ಆಸ್ತಿ ಹಕ್ಕು ಬದಲಾವಣೆ ಮಾಡುವಾಗ ಅಥವಾ ವರ್ಗಾವಣೆ ಮಾಡುವಾಗ ರಿಜಿಸ್ಟರ್ ತನಕ ಬಂದರೆ ಕೆಲಸ ಮುಗಿಯಿತು ಎಂದುಕೊಂಡಿರುತ್ತಾರೆ. ಆದರೆ ರಿಜಿಸ್ಟರ್ ಆದರೆ ಸಾಲದು ನೋಂದಣಿ ಆದ ಬಳಿಕ ಮಾಡಲೇ ಬೇಕಾದ ಮತ್ತೊಂದು ಮುಖ್ಯವಾದ ಕೆಲಸ ಇದೆ. ಆಸ್ತಿ ವರ್ಗಾವಣೆ ಹಾಗೂ ಹಕ್ಕು ಬದಲಾವಣೆ ಕೊನೆ ಹಂತದಲ್ಲಿ ಜೆ ಫಾರಂ ತಪ್ಪದೆ ಕಂಪ್ಲೀಟ್ ಮಾಡಬೇಕು.
form 12 ಮತ್ತು form 21 ಮೂಲಕ ಇದನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದರೆ ಗ್ರಾಮ ಲೆಕ್ಕಾಧಿಕಾರಿಗಳು ಯಾವುದೇ ಆಸ್ತಿ ಹಕ್ಕಿನ ಬದಲಾವಣೆ ಅಥವಾ ವರ್ಗಾವಣೆ ಆದ ಸಮಯದಲ್ಲಿ ರಿಜಿಸ್ಟರ್ ಆದ ನಂತರ 30 ದಿನಗಳ ಕಾಲಾವಕಾಶ ಕೊಟ್ಟು ಆಸ್ತಿ ಆಸಕ್ತದಿಂದ ತಕರಾರು ಅರ್ಜಿ ಸಲ್ಲಿಸುವುದಿದ್ದರೆ ಆಕ್ಷೇಪಣೆಗಾಗಿ ನೋಟಿಸ್ ಕಳುಹಿಸುತ್ತಾರೆ.
ಇನ್ಮುಂದೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಪಡೆಯಲು e-KYC ಕಡ್ಡಾಯ.! ನಿಮ್ಮ ಖಾತೆಗೆ e-KYC ಆಗಿದಿಯೋ ಇಲ್ಲವೋ ಎನ್ನುವುದನ್ನು ಈ ರೀತಿ ಚೆಕ್ ಮಾಡಿ.!
30 ದಿನಗಳಾದ ನಂತರ ಯಾರಿಂದಲೂ ಆಕ್ಷೇಪಣ ಪತ್ರ ಸಲ್ಲಿಕೆ ಆಗದೆ ಇದ್ದಲ್ಲಿ ಆಸ್ತಿ ಮಾರುವವರು ಮತ್ತು ಸದರಿ ಆಸ್ತಿ ಕೊಳ್ಳುವವರಿಂದ form Jಗೆ ಸಹಿ ಮಾಡಿಸಿಕೊಂಡು ಹೋಗುತ್ತಾರೆ. 15 ದಿನಗಳಾದ ನಂತರ ಹಕ್ಕು ಬದಲಾವಣೆಗೆ ಆದೇಶಿಸಬಹುದು ಇಷ್ಟೆಲ್ಲ ಆದ ಬಳಿಕ 45 ದಿನಗಳು ಆದಮೇಲೆ ಜಮೀನು ಖರೀದಿ ಮಾಡಿದ ವ್ಯಕ್ತಿ ಹೆಸರಿನಲ್ಲಿ ಜಮೀನಿನ ಪಹಣಿ ಪತ್ರ ಬರುತ್ತದೆ.
ಜೆ ಫಾರ್ಮ್ ನಲ್ಲಿ ಬರುವ ನಮೂನೆ 12 ಹಾಗೂ ನಮೂನೆ 21 ರ ಬಗ್ಗೆ ಹೇಳುವುದಾದರೆ ನಮೂನೆ 12 ಎನ್ನುವುದು ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರಚಾರಪಡಿಸುವುದು ಇದರ ಅವಧಿ 15 ದಿನಗಳಾಗಿರುತ್ತದೆ. ನಮೂನೆ .21 ಎಂದರೆ ಇದು ಜಮೀನಿಗೆ ಸಂಬಂಧಪಟ್ಟ ಆಸಕ್ತರಿಗೆ ನೋಟಿಸ್ ಕಳುಹಿಸುವುದು, ಇದರ ಅವಧಿ 30 ದಿನಗಳು ಇರುತ್ತದೆ.
ಹೊಸ ಲೇಬರ್ ಕಾರ್ಡ್ ಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ ಸರ್ಕಾರದ ಈ ಸವಲತ್ತು ಉಚಿತವಾಗಿ ಪಡೆಯಿರಿ.!
ಒಂದು ವೇಳೆ 30 ದಿನಗಳ ಒಳಗೆ ಯಾರಾದರೂ ಆಸ್ತಿಗೆ ಸಂಬಂಧಿಸಿದ ಹಾಗೆ ಆಸಕ್ತರು ತಕರಾರು ಅರ್ಜಿ ಸಲ್ಲಿಸಿದ್ದೆ ಆದರೆ ಸರ್ಕಾರ ರೂಪಿಸುವ ನಿಯಮಗಳನ್ನು ಮೀರಿ ಆಸ್ತಿ ರಿಜಿಸ್ಟರ್ ಆಗಿದ್ದರೆ ವಿವದಾತ್ಮಕ ಪ್ರಕರಣಗಳ ಪಟ್ಟಿಗೆ ಇದನ್ನು ಸೇರಿಸಲಾಗುತ್ತದೆ. ಈ ರೀತಿ ಸ್ವೀಕರಿಸಿದ ಎಲ್ಲಾ ಪ್ರಕರಣಗಳನ್ನು 30 ದಿನಗಳ ಒಳಗಡೆ ಆ ವ್ಯಾಪ್ತಿಗೆ ಒಳಪಡುವ ತಹಶೀಲ್ದಾರರ ಸಮ್ಮುಖದಲ್ಲಿ ತಹಶೀಲ್ದಾರ್ ಕೋರ್ಟ್ಗಳಲ್ಲಿ ಇತ್ಯರ್ಥಪಡಿಸಲು ವಿಲೇವಾರಿ ಮಾಡಲಾಗುತ್ತದೆ.
ತಹಶೀಲ್ದಾರ್ ನೇತೃತ್ವ ದಲ್ಲಿ ನಡೆದ ವಿಚಾರಣೆಯಲ್ಲಿ ಇದು ಬಗೆಹರಿಯದೆ ಹೋದರೆ ಅದನ್ನು ಅವರ ಸ್ಥಳೀಯ ಕೋರ್ಟಿಗೆ ವರ್ಗಾಯಿಸಬಹುದು. ಆಸ್ತಿ ಖರೀದೀ ನೋಂದಣಿ ಆದ ನಂತರದ 45 ದಿನಗಳು ಬಹಳ ಪ್ರಮುಖವಾದ ಸಮಯವಾಗಿರುತ್ತದೆ.
ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ 5 ಹೊಸ ರೂಲ್ಸ್ ಜಾರಿ.!
ಈ ಸಮಯದಲ್ಲಿ ಯಾರಿಂದಲೂ ತಕರಾರು ಅಜ್ಜಿಗಳು ಬರದೇ ಇದ್ದರೆ, ನ್ಯಾಯಾಲಯಃಗಳಿಂದ ತಡೆ ಆಗದೆ ಬರದೆ ಇದ್ದರೆ ಮುಖ್ಯವಾಗಿ ನೀವು ಖರೀದಿಸುವ ಜಮೀನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನು ಆಗಿರಬಾರದೇ ಇದ್ದರೇ ಭೂ ಸುಧಾರಣೆ ಶಾಸನದ ಉಲ್ಲಂಘನೆಯಾಗಿರಬಾರದು, ಭೂ ಮಂಜೂರಾತಿ ನಿಯಮಗಳ ಉಲ್ಲಂಘನೆಯು ಆಗಿರಬಾರದಿದ್ದರೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಅರ್ಥ.
ರೈತರು ಬಹಳ ಕಷ್ಟಪಟ್ಟು ಹಣ ಕೂಡಿಟ್ಟು ಜಮೀನುಗಳನ್ನು ಕೊಂಡುಕೊಳ್ಳುತ್ತಾರೆ ಅಥವಾ ಸಾಲ ಮಾಡಿಕೊಂಡು ಕೊಳ್ಳುತ್ತಾರೆ ಇಂತಹ ಸಮಯದಲ್ಲಿ ಯಾರಿಂದಲೂ ಮೋ’ಸ ಹೋಗಬಾರದು ಎನ್ನುವುದಷ್ಟೇ ನಮ್ಮ ಅಂಕಣದ ಆಶಯ ಅದಕ್ಕಾಗಿ ರಿಜಿಸ್ಟರ್ ಸಂದರ್ಭದಲ್ಲಿ ನಡೆಯುವ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇವೆ ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.