ಬಾಡಿಗೆದಾರರು 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಉಚಿತ ವಿದ್ಯುತ್ ಬಗ್ಗೆ ಬಾಡಿಗೆದಾರರಿಗಿರುವ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ ನೋಡಿ.!

 

ಸದ್ಯಕ್ಕಿಗ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸ್ವಂತ ಮನೆ ಹೊಂದಿರುವವರು ಮಾತ್ರವಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವವರು ಕೂಡ ಈ ಯೋಜನೆಯನ್ನು ತಲುಪಿಸುವ ಉದ್ದೇಶ ಹೊಂದಿರುವುದಿಲ್ಲ ಎಲ್ಲರನ್ನೂ ಒಳಗೊಂಡು ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ.

ಸ್ವಂತ ಮನೆಗಳಲ್ಲಿ ವಾಸ ಮಾಡುವವರು ಹಾಗೂ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಆನ್ಲೈನ್ ಅಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಮೊಬೈಲ್ ಕಂಪ್ಯೂಟರ್ ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿದ್ಯುತ್ ಬಿಲ್ ಮತ್ತು ಆಧಾರ್ ಕಾರ್ಡ್ ದಾಖಲೆಗಳನ್ನು ಕೊಟ್ಟು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಆಫ್ಲೈನ್ ಅಲ್ಲಿ ಗ್ರಾಮ ಪಂಚಾಯಿತಿ, ವಿದ್ಯುತ್ ಕಛೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಆದರೂ ಕೂಡ ಯೋಜನೆ ಕುರಿತು ಸಾಕಷ್ಟು ಅನೇಕ ಗೊಂದಲಗಳಿವೆ. ಒಂದು ವೇಳೆ ಬಾಡಿಗೆದಾರರು ದಾಖಲೆಯಾಗಿ ಕರಾರು ಪತ್ರವನ್ನು ಸಲ್ಲಿಸಬೇಕಾದಲ್ಲಿ ಯಾವ ರೀತಿ ಸಲ್ಲಿಸಬೇಕು, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ, ಒಂದು ವೇಳೆ ವಿದ್ಯುತ್ ಬಿಲ್ ಮನೆಯ ಹಿರಿಯರ ಹೆಸರಿನಲ್ಲಿ ಬರುತ್ತಿದ್ದು ಅವರು ಮೃತಪಟ್ಟಿದ್ದಲ್ಲಿ ನಿಮ್ಮ ಹೆಸರಿಗೆ ಬರುವಂತೆ ಮಾಡಿಕೊಳ್ಳುವುದು ಹೇಗೆ ಇನ್ನಿತರ ಅನೇಕ ಗೊಂದಲಗಳಿಗೆ ಅವುಗಳ ಬಗ್ಗೆ ಪರಿಹಾರ ಸೂಚಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ನಿಮ್ಮ ಮನೆಯ ವಿದ್ಯುತ್ ಬಿಲ್ ಅಲ್ಲಿ ಹೆಸರು ಬದಲಾಯಿಸಬೇಕು ಎಂದರೆ ಮೊದಲು ನೀವು ಮನೆಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯಿತಿಗೆ ಹೋಗಿ NOC ಪಡೆದು, ಮನೆ ಕಂದಾಯ ಕಟ್ಟಿರುವ ರಿಸಿಪ್ಟ್ ಜೊತೆ ರೂ.200 ಬಾಂಡ್ ಪಡೆದು ಅದರಲ್ಲಿ ಮೊದಲ ಪಾರ್ಟಿ ಮತ್ತು ಎರಡನೇ ಪಾರ್ಟಿ ಯಾರೆಂದು ತಿಳಿಸಿ ಅದನ್ನು ನಿಮ್ಮ ಗ್ರಾಮ ಪಂಚಾಯಿತಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಇಲಾಖೆ ಕಛೇರಿಗೆ ಅರ್ಜಿ ಸಲ್ಲಿಸಿ ಡೆಪಾಸಿಟ್ ಕಟ್ಟಬೇಕು ನಂತರ ಅಧಿಕಾರಿಗಳು ಬಂದು ಅದನ್ನು ಪರಿಶೀಲನೆ ಮಾಡುತ್ತಾರೆ. ನಿಮ್ಮ ಅರ್ಜಿ ಅನುಮೋದನೆಯಾದರೆ ಡೆಪಾಸಿಟ್ ಕ್ಯಾನ್ಸಲ್ ಮಾಡಿ 35 ರಿಂದ 40 ದಿನಗಳ ಒಳಗೆ ನಿಮ್ಮ ಹೆಸರಿಗೆ ವಿದ್ಯುತ್ ಬಿಲ್ ಬರುತ್ತದೆ.

● ಗೃಹಜ್ಯೋತಿ ಯೋಜನೆಗೆ ಇರುವ ಲಿಂಕ್ ಬಳಸಿ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ, ಈಗಾಗಲೇ ನೀವು ಲಾಗಿನ್ ಐಡಿ ಪಾಸ್ವರ್ಡ್ ಹೊಂದಿದ್ದರೆ ಲಾಗಿನ್ ಆಗಬಹುದು. ಇಲ್ಲವಾದಲ್ಲಿ ಲಾಗಿನ್ ಐಡಿ ಕ್ರಿಯೇಟ್ ಮಾಡಿ ಪಾಸ್ವರ್ಡ್ ಪಡೆದು ಲಾಗ್ ಇನ್ ಆಗಿ.
● ನಂತರ ಹಂತಗಳಲ್ಲಿ ನಿಮ್ಮ ಮನೆಗೆ ಯಾವ ವಿದ್ಯುತ್ ಕಂಪನಿಯಿಂದ ವಿದ್ಯುತ್ ಸರಬರಾಜು ಆಗುತ್ತಿದೆ ಎನ್ನುವುದರ ಬಗ್ಗೆ ಸರ್ಚ್ ಮಾಡಿ ಆ ಕಂಪನಿಯ ಹೋಂ ಪೇಜ್ ಗೆ ಹೋಗಬೇಕು.

● ಗೃಹಜ್ಯೋತಿ ಯೋಜನೆಗೆ ಅರ್ಜಿ ಫಾರಂ ಸಿಗುತ್ತದೆ ಅದಕ್ಕೆ ಕ್ಲಿಕ್ ಮಾಡಿದಾಗ ಆಗ ಕರ್ನಾಟಕ ಸರ್ಕಾರ ವಿದ್ಯುತ್ ಇಲಾಖೆಯ ಅರ್ಜಿ ಫಾರಂ ಸಿಗುತ್ತದೆ. ಅದರಲ್ಲಿ ಮೊದಲಿಗೆ ನಿಮ್ಮ ವಿದ್ಯುತ್ ಬಿಲ್ ಅಲ್ಲಿ ಇರುವ ಕಸ್ಟಮರ್ ಐಡಿ ಸಂಖ್ಯೆ ಕೇಳಲಾಗುತ್ತದೆ, ಅದನ್ನು ಫಿಲ್ ಮಾಡಿದರೆ ಆಟೋಮೆಟಿಕ್ ಆಗಿ ಮಾಲೀಕರ ಹೆಸರು ಮತ್ತು ವಿಳಾಸ ಮತ್ತು ಇತರ ವಿವರಗಳು ಫಿಲ್ ಆಗುತ್ತವೆ.

● ನಂತರದ ಆಪ್ಷನ್ ಅಲ್ಲಿ ನೀವು ಬಾಡಿಗೆದಾರರ ಅಥವಾ ಮಾಲೀಕರ ಎನ್ನುವ ಆಯ್ಕೆ ಇರುತ್ತದೆ ಅದರಲ್ಲಿ ಬಾಡಿಗೆದಾರ ಎಂದು ಆಯ್ಕೆ ಮಾಡಿ.
● ನಿಮ್ಮ ಆಧಾರ್ ಸಂಖ್ಯೆ ನಮೂದಿಸಿದರೆ ನಿಮ್ಮ ಹೆಸರು ವಿಳಾಸ ಫಿಲ್ ಆಗುತ್ತದೆ. ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಿ.

● ಪೇಜ್ ಕೆಳಗಡೆ ಒಂದು ಕ್ಯಾಪ್ಚಾ ಕೋಡ್ ಇರುತ್ತದೆ ಅದನ್ನು ಎಂಟ್ರಿ ಮಾಡಿದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ, ಅದು ಆದಮೇಲೆ ವಿದ್ಯುತ್ ಇಲಾಖೆ ಒಂದು ಘೋಷಣೆ ಬರುತ್ತದೆ ಅದನ್ನು ಐ ಅಗ್ರೀ ಎಂದು ಕ್ಲಿಕ್ ಮಾಡಿ ಸಬ್ಮಿಟ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಕಂಪ್ಲೀಟ್ ಆಗುತ್ತದೆ.
● ಸದ್ಯಕ್ಕೆ ಯಾವುದೇ ಬಾಡಿಗೆ ಕರಾರು ಪತ್ರವನ್ನು ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕೇಳುತ್ತಿಲ್ಲ ಮುಂದಿನ ದಿನಗಳಲ್ಲಿ ಕೇಳುವ ಆಪ್ಷನ್ ಬಂದರೆ ನಿಮ್ಮ ಕರಾರು ಪತ್ರವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

Leave a Comment

%d bloggers like this: