಸಹ ಒಂದು ಕಾಲದಲ್ಲಿ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿದ್ದರು.

ಅವರ ಪುಟ್ನಂಜ, ಮಲ್ಲ, ಹೂ, ಯುಗಪುರುಷ, ಹೀಗೆ ಹಲವಾರು ಸಿನಿಮಾಗಳು ಜನರ ಮನಸ್ಸಿನಲ್ಲಿ ಇಂದಿಗೂ ಸಹ ಉಳಿದುಕೊಂಡಿದೆ ಜನರು ಇವರ ಸಿನಿಮಾಗಳ ಮೇಲೆ ಸಕ್ಕತ್ ಕ್ರೇಜ್ ಅನ್ನು ಇಟ್ಟುಕೊಂಡಿದ್ದರು. ಕೆಲ ದಿನಗಳಿಂದ ಇವರ ಸಿನಿಮಾಗಳು ಹೆಚ್ಚಾಗಿ ಜನರಿಗೆ ರೀಚ್ ಆಗುತ್ತಾ ಇಲ್ಲದಿದ್ದರೂ ಸಹ ಅಭಿಮಾನಿಗಳು ಇವರು ಸಿನಿಮಾಗಳನ್ನು ಇಷ್ಟ ಪಡದೆ ಇದ್ದರೂ ಸಹ ಮುಂದಿನ ದಿನಗಳಲ್ಲಿ ಇವರಿಗೆ ದೊಡ್ಡ ಯಶಸ್ಸು ಸಿಮಾರಂಗದಿಂದ ಸಿಗಬೇಕು ಎನ್ನುವುದು ಎಲ್ಲಾ ಅಭಿಮಾನಿಗಳ ಆಶಯ. ನಮ್ಮ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದಂತಹ ರವಿಚಂದ್ರನ್ ಅವರ ಬದುಕಲ್ಲಿ ಒಂದು ಹೊಸ ಅಧ್ಯಾಯ ಸೃಷ್ಟಿಯಾಗಬೇಕು ಅವರ ಸಿನಿಮಾಗಳು ಮೊದಲಿನ ಹಾಗೆಯೇ ಹಿಟ್ ಸಿನಿಮ ಲಿಸ್ಟ್ ಗಳಲ್ಲಿ ಸೇರಿಕೊಳ್ಳಬೇಕು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: