ರಾಜ್ಯದಲ್ಲಿ ಈಗ ಮುಂಗಾರು ಬಿತ್ತನೆ ಸಮಯ ಆರಂಭ ಆಗಿದೆ. ಈ ಸಮಯದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇವುಗಳನ್ನು ಖರೀದಿಸುವುದಕ್ಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಕಳೆದ ವರ್ಷ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರು ಅತಿವೃಷ್ಟಿಯಿಂದ ಸಮಸ್ಯೆ ಅನುಭವಿಸಿದ್ದರು. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರು ಬೆಳೆದ ತೊಗರಿ ಬೆಳೆ ನೆಟಿ ರೋಗಕ್ಕೆ ತುತ್ತಾಗಿತ್ತು.
ನಂತರ ಸರ್ಕಾರ ಅವರಿಗೆ ಬೆಳೆ ಹಾನಿ ಸಹಾಯಧನ ನೀಡುವುದಾಗಿ ಘೋಷಿಸಿತ್ತು ಮತ್ತು ರೈತರು ಅದಕ್ಕೆ ಸಂಬಂಧಪಟ್ಟ ಪೂರಕ ದಾಖಲೆ ಜೊತೆ ಈ ಬೆಳೆ ಹಾನಿ ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈಗ ಬೀದರ್ ಜಿಲ್ಲೆಯ ರೈತರಿಗೆ ಇನ್ನು ಮೂರು ದಿನಗಳಲ್ಲಿ ಈ ಪರಿಹಾರ ಧನ ತಲುಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭರವಸೆ ಕೊಟ್ಟಿದ್ದಾರೆ.
ಬೀದರ್ ಜಿಲ್ಲಾ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಮಾತನಾಡಿದ ಸಚಿವರು ಬೀದರ್ ಜಿಲ್ಲೆಯಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ 5577 ಹೆಕ್ಟೇರ್ ಕೃಷಿ ಬೆಳೆ ಹಾಗೂ 1666 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ. ಆ ರೈತರಿಗೆ 7.85 ಕೋಟಿ ಹಣ ಬೆಳೆ ಪರಿಹಾರ ಧನವಾಗಿ ಬಿಡುಗಡೆ ಆಗಿದೆ. ಹಾಗೆಯೇ 14,494 ಹೆಕ್ಟರ್ ತೊಗರಿ ಬೆಳೆಗೆ ನೆಟೆರೋಗ ಬಿದ್ದಿದ್ದ ಕಾರಣ ಆ ರೈತರಿಗೆ ಎಕರೆಗೆ 10,000 ಲೆಕ್ಕದಲ್ಲಿ 14.49 ಕೋಟಿ ಹಣ ಮಂಜೂರಾಗಿದೆ.
ಶೀಘ್ರದಲ್ಲೇ ಈ ಹಣವು ಬೀದರ್ ಜಿಲ್ಲೆಯ ರೈತರ ಖಾತೆಗಳಿಗೆ ವರ್ಗಾವಣೆ ಆಗಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸೂಚಿಸಿದ್ದಾರೆ. ಇದರೊಂದಿಗೆ ಬೀದರ್ ಜಿಲ್ಲೆಯಲ್ಲಿ ಸಾಲ ಭಾದೆಯಿಂದ ಆ.ತ್ಮಹ.ತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಧನ ನೀಡಲು ವಿಳಂಬ ಮಾಡದಿರಲು ತಿಳಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಕಳೆದ ವರ್ಷ 19 ಜನ ರೈತರು ಸಾಲಬಾಧೆಯಿಂದ ಆ.ತ್ಮಹ.ತ್ಯೆ ಮಾಡಿಕೊಂಡಿದ್ದರು.
ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನ ಹಾಗೂ ರೈತನ ಪತ್ನಿಗೆ ಪ್ರತಿ ತಿಂಗಳು 3000ರೂ. ಮಾಸಾಶನವಾಗಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಮತ್ತು ಇದನ್ನು ರೈತರ ಕುಟುಂಬಕ್ಕೆ ತಲುಪಿಸುವಲ್ಲಿ ಜಿಲ್ಲಾಧಿಕಾರಿಗಳು ಮುತುವರ್ಜಿ ಮಾಡಬೇಕು ಎಂದು ಹೇಳಿದರು. ನೀವು ಬೀದರ್ ಜಿಲ್ಲೆಯ ರೈತ ರಾಗಿದ್ದರೆ ಬೆಳೆ ಪರಿಹಾರ ಧನ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎಂದು ಮೊಬೈಲ್ ಅಲಿಯೇ ಚೆಕ್ ಮಾಡಬಹುದು.
ಬೆಳೆ ಹಾನಿ ಪರಿಹಾರ ಧನ ಪಡೆಯುವ ರೈತರ ಲಿಸ್ಟ್ ಅಲ್ಲಿ ಇದ್ದೀರಾ ಎಂದು ಚೆಕ್ ಮಾಡುವ ವಿಧಾನ :-
● ಮೊದಲಿಗೆ ಮೊಬೈಲ್ ಅಲ್ಲಿ https://landrecords.karnataka.gov.in/parihara
ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
● ಪರಿಹಾರ ಹಣ ಸಂದಾಯ ವರದಿ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರ ಆಧಾರ್ ಸಂಖ್ಯೆಯನ್ನು ಫಿಲ್ ಮಾಡಬೇಕು.
● ಯಾವ ವಿಧದ ಪರಿಹಾರ ಎನ್ನುವಲ್ಲಿ ಫ್ಲಡ್ ಎಂದು ಸೆಲೆಕ್ಟ್ ಮಾಡಿಕೊಂಡು ವರ್ಷದ ಕಾಲಮ್ ಅಲ್ಲಿ 2022-23 ಆಯ್ಕೆ ಮಾಡಬೇಕು.
● ಬಳಿಕ ಅಲ್ಲಿ ಬರುವ ಕ್ಯಾಪ್ಚ ಕೊಡ್ ಎಂಟ್ರಿ ಮಾಡಿ ಸಬ್ಮಿಟ್ ಕೊಟ್ಟರೆ ನಿಮ್ಮ ಖಾತೆಗೆ ಎಷ್ಟು ಪರಿಹಾರ ಹಣ ಜಮೆ ಆಗಿದೆ, ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ, ಎಷ್ಟು ಎಕರೆಗೆ, ಯಾವ ಸರ್ವೇ ನಂಬರ್ ಜಮೀನಿಗೆ ಜಮೆ ಆಗಿದೆ ಎಂದು ಎಲ್ಲಾ ವಿವರ ಕೂಡ ಬರುತ್ತದೆ.