ಅರಣ್ಯ ಇಲಾಖೆಯಲ್ಲಿ (Forest department) ಉದ್ಯೋಗ ಮಾಡುವುದು ಬಹಳ ಸಂತೋಷ ತರುವ ವಿಷಯವಾಗಿದೆ. ಹೀಗಾಗಿ ಅನೇಕರು ಈ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಆಸೆ ಪಡುತ್ತಾರೆ. ಈ ಭೂಮಿ ಮೇಲಿರುವ ಅತ್ಯಮೂಲ್ಯ ಸಂಪನ್ಮೂಲವಾದ ಅರಣ್ಯಗಳ ರಕ್ಷಣೆಯ ಕುರಿತಾದ ಹುದ್ದೆಗಳಿಗೆ ನೇಮಕವಾಗಿ ಸರ್ಕಾರದ ಪರವಾಗಿ ಕಾರ್ಯ ನಿರ್ವಹಿಸುವುದು ಒಂದು ಹೆಮ್ಮೆಯ ವಿಷಯ.
ನೀವು ಕೂಡ ಈ ರೀತಿ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮಾಡಬೇಕು ಎನ್ನುವ ಆಸಕ್ತಿ ಹೊಂದಿದ್ದರೆ ಅಥವಾ ನಿಮಗೆ ಸರ್ಕಾರಿ ಹುದ್ದೆ ಹೊಂದಬೇಕು ಎನ್ನುವ ಇಚ್ಛೆ ಇದ್ದರೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ (kfd recruitments – 2023) ಮಾಡಲಾಗಿದೆ.
ಈ ಕುರಿತು ಇಲಾಖೆ ವತಿಯಿಂದ ಅಧಿಸೂಚನೆ ಕೂಡ ಹೊರಬಿದ್ದಿದ್ದು ಆ ನಿಬಂಧನೆಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನಾವು ಈ ಅಂಕಣದಲ್ಲಿ ಹುದ್ದೆಗಳ ಕುರಿತು ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಕರ್ನಾಟಕ ಅರಣ್ಯ ಇಲಾಖೆ
ಹುದ್ದೆ ಹೆಸರು:- ಅರಣ್ಯ ಪರಿವೀಕ್ಷಕರು.
ಒಟ್ಟಾರೆ ಹುದ್ದೆಗಳ ಸಂಖ್ಯೆ:- 310
ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ…
● ಬೆಂಗಳೂರು ವೃತ್ತದಲ್ಲಿ ಒಟ್ಟು 33 ಹುದ್ದೆಗಳು
● ಬೆಳಗಾವಿ ವೃತ್ತದಲ್ಲಿ ಒಟ್ಟು 20 ಹುದ್ದೆಗಳು
● ಬಳ್ಳಾರಿ ವೃತ್ತದಲ್ಲಿ ಒಟ್ಟು 20 ಹುದ್ದೆಗಳು
● ಚಾಮರಾಜನಗರ ವೃತ್ತದಲ್ಲಿ ಒಟ್ಟು 32 ಹುದ್ದೆಗಳು
● ಚಿಕ್ಕಮಗಳೂರು ವೃತ್ತದಲ್ಲಿ ಒಟ್ಟು 25 ಹುದ್ದೆಗಳು
● ಧಾರವಾಡ ವೃತ್ತದಲ್ಲಿ ಒಟ್ಟು 07 ಹುದ್ದೆಗಳು
● ಹಾಸನ ವೃತ್ತದಲ್ಲಿ ಒಟ್ಟು 20 ಹುದ್ದೆಗಳು
● ಕೆನರಾ ವೃತ್ತದಲ್ಲಿ ಒಟ್ಟು 32 ಹುದ್ದೆಗಳು
● ಕೊಡಗು ವೃತ್ತದಲ್ಲಿ ಒಟ್ಟು 16 ಹುದ್ದೆಗಳು
● ಕಲ್ಬುರ್ಗಿ ವೃತ್ತದಲ್ಲಿ ಒಟ್ಟು 23 ಹುದ್ದೆಗಳು
● ಮಂಗಳೂರು ವೃತ್ತದಲ್ಲಿ ಒಟ್ಟು 20 ಹುದ್ದೆಗಳು
● ಮೈಸೂರು ವೃತ್ತದಲ್ಲಿ ಒಟ್ಟು 32 ಹುದ್ದೆಗಳು
● ಶಿವಮೊಗ್ಗ ವೃತ್ತದಲ್ಲಿ ಒಟ್ಟು 30 ಹುದ್ದೆಗಳು.
ಒಂದೇ ಕುಟುಂಬದವರು ಎರಡು ಮೂರು ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾ-ಕ್, ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್.!
ವೇತನ ಶ್ರೇಣಿ:- ರೂ.18,000 ದಿಂದ ರೂ.32,600
ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದಿರುವ ಯಾವುದೇ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರೈಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು.
● OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷಗಳು.
● SC / ST, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು.
ಅರ್ಜಿ ಶುಲ್ಕ:-
● SC / ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 120ರೂ.
● OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 220ರೂ.
● ಅರ್ಜಿ ಶುಲ್ಕವನ್ನು ಅಂಚೆ ಇಲಾಖೆಯ ಇ-ಚಲನ್ ಮೂಲಕ ಪಾವತಿಸಬೇಕು.
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ.! ಈ ಯೋಜನೆಯಡಿ ಸಾಲ ಪಡೆದವರು ಬಡ್ಡಿ ಕಟ್ಟುವಂತಿಲ್ಲ.!
ಅರ್ಜಿ ಸಲ್ಲಿಸುವ ವಿಧಾನ:-
● ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ ಸೈಟ್ ಆದ aranya.gov.in ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು.
● ಅರ್ಜಿ ಫಾರಂ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಿ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಫಿಸಿಕಲ್ ಟೆಸ್ಟ್
● ಮೆಡಿಕಲ್ ಟೆಸ್ಟ್
● ಸಂದರ್ಶನ
● ದಾಖಲೆಗಳ ಪರಿಶೀಲನೆ.
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ.! ಈ ಯೋಜನೆಯಡಿ ಸಾಲ ಪಡೆದವರು ಬಡ್ಡಿ ಕಟ್ಟುವಂತಿಲ್ಲ.!
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 27.09.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 26.10.2023
● ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – 30.10.2023.