ರಾಜ್ಯದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲೊಂದು ವಿಶೇಷವಾದ ಪ್ರಕಟಣೆ ಇದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುವಂತಹ ಹುದ್ದೆಗಳು ಖಾಲಿ ಇದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಬಹುದು.
ಜಿಲ್ಲಾ ಪಂಚಾಯತ್ ಬಾಗಲಕೋಟೆ (Zilla panchayath recruitment, Bagalkot – 2023) ವತಿಯಿಂದ ಈ ಹುದ್ದೆಗಳ ಕುರಿತಾದ ಅಧಿಸೂಚನೆ ಹೊರ ಬಿದ್ದಿದ್ದು ಹುದ್ದೆಗಳ ವಿವರ, ಉದ್ಯೋಗ ಸ್ಥಳ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ವಿದ್ಯಾಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಪ್ರಮುಖ ದಿನಾಂಕಗಳು, ಸಂಪರ್ಕಿಸಬೇಕಾದ ವಿಳಾಸ ಇದರ ಕುರಿತ ವಿವರಗಳನ್ನು ಸವಿವರವಾಗಿ ವಿವರಿಸಲಾಗಿದೆ.
ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ಈ ಅಂಕಣದಲ್ಲಿ ಕೂಡ ಅಧಿಸೂಚನೆಯಲ್ಲಿರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ನೇಮಕಾತಿ ಸಂಸ್ಥೆ:- ಜಿಲ್ಲಾ ಪಂಚಾಯಿತಿ, ಬಾಗಲಕೋಟೆ.
ಹುದ್ದೆ ಹೆಸರು:- ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ.
ಒಟ್ಟು ಹುದ್ದೆಗಳ ಸಂಖ್ಯೆ:- 23
ಉದ್ಯೋಗ ಸ್ಥಳ:- ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಮೇಲಿನ ಹುದ್ದೆಗಳು ಖಾಲಿ ಇರುವ ಗ್ರಾಮ ಪಂಚಾಯಿತಿಗಳಲ್ಲಿ.
ವೇತನ ಶ್ರೇಣಿ:-
ಆರಂಭಿಕವಾಗಿ 18,000ರೂ. ಪ್ರತಿ ತಿಂಗಳ ವೇತನ ಇರುತ್ತದೆ, ನಂತರದ ದಿನಗಳಲ್ಲಿ ಹೆಚ್ಚಿಸಲಾಗುತ್ತದೆ.
ಅಕ್ಟೋಬರ್ ತಿಂಗಳಲ್ಲಿ ಕರೆಯಲಾದ ಸರ್ಕಾರಿ ಹುದ್ದೆಗಳು, 10ನೇ ತರಗತಿ ಆದವರಿಗೂ ಇದೆ ಅವಕಾಶ, ತಪ್ಪದೇ ಅರ್ಜಿ ಸಲ್ಲಿಸಿ.!
ಶೈಕ್ಷಣಿಕ ವಿದ್ಯಾರ್ಹತೆ:-
● ಬಾಗಲಕೋಟೆ ಗ್ರಾಮ ಪಂಚಾಯಿತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ PUC ಉತ್ತೀರ್ಣರಾಗಿರಬೇಕು.
● ಗ್ರಂಥಾಲಯ ವಿಜ್ಞಾನದಲ್ಲಿ ಪ್ರಮಾಣಿಕೃತ ಕೋರ್ಸ್ ನ್ನು ಪೂರ್ತಿಗೊಳಿಸಿ ಸರ್ಟಿಫಿಕೇಟ್ ಪಡೆದಿರಬೇಕು.
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು.
ವಯೋಮಿತಿ ಸಡಿಲಿಕೆ:-
● SC / ST ಅಭ್ಯರ್ಥಿಗಳಿಗೆ 05 ವರ್ಷಗಳು
● OBC ಅಭ್ಯರ್ಥಿಗಳಿಗೆ 03 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಅಭ್ಯರ್ಥಿಗಳು www.bagalkot.nic.in ವೆಬ್ ಸೈಟ್ ಗೆ ಭೇಟಿ ನೀಡಬೇಕು.
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಇರುತ್ತದೆ, ಅದನ್ನು ಕ್ಲಿಕ್ ಮಾಡಿ ಸ್ವ ವಿವರಗಳನ್ನು ತುಂಬಿಸಬೇಕು.
● ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ನಿಮ್ಮ ವರ್ಗದ ಅನುಸಾರ ಅರ್ಜಿ ಶುಲ್ಕ ಪಾವತಿಸಿರುವ ವಿವರಗಳನ್ನು ನಮೂದಿಸಿ.
● ಭವಿಷ್ಯದ ಬಳಕೆಗಾಗಿ ಅರ್ಜಿ ಸಂಖ್ಯೆ ಮತ್ತು ವಿನಂತಿ ಸಂಖ್ಯೆಯನ್ನು ದಾಖಲಿಸಿ ಇಟ್ಟುಕೊಳ್ಳಿ.
ಅರ್ಜಿ ಶುಲ್ಕ:-
● ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು.
● ಚೀಫ್ ಎಕ್ಸಿಕ್ಯೂಟಿವ್ ಆಫೀಸರ್, ಜಿಲ್ಲಾ ಪಂಚಾಯಿತಿ ಬಾಗಲಕೋಟೆ ಇವರ ಹೆಸರಿನಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ಸಂಖ್ಯೆ 11029261255 SBIN000B12, ಶುಲ್ಕ ಪಾವತಿ ಮಾಡಿ ಚಲನ್ ಪ್ರಿಂಟ್ ತೆಗೆದುಕೊಂಡು ವಿವರವನ್ನು ಭರ್ತಿ ಮಾಡಬೇಕು.
● ಅಂಗವಿಕಲ ಅಭ್ಯರ್ಥಿಗಳಿಗೆ 100ರೂ.
● SC / ST ಅಭ್ಯರ್ಥಿಗಳಿಗೆ 200ರೂ.
● OBC ಅಭ್ಯರ್ಥಿಗಳಿಗೆ 300ರೂ.
● ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500ರೂ.
ರಾಜ್ಯದ ಈ 7 ಜಿಲ್ಲೆಯವರಿಗೆ ಮನೆ ಕಟ್ಟಲು ಸರ್ಕಾರದ ವತಿಯಿಂದ ಉಚಿತ ಸೈಟ್ ವಿತರಣೆ.!
ಆಯ್ಕೆ ವಿಧಾನ:-
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ತಯಾರಿಸಿ, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 26.09.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 19.10.2023
● ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – 19.10.2023.