ಇಂಟೆಲಿಜೆನ್ಸ್ ಆಫ್ ಇಂಡಿಯಾ (Intelligence bureau of India) ಸಂಸ್ಥೆಯಡಿ ಉದ್ಯೋಗ ಮಾಡುವುದು ಒಂದು ಹೆಮ್ಮೆ. ದೇಶದ ಸಲುವಾಗಿ ಉದ್ಯೋಗ ಮಾಡಬಹುದಾದಂತಹ ಸರ್ಕಾರಿ ಹುದ್ದೆ ಇದಾಗಿದ್ದು, ಈ ಹುದ್ದೆ ಪಡೆದುಕೊಳ್ಳಬೇಕು ಎನ್ನುವುದು ಅನೇಕರ ಕನಸು. ಇದರತ್ತ ಪ್ರಯತ್ನ ಪಡುತ್ತಿರುವವರಿಗೆ ಇದು ಸದವಕಾಶ.
ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ (Intelligence bureau od India recruitment) ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಕಟಣೆಯಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಹುದ್ದೆಗೆ ನೇಮಕವಾಗಬಹುದು.
ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನಾವು ಸಹ ಈ ಅಂಕಣದಲ್ಲಿ ಈ ಹುದ್ದೆಗಳ ಕುರಿತು ಮತ್ತು ಇದಕ್ಕಿರುವ ಮಾನದಂಡ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತು ಕೆಲವು ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಭಾರತೀಯ ಗುಪ್ತಚರ ಇಲಾಖೆ
ಹುದ್ದೆ ಹೆಸರು:-
● ಸೆಕ್ಯೂರಿಟಿ ಅಸಿಸ್ಟೆಂಟ್ / ಮೋಟಾರ್ ಟ್ರಾನ್ಸ್ಪೋರ್ಟ್ ಹುದ್ದೆಗಳು
( SA/MT)
● ಮಲ್ಟಿ ಟಾಸ್ಕಿಂಗ್ ಸ್ಟಾಪ್ (ಜನರಲ್) ಹುದ್ದೆಗಳು (MTS/Gen).
ಒಟ್ಟು ಹುದ್ದೆಗಳ ಸಂಖ್ಯೆ:- 677 ಹುದ್ದೆಗಳು.
● SA/MT – 362 ಹುದ್ದೆಗಳು
● MTS/Gen – 315 ಹುದ್ದೆಗಳು.
ವೇತನ ಶ್ರೇಣಿ:- ಮಾಸಿಕವಾಗಿ…
● SA/MT ಹುದ್ದೆಗಳಿಗೆ ರೂ.21,700 ದಿಂದ ರೂ.69,100
● MTS/Gen ಹುದ್ದೆಗಳಿಗೆ ರೂ.18,000 ದಿಂದ ರೂ.56,900
ಉದ್ಯೋಗ ಸ್ಥಳ:- ಭಾರತದಲ್ಲೆಡೆ…
ಶೈಕ್ಷಣಿಕ ವಿದ್ಯಾರ್ಹತೆ:-
● ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
● SA/MT ಹುದ್ದೆಗೆ ಲಘು ವಾಹನ ಚಾಲನ ಪರವಾನಗಿ ಹೊಂದಿರಬೇಕು.
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ
1. SA/MT ಹುದ್ದೆಗಳಿಗೆ 27 ವರ್ಷಗಳು
2. MTS/Gen ಹುದ್ದೆಗಳಿಗೆ 25 ವರ್ಷಗಳು.
ವಯೋಮಿತಿ ಸಡಿಲಿಕೆ:-
● SC/ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 05 ವರ್ಷಗಳು
● OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 03 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:-
● ಗುಪ್ತಚರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ
● ಅರ್ಜಿ ಸಲ್ಲಿಸಲು ಇರುವ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಫಾರಂನಲ್ಲಿ ಸ್ವವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
● ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
● ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿ ಆದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪತ್ರ ಪಡೆದುಕೊಳ್ಳಿ, ಇದು ಭವಿಷ್ಯದಲ್ಲಿ ನಿಮ್ಮ ಉಪಯೋಗಕ್ಕೆ ಬೇಕು.
ಅರ್ಜಿ ಶುಲ್ಕ:-
● ಅರ್ಜಿ ಸಲ್ಲಿಸಲು ಇಚ್ಛಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ರೂ. 50 ಮತ್ತು ನೇಮಕಾತಿ ಪ್ರಕ್ರಿಯೆ ಶುಲ್ಕ 450 ನಿಗದಿಪಡಿಸಲಾಗಿದೆ.
● ನೆಟ್ ಬ್ಯಾಂಕಿಂಗ್ / ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು ಹಾಗೂ ತಪ್ಪದೆ ಇ-ರಸೀದಿ ಪಡೆದು ಇಟ್ಟುಕೊಳ್ಳಬೇಕು.
ಆಯ್ಕೆ ವಿಧಾನ:-
● ಕಂಪ್ಯೂಟರ್ ಬೇಸ್ಡ್ ಪರೀಕ್ಷೆ
● ಮೋಟಾರ್ ಮೆಕಾನಿಸಂ
● ಡ್ರೈವಿಂಗ್ ಟೆಸ್ಟ್
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಪರೀಕ್ಷಾ ಕೇಂದ್ರಗಳು:-
● ಬೆಳಗಾವಿ
● ಬೆಂಗಳೂರು
● ಹುಬ್ಬಳ್ಳಿ
● ಕಲ್ಬುರ್ಗಿ
● ಮಂಗಳೂರು
● ಮೈಸೂರು
● ಶಿವಮೊಗ್ಗ
● ಉಡುಪಿ
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 14.10.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 13.11.2023
● ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ – 16.11.2023.