ನಿಮ್ಮ ಜಮೀನು ಬೇರೆಯವರ ಹೆಸರಿನಲ್ಲಿದೆಯೇ.? ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಗುತ್ತಿಲ್ಲವೇ.? ಎಲ್ಲದಕ್ಕೂ ಪರಿಹಾರ ಇಲ್ಲಿದೆ ನೋಡಿ.

ರಾಜ ಹಾಗೂ ಕೇಂದ್ರ ಸರ್ಕಾರಗಳು ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ಮತ್ತು ರೈತನ ಸಮಸ್ಯೆಗಳನ್ನು ಪರಿಗಂಡು ಅವನಿಗೆ ಸಹಾಯ ಮಾಡುವ ಸಲುವಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 6,000 ಹಾಗೂ ರಾಜ್ಯ ಸರ್ಕಾರದ 4000 ಗಳು ನೇರವಾಗಿ ರೈತನ ಖಾತೆಗೆ ಸೇರುತ್ತಿದೆ.

WhatsApp Group Join Now
Telegram Group Join Now

ಅದರೊಂದಿಗೆ ಗಂಗಾ ಕಲ್ಯಾಣ ಯೋಜನೆ, ಉಚಿತ ಬೋರ್ವೆಲ್ ಕೊರೆಸುವುದು ಇನ್ನೂ ಮುಂತಾದ ಅನೇಕ ಯೋಜನೆಗಳನ್ನು ಭೂಮಿ ಹೊಂದಿರುವ ರೈತರಿಗೆ ಉಚಿತವಾಗಿ ನೀಡುತ್ತಿದೆ ಮತ್ತು ಬೆಳೆ ಸಾಲ, ಬೆಳೆ ಸಾಲ ಮನ್ನಾ, ಕೃಷಿ ಉಪಕರಣಗಳಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನ ಇನ್ನು ಮುಂತಾದ ಅನೇಕ ಉಪಕಾರಗಳನ್ನು ರೈತರಿಗಾಗಿ ಮಾಡುತ್ತಿದೆ.

ಕೆಲವೊಂದು ಸಹಕಾರಿ ಸಂಘಗಳು ಕೂಡ ರೈತನಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತಿವೆ. ಇಷ್ಟೆಲ್ಲ ಪ್ರಯೋಜನಗಳನ್ನು ದೇಶದ ರೈತರ ಸಲುವಾಗಿ ಮಾಡುತ್ತಿದ್ದರೂ ಕೂಡ ಕೆಲವು ರೈತರುಗಳು ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರ ಯಾವುದೇ ಯೋಜನೆ ಲಾಭ ಪಡೆಯಲು ಆಗುತ್ತಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಅವರು ಉಳುತ್ತಿರುವ ಭೂಮಿಯ ಪಹಣಿ ಪತ್ರದಲ್ಲಿ ಅವರ ಹೆಸರು ಇಲ್ಲದೆ ಇರುವುದು. ಈಗ ಮೇಲೆ ತಿಳಿಸಿದ ಎಲ್ಲಾ ಯೋಜನೆಗಳಿಗೂ ಕೂಡ ಅಗತ್ಯ ದಾಖಲೆಗಳಲ್ಲಿ ಒಂದಾಗಿ ರೈತನ ಜಮೀನಿನ ಪಹಣಿ ಪತ್ರವನ್ನು ಕೊಡಬೇಕಾಗಿದೆ.

ರೈತರ ಹೆಸರಲ್ಲಿ ಪಹಣಿ ಪತ್ರ ಅವನ ಹೆಸರಲ್ಲಿ ಇದ್ದಾಗ ಮಾತ್ರ ಈ ಎಲ್ಲ ಯೋಜನೆಗಳ ಲಾಭ ಅವನಿಗೆ ಸಿಗುತ್ತದೆ. ಆದರೆ ರಾಜ್ಯದ ಅನೇಕ ರೈತರುಗಳ ಹೆಸರಿನಲ್ಲಿ ಅವರ ಜಮೀನಿನ ದಾಖಲೆ ಇಲ್ಲ, ಇನ್ನು ಸಹ ಅವರ ತಾತನ ಅಥವಾ ಮುತ್ತಾತನ ಹೆಸರಿನಲ್ಲಿಯೇ ಇದ್ದು ಇವರು ಮಾತ್ರ ವ್ಯವಸಾಯ ಮಾಡುತ್ತ ಮುಂದುವರೆಯುತ್ತಿದ್ದಾರೆ. ಇಂತಹ ರೈತರಿಗಾಗಿ ರಾಜ್ಯ ಸರ್ಕಾರವು ಹೊಸ ಆಂದೋಲನವನ್ನೇ ಸೃಷ್ಟಿಸಿದೆ.

ಭೌತಿಖಾತೆ ಆಂದೋಲನ ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಮೂಲಕ ಇದುವರೆಗೆ ಕಗ್ಗಂಟಾಗಿ ಉಳಿದಿದ್ದ ರೈತರ ಈ ಜಮೀನಿನ ಸಮಸ್ಯೆಯನ್ನು ಪರಿಹಾರ ಮಾಡಲು ನಿರ್ಧರಿಸಿದೆ. ಮಾನ್ಯ ಕಂದಾಯ ಸಚಿವರಾದಂತಹ ಆರ್ ಅಶೋಕ್ ಅವರು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಮೀನಿನ ಭಾಗಗಳನ್ನು ಕೂಡ ವಿಭಾಗಿಸಿ ಅಯಾ ರೈತರುಗಳ ಹೆಸರಿಗೆ ವರ್ಗಾಯಿಸಿ, ದಾಖಲೆಗಳೆಲ್ಲಾ ರೈತನ ಹೆಸರಿಗೆ ಬರುವಂತೆ ಮಾಡಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಇದರ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಕೂಡ ಈ ಕಾರ್ಯಕ್ರಮ ಸಜ್ಜಾಗಿ ನಡೆಯುತ್ತಿದೆ. ನೀವು ಸಹ ರೈತರಾಗಿದ್ದು ಈ ರೀತಿ ನಿಮ್ಮ ಜಮೀನಿನ ದಾಖಲೆ ಇನ್ನು ನಿಮ್ಮ ತಾತಾ ಮುತ್ತಾತನ ಹೆಸರಿನಲ್ಲಿ ಇದ್ದರೆ ಶೀಘ್ರವೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ. ಸರ್ಕಾರ ಈಗ ಕೈಗೆತ್ತಿಕೊಂಡಿರುವ ಈ ಪೌತಿ ಖಾತೆ ಆಂದೋಲನ ಕಾರ್ಯಕ್ರಮದಿಂದ ರಾಜ್ಯದ ಸಾಕಷ್ಟು ರೈತರಿಗೆ ಉಪಯೋಗ ಆಗಲಿದೆ.

ಮೃ.ತ ಕಾರಣದಿಂದ ಅಥವಾ ಇನ್ನಿತರ ಕಾರಣಗಳಿಂದ ಕುಟುಂಬದ ಹಿರಿಯರ ಹೆಸರಿನಲ್ಲೇ ಇನ್ನು ಉಳಿದಿದ್ದ ಪಹಣಿ ಪತ್ರ ಅವರ ಹೆಸರಿಗೆ ವರ್ಗಾವಣೆ ಆಗಲು ಇದು ಸದಾವಕಾಶ ಆಗಿದೆ. ಎಲ್ಲರೂ ಸಹ ಇದರ ಸದುಪಯೋಗ ಪಡೆದುಕೊಂಡು ನಿಮ್ಮ ಹೆಸರಲ್ಲಿ ಪಹಣಿಪತ್ರ ಪಡೆದುಕೊಂಡರೆ ಮುಂದೆ ಬರುವ ಎಲ್ಲಾ ಯೋಜನೆಗಳ ಫಲಾನುಭವಿಗಳು ಆಗಬಹುದಾಗಿದೆ. ಈ ಉಪಯುಕ್ತ ಮಾಹಿತಿ ಹೆಚ್ಚಿನ ರೈತರಿಗೆ ತಿಳಿಯುವಂತೆ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now